AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravi Kishan: ‘ಹಣ ಕೊಡದೇ ಎಲ್ರೂ ನನ್ನ ಬಳಸಿಕೊಂಡ್ರು’ ಎಂದ ‘ಹೆಬ್ಬುಲಿ’ ನಟ; ಈಗ 10 ಪಟ್ಟು ಸಂಬಳ ಹೆಚ್ಚಳ

‘ನಾನು ದೊಡ್ಡ ಕುಟುಂಬವನ್ನು ನೋಡಿಕೊಳ್ಳಬೇಕು. ನಾನೀಗ ದುಬಾರಿ ನಟ. ನನ್ನ ಸಂಭಾವನೆಯಲ್ಲಿ 10 ಪಟ್ಟು ಹೆಚ್ಚಾಗಿದೆ’ ಎಂದು ನಟ ರವಿ ಕಿಶನ್​ ಹೇಳಿದ್ದಾರೆ.

Ravi Kishan: ‘ಹಣ ಕೊಡದೇ ಎಲ್ರೂ ನನ್ನ ಬಳಸಿಕೊಂಡ್ರು’ ಎಂದ ‘ಹೆಬ್ಬುಲಿ’ ನಟ; ಈಗ 10 ಪಟ್ಟು ಸಂಬಳ ಹೆಚ್ಚಳ
ರವಿ ಕಿಶನ್
TV9 Web
| Edited By: |

Updated on: Jun 16, 2022 | 3:55 PM

Share

ಖ್ಯಾತ ನಟ ರವಿ ಕಿಶನ್​ (Ravi Kishan) ಅವರು ಬಹುಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಮೂಲತಃ ಭೋಜ್​ಪುರಿ ಚಿತ್ರರಂಗದವರಾದ ಅವರಿಗೆ ಎಲ್ಲ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲೂ ಬೇಡಿಕೆ ಇದೆ. ಕನ್ನಡ (Sandalwood), ತೆಲುಗು, ಹಿಂದಿ, ತಮಿಳು, ಭೋಜ್​ಪುರಿ ಚಿತ್ರಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ರವಿ ಕಿಶನ್​ ಮಾಡಿದ್ದಾರೆ. ಅದರಲ್ಲೂ ವಿಲನ್ ಪಾತ್ರಗಳಲ್ಲಿ ಅವರನ್ನು ಜನರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ರಿಯಲ್​ ಲೈಫ್​ನಲ್ಲಿ ರಾಜಕಾರಣಿ ಆಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ರಂಗದಿಂದ ಅನೇಕ ಆಫರ್​ಗಳಿದ್ದರೂ ಕೂಡ ಅವುಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ಎಲ್ಲವನ್ನೂ ಅಳೆದು-ತೂಗಿ ಒಂದೊಂದೇ ಪ್ರಾಜೆಕ್ಟ್​ಗಳಿಗೆ ಸಹಿ ಮಾಡುತ್ತಿದ್ದಾರೆ. ಅದು ಕೂಡ ಒಂದು ಕಂಡೀಷನ್​ ಮೇರೆಗೆ. ಏನದು? ಸದ್ಯ ಅವರು 10 ಪಟ್ಟು ಸಂಭಾವನೆ (Remuneration) ಹೆಚ್ಚಿಸಿಕೊಂಡಿದ್ದಾರೆ. ಅಷ್ಟು ಮೊತ್ತವನ್ನು ನೀಡಲು ನಿರ್ಮಾಪಕರ ಮುಂದೆ ಬಂದರೆ ಮಾತ್ರ ರವಿ ಕಿಶನ್​ ನಟಿಸುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ..

1992ರಿಂದಲೂ ರವಿ ಕಿಶನ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಿಂದುಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಾನು ದೊಡ್ಡ ಕುಟುಂಬವನ್ನು ನೋಡಿಕೊಳ್ಳಬೇಕು. ನಾನೀಗ ದುಬಾರಿ ನಟ. ನನ್ನ ಸಂಭಾವನೆಯಲ್ಲಿ 10 ಪಟ್ಟು ಹೆಚ್ಚಾಗಿದೆ. ನನ್ನ ಜನರಿಗಾಗಿ ಮತ್ತು ಸಮಾಜಮುಖಿ ಕೆಲಸಗಳಿಗಾಗಿ ನಾನು ಸ್ವಂತ ಹಣ ಖರ್ಚು ಮಾಡುತ್ತಿದ್ದೇನೆ’ ಎಂದು ರವಿ ಕಿಶನ್​ ಹೇಳಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

‘ನಿರ್ಮಾಪಕರಿಗೆ ನನ್ನ ಡೇಟ್ಸ್ ಬೇಕಿರುವುದರಿಂದ ಅವರು ಖುಷಿಯಿಂದ ನನಗೆ ಹಣ ನೀಡುತ್ತಿದ್ದಾರೆ. ನಾನು ಅಂದಾಜು 15 ವರ್ಷ ಉಚಿತವಾಗಿ ಕೆಲಸ ಮಾಡಿದೆ. ಯಾರೂ ನನಗೆ ಹಣ ನೀಡುತ್ತಿರಲಿಲ್ಲ. ಜನರು ನನ್ನನ್ನು ಬಳಸಿಕೊಂಡರು. ಆದರೆ ‘ತೇರೆ ನಾಮ್​’ ಸಿನಿಮಾ ಬಳಿಕ ಕಾಲ ಬದಲಾಯಿತು. ನನ್ನ ಪ್ರತಿಭೆ ಮತ್ತು ಅಭಿಮಾನಿ ಬಳಗ ಹೇಗಿದೆ ಎಂಬುದು ಜನರಿಗೆ ತಿಳಿಯಿತು’ ಎಂದು ರವಿ ಕಿಶನ್​ ಹೇಳಿದ್ದಾರೆ.

ಕಿಚ್ಚ ಸುದೀಪ್​ ಅಭಿನಯದ ‘ಹೆಬ್ಬುಲಿ’ ಸಿನಿಮಾ ಮೂಲಕ ರವಿ ಕಿಶನ್​ ಅವರು ಕನ್ನಡಕ್ಕೆ ಎಂಟ್ರಿ ನೀಡಿ ಇಲ್ಲಿನ ಪ್ರೇಕ್ಷಕರನ್ನೂ ರಂಜಿಸಿದ್ದಾರೆ. ‘ರಾಬರ್ಟ್​’, ‘ದ್ರೋಣ’, ‘ಶಿವಾರ್ಜುನ’ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್