ಕನ್ನಡದ ಶ್ರೀಮಂತ ನಟರಲ್ಲಿ ಸುದೀಪ್ ಕೂಡ ಒಬ್ಬರು; ಕಿಚ್ಚನ ಒಟ್ಟೂ ಆಸ್ತಿ ಎಷ್ಟು?

ಕಿಚ್ಚ ಸುದೀಪ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸುದೀಪ್ ಅವರು ಕನ್ನಡದ ಶ್ರೀಮಂತರ ನಟರಲ್ಲಿ ಒಬ್ಬರು. ಅವರು ನೂರಾರು ಕೋಟಿ ರೂಪಾಯಿಯ ಒಡೆಯ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಕನ್ನಡದ ಶ್ರೀಮಂತ ನಟರಲ್ಲಿ ಸುದೀಪ್ ಕೂಡ ಒಬ್ಬರು; ಕಿಚ್ಚನ ಒಟ್ಟೂ ಆಸ್ತಿ ಎಷ್ಟು?
ಸುದೀಪ್
Follow us
| Updated By: Digi Tech Desk

Updated on:Jul 10, 2024 | 11:46 AM

ಕಿಚ್ಚ ಸುದೀಪ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿರ್ದೇಶಕರಾಗಬೇಕು ಎಂಬ ಕನಸಿನೊಂದಿಗೆ ಬಂದ ಅವರು ಆಗಿದ್ದು ಹೀರೋ. ಆ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟರು. ನಿರ್ಮಾಪಕ ಕೂಡ ಆದರು. ಈಗಲೂ ಕಿಚ್ಚನಿಗೆ ಡೈರೆಕ್ಷನ್ ಎಂದರೆ ಹೆಚ್ಚು ಇಷ್ಟ. ಸುದೀಪ್ ಅವರು ಕನ್ನಡದ ಶ್ರೀಮಂತರ ನಟರಲ್ಲಿ ಒಬ್ಬರು. ಹಾಗಾದರೆ ಸುದೀಪ್ ಅವರ ಒಟ್ಟು ಆಸ್ತಿ ಎಷ್ಟು? ವರದಿ ಏನು ಹೇಳುತ್ತದೆ? ನೋಡೋಣ

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸುದೀಪ್ ಅವರ ಒಟ್ಟೂ ಆಸ್ತಿ ಸರಿಸುಮಾರು 125 ಕೋಟಿ ರೂಪಾಯಿ. ಸಿನಿಮಾಗಳಿಂದ, ಬ್ರ್ಯಾಂಡ್​ಗಳ ಪ್ರಚಾರದಿಂದ ಸುದೀಪ್​ಗೆ ಹಣ ಬರುತ್ತಿದೆ. ಅವರು ಐಷಾರಾಮಿ ಜೀವನ ನಡೆಸುತ್ತಾ ಇದ್ದಾರೆ. ಅವರ ಬಳಿಕ ಹಲವು ಕಾರುಗಳು ಕೂಡ ಇವೆ. ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.

ಸುದೀಪ್ ಅವರು ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಅನೇಕ ಕಡೆಗಳಲ್ಲಿ ಜಾಗ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ಸುದೀಪ್ ಅವರು ಫಾರ್ಮ್​ಹೌಸ್ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಜಾಗಗಳ ಬೆಲೆ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ.

ಸುದೀಪ್ ಅವರು ನಿರ್ಮಾಪಕ ಕೂಡ ಹೌದು. ಸುದೀಪ್ ಅವರು ‘ಕಿಚ್ಚ ಕ್ರಿಯೇಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಮೂಲಕ ಅವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಹಲವು ಚಿತ್ರಗಳಿಗೆ  ಅವರು ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ‘ನಾನು ಜೀವನದಲ್ಲಿ ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’; ಕಿಚ್ಚ ಸುದೀಪ್

ಸುದೀಪ್ ಅವರು ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಅವರು ಪ್ರತಿ ಬ್ರ್ಯಾಂಡ್​ನ ಪ್ರಚಾರ ರಾಯಭಾರಿ ಆಗಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆಯುತ್ತಾರೆ. ಸುದೀಪ್ ಅವರಿಗೆ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಟೊಯೊಟಾ ವೆಲ್​ಫೈರ್, ಲ್ಯಾಂಬೋರ್ಗಿನಿ, ಸ್ಲೀಕ್ ಹಮ್ಮರ್ 3, ಸಲ್ಮಾನ್ ಖಾನ್ ಉಡುಗೆಯಾಗಿ ನೀಡಿದ ಬಿಎಂಡಬ್ಲ್ಯೂ, ಜೀಪ್ ಕಂಪಾಸ್ ಕಾರುಗಳನ್ನು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:31 am, Wed, 10 July 24

ತಾಜಾ ಸುದ್ದಿ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು
ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್
ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಹಾವೇರಿ: ವರದಾ ನದಿ ಉಕ್ಕಿ ಸೇತುವೆ ಮುಳುಗಡೆ, ಹರಿಯುವ ನದಿಯಲ್ಲೇ ವಾಹನ ಚಾಲನೆ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕುಮಾರಸ್ವಾಮಿ ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಗಾಂಭೀರ್ಯತೆ ಇಲ್ಲ:ಡಿಕೆಶಿ
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ,ಭದ್ರೆಯಲ್ಲಿ ಹೆಚ್ಚು ನೀರು
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
ದಕ್ಷಿಣ ಕರ್ನಾಟಕ 7 ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ, ಜನಜೀವನ ಅಸ್ತವ್ಯಸ್ತ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ
Legislative Session Live: ವಿಧಾನಸಭೆ ಅಧಿವೇಶನ; ಮಧ್ಯಾಹ್ನದ ಕಲಾಪ ಆರಂಭ
ವಿದ್ಯುತ್​​ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು
ವಿದ್ಯುತ್​​ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು