
ಇಂದು ಪುನೀತ್ ಜನ್ಮದಿನ. ಅವರ ಅನುಪಸ್ಥಿತಿಯ ನಡುವೆಯೂ ಹಲವು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪುನೀತ್ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರ ಅಪರೂಪದ ಫೋಟೋ ಆಲ್ಬಂ ಇಲ್ಲಿದೆ.

ನಯಾಗರ ಫಾಲ್ಸ್ ಬಳಿ ತೆಗೆದಿದ್ದ ಡಾ.ರಾಜ್ ಹಾಗೂ ಪುನೀತ್ ಜತೆಯಿರುವ ಅಪರೂಪದ ಚಿತ್ರ. ಪುನೀತ್ ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಕುಟುಂಬದೊಂದಿಗೆ ಡಾ.ರಾಜ್ಕುಮಾರ್. ಇದರಲ್ಲಿ ಪುಟಾಣಿ ಪುನೀತ್ ಬಹಳಷ್ಟು ಸ್ಟೈಲಿಶ್ ಆಗಿ ನಿಂತಿದ್ದಾರೆ.

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರೊಂದಿಗೆ ಪುನೀತ್

ಡಾ.ರಾಜ್ ಅವರೊಂದಿಗೆ ಪುನೀತ್ ಇರುವ ಅಪರೂಪದ ಫೋಟೋ

ಖ್ಯಾತ ನಟ ದಿಲೀಪ್ ಅವರೊಂದಿಗೆ ಡಾ.ರಾಜ್ ಹಾಗೂ ಪುನೀತ್

ಅಂಬರೀಶ್ ಹಾಗೂ ಪುನೀತ್ ರಾಜ್ಕುಮಾರ್

ಪುನೀತ್ಗೆ ಕೈತುತ್ತು ತಿನ್ನಿಸುತ್ತಿರುವ ಪಾರ್ವತಮ್ಮ ರಾಜ್ಕುಮಾರ್, ಡಾ.ರಾಜ್ ಅಪ್ಪು ಕೈಹಿಡಿದಿದ್ದಾರೆ.

ಕಲಾವಿದರ ಕಣ್ಣಲ್ಲಿ ಡಾ.ರಾಜ್ ಹಾಗೂ ಪುನೀತ್
Published On - 9:24 am, Thu, 17 March 22