ಶಿವಣ್ಣನಿಗೆ 13ನೇ ಶತಮಾನದ ಕಥೆ; ಸೆಂಚುರಿ ಸ್ಟಾರ್​​​ಗಾಗಿ ಪರಭಾಷೆಯಿಂದ ಬರಲಿದ್ದಾರೆ ಹೀರೋಗಳು

|

Updated on: Jul 10, 2024 | 3:03 PM

ಹೇಮಂತ್ ರಾವ್ ಅವರು ಈ ಮೊದಲು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಈಗ ಅವರು ಶಿವರಾಜ್​ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಶಿವಣ್ಣನಿಗೆ 13ನೇ ಶತಮಾನದ ಕಥೆ; ಸೆಂಚುರಿ ಸ್ಟಾರ್​​​ಗಾಗಿ ಪರಭಾಷೆಯಿಂದ ಬರಲಿದ್ದಾರೆ ಹೀರೋಗಳು
ಶಿವಣ್ಣನಿಗೆ 13ನೇ ಶತಮಾನದ ಕಥೆ; ಸೆಂಚ್ಯುರಿ ಸ್ಟಾರ್ ​​ಗಾಗಿ ಪರಭಾಷೆಯಿಂದ ಬರಲಿದ್ದಾರೆ ಹೀರೋಗಳು
Follow us on

ನಿರ್ದೇಶಕ ಹೇಮಂತ್ ರಾವ್ ಅವರು ಭಿನ್ನ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರ ಪ್ರತಿ ಸಿನಿಮಾಗಳಲ್ಲಿ ಹೊಸತನ ಇರುತ್ತದೆ. ಪ್ರತಿ ಪಾತ್ರಗಳು ತುಂಬಾನೇ ಕಾಡುತ್ತವೆ. ಥಿಯೇಟರ್​ನಿಂದ ಹೊರ ಬಂದವರಿಗೆ ಬೇರೆಯದೇ ಫೀಲ್ ಸಿಗುತ್ತದೆ. ಈಗ ಅವರು ಶಿವರಾಜ್​ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಭೈರವನ ಕೊನೆಯ ಪಾಠ’ ಎಂದು ಟೈಟಲ್ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘ಶಿವರಾಜ್​ಕುಮಾರ್ ಅಭಿಮಾನಿಯಾಗಿ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಹಿಂದೇಂದೂ ಕಾಣಿಸಿಕೊಳ್ಳದ ಲುಕ್​ನಲ್ಲಿ ಅವರನ್ನು ತೋರಿಸಬೇಕು ಎಂದಾಗ ಈ ಐಡಿಯಾ ಬಂತು. ಫ್ರೆಶ್​ ಲುಕ್ ಇರಬೇಕು ಎನ್ನುವ ಆಲೋಚನೆ ಇತ್ತು. ಪಾತ್ರದ ಗುಣಗಳು ಕೂಡ ಹಾಗೆಯೇ ಇದ್ದವು. ಐಡಿಯಾ ಮ್ಯಾಚ್ ಆಯಿತು. ಕಥೆಯನ್ನು ಶಿವರಾಜ್​ಕುಮಾರ್ ಅವರಿಗೋಸ್ಕರವೇ ಬರೆದಿದ್ದು’ ಎಂದಿದ್ದಾರೆ ಹೇಮಂತ್ ರಾವ್.

ಫೋಟೋಶೂಟ್​ನ ಯಾವುದೋ ಸ್ಟುಡಿಯೋದಲ್ಲಿ ಮಾಡಿಲ್ಲ. ಬದಲಿಗೆ ಇದಕ್ಕಾಗಿ ಸಾಕಷ್ಟು ಶ್ರಮ ಹಾಕಲಾಗಿದೆ. ‘15 ದಿನಗಳ ಹಿಂದೆ ಫೋಟೋಶೂಟ್ ಮಾಡಿಸಿದೆವು. ಚಿಕ್ಕಬಳ್ಳಾಪುರದ ಗುಡಿಬಂಡೆ ಎಂಬ ಜಾಗದಲ್ಲಿ ಫೋಟೋಶೂಟ್ ನಡೆಯಿತು. 400 ವರ್ಷಗಳ ಹಿಂದಿನ ಕೋಟೆ ಇಲ್ಲಿ ಇದೆ. ಒಟ್ಟೂ 600 ಮೆಟ್ಟಿಲು ಇದೆ. ನಮ್ಮ ಫೋಟೋಶೂಟ್ ಜಾಗಕ್ಕೆ 400 ಮೆಟ್ಟಿಲು ಏರಬೇಕಿತ್ತು. ಶಿವಣ್ಣ ಅವರು ಉತ್ಸಾಹದಿಂದ ಮೆಟ್ಟಿಲೇರಿದರು. ಇಷ್ಟೊಂದು ಸುಸ್ತು ಮಾಡಿಸಿದನಲ್ಲ ಎಂದು ನನಗೆ ಬೇಸರ ಆಯಿತು. ಆದರೆ, ಅವರಿಗೆ ಯಾವುದೇ ಬೇಸರ ಇರಲಿಲ್ಲ’ ಎಂದಿದ್ದಾರೆ ಹೇಮಂತ್ ರಾವ್.

ಈ ಸಿನಿಮಾ ಹೇಮಂತ್ ರಾವ್ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆಯಂತೆ. ಇದಕ್ಕೆ ಅವರು ಕಾರಣ ನೀಡಿದ್ದಾರೆ. ‘ಈ ವರ್ಷಾಂತ್ಯಕ್ಕೆ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ. ಬೇರೆ ಕಲಾವಿದರ ಜೊತೆ ಮಾತುಕತೆ ನಡೆಯುತ್ತಿದೆ. ಬಜೆಟ್, ವಿಷನ್ ದೃಷ್ಟಿಯಲ್ಲಿ ನೋಡೋದಾದರೆ ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಬೇರೆ ಇಂಡಸ್ಟ್ರಿಯಿಂದಲೂ ಕಲಾವಿದರೂ ಬರುತ್ತಿದ್ದಾರೆ. ಮಾತುಕತೆ ನಡೆಯುತ್ತಿದೆ. 12-13ನೇ ಶತಮಾನದಲ್ಲಿ ನಡೆಯೋ ಕಥೆ ಇದು’ ಎಂದು ಹೇಮಂತ್ ರಾವ್ ಮಾಹಿತಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಭೈರವನ ಅವತಾರದಲ್ಲಿ ಬಂದ ಶಿವಣ್ಣ; ಹಿಂದೆಂದೂ ನೋಡಿರದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ

ಇತ್ತೀಚೆಗೆ ‘ಭೈರವನ ಕೊನೆಯ ಪಾಠ’ ಟೈಟಲ್ ರಿವೀಲ್ ಮಾಡಿದ್ದಾರೆ. ಶಿವರಾಜ್​ಕುಮಾರ್ ಅವರು ಭಿನ್ನ ಗೆಟಪ್​ನಲ್ಲಿ ಬಂದಿದ್ದಾರೆ. ಸಿನಿಮಾದ ಲುಕ್ ನೋಡಿದವರಿಗೆ ಇದು ತುಂಬಾನೇ ಹಿಂದಿನ ಕಾಲದಲ್ಲಿ ನಡೆಯುವ ಕಥೆ ಅನ್ನೋದು ಮನವರಿಕೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.