ಅಂಬರೀಷ್​ ಜನ್ಮದಿನ; ಸಂಸದೆ ಸುಮಲತಾ ಅಂಬರೀಷ್ ಮಾಡುವ ಕೆಲಸಗಳೇನು?

|

Updated on: May 28, 2021 | 8:44 PM

ಕೊವಿಡ್​ ಲಾಕ್​ಡೌನ್​ ಇರುವ ಕಾರಣ ಸಮಾಧಿ ಬಳಿ ಅಭಿಮಾನಿಗಳಿಗೆ ತೆರಳಲು ಅವಕಾಶ ಇರುವುದಿಲ್ಲ. ಬೆಳಗ್ಗೆ 8-9 ಗಂಟೆವರೆಗೆ ಸಮಾಧಿ ಬಳಿ ನಮನ ಸಲ್ಲಿಸಿದ ನಂತರ ಸುಮಲತಾ ದೊಡ್ಡರಸಿನಕರೆಗೆ ತೆರಳಲಿದ್ದಾರೆ.

ಅಂಬರೀಷ್​ ಜನ್ಮದಿನ; ಸಂಸದೆ ಸುಮಲತಾ ಅಂಬರೀಷ್ ಮಾಡುವ ಕೆಲಸಗಳೇನು?
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್​ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು.
Follow us on

ಶನಿವಾರ (ಮೇ 29) ರೆಬೆಲ್​ ಸ್ಟಾರ್​ ಅಂಬರೀಷ್​​ ಜನ್ಮದಿನ. ಪರಿಸ್ಥಿತಿ ಸರಿಯಿದ್ದು, ಅವರು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅಂಬರೀಷ್​ ಈಗ ನಮ್ಮೊಂದಿಗಿಲ್ಲ. ಹೀಗಾಗಿ, ಅವರ ಪತ್ನಿ, ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್​​ ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಷ್​ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

ಕೊವಿಡ್​ ಲಾಕ್​ಡೌನ್​ ಇರುವ ಕಾರಣ ಸಮಾಧಿ ಬಳಿ ಅಭಿಮಾನಿಗಳಿಗೆ ತೆರಳಲು ಅವಕಾಶ ಇರುವುದಿಲ್ಲ. ಬೆಳಗ್ಗೆ 8-9 ಗಂಟೆವರೆಗೆ ಸಮಾಧಿ ಬಳಿ ನಮನ ಸಲ್ಲಿಸಿದ ನಂತರ ಸುಮಲತಾ ದೊಡ್ಡರಸಿನಕರೆಗೆ ತೆರಳಲಿದ್ದಾರೆ. ಬೆಳಗ್ಗೆ 11:15ರಿಂದ 11:45ರವರೆಗೆ ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ದೊಡ್ಡರಸಿನಕರೆಯೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಲತಾ ಭೇಟಿ ಮಾಡಲಿದ್ದಾರೆ. 12:45ಕ್ಕೆ ಎಂಐಎಂಎಸ್​ ಕ್ಯಾಂಪಸ್​ನಲ್ಲಿ ಆಹಾರ ವಿತರಣೆ ಮಾಡಲಿದ್ದಾರೆ. ಮಧ್ಯಾಹ್ನ ಅವರು ಊಟವನ್ನು ಮಂಡ್ಯದ ಮನೆಯಲ್ಲೇ ಮಾಡಲಿದ್ದಾರೆ. 2:15ರ ಸುಮಾರಿಗೆ ಅವರು ಪ್ರೆಸ್​ಕ್ಲಬ್​ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮದವರಿಗೆ ಕೊವಿಡ್​ ಕಿಟ್​ ವಿತರಣೆ ಮಾಡಲಾಗುತ್ತದೆ. ಅಲ್ಲದೆ, ಸುಮಲತಾ ಸುದ್ದಿಗೋಷ್ಠಿ ಕೂಡ ನಡೆಸುತ್ತಿದ್ದಾರೆ. ಮಧ್ಯಾಹ್ನ 3:15ಕ್ಕೆ ಕಾರ್ಯಕ್ರಮ ಪೂರ್ಣಗೊಳ್ಳಳಿದೆ.

ಮೇ 23ಕ್ಕೆ ಸಂಸದೆಯಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯ ಜನರಿಗೆ ಸುಮಲತಾ ಅವರು ಧನ್ಯವಾದ ಹೇಳಿದ್ದರು. ಕರೊನಾ ಸಂಕಷ್ಟದಲ್ಲೂ ಮಂಡ್ಯಕ್ಕೆ ಅವರು ಬರದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲಿ ಕರೊನಾ ಅಬ್ಬರದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ದರೂ ಅವರು ಅತ್ತ ಮುಖಮಾಡಿಲ್ಲ ಎಂದು ಜನರು ಕಿಡಿಕಾರಿದ್ದರು. ಆದರೆ, ಸುಮಲತಾ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಈಗ ಅವರೇ ಖುದ್ದಾಗಿ ಮಂಡ್ಯಕ್ಕೆ ತೆರಳುತ್ತಿದ್ದು, ಜನರ ಸಮಸ್ಯೆ ಆಲಿಸುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಟ್ರೋಲ್‌ ಮಾಡೋದೆ ಒಂದು ಬಿಸಿನೆಸ್‌. ಏನ್ಮಾಡೋಕ್ಕಾಗುತ್ತೆ : ಸುಮಲತಾ ಅಂಬರೀಶ್‌