Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ
ರಜಿನಿ-ದ್ವಾರಕೀಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 16, 2024 | 1:39 PM

ದ್ವಾರಕೀಶ್ (Dwarakish) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಅವರು ರಜನಿಕಾಂತ್ ಜೊತೆಗೂ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಘಟನೆ ಹಿಂದೆ ಒಂದು ಅಚ್ಚರಿಯ ವಿಚಾರ ಇದೆ. ಮೊದಲು ಕಮಲ್ ಹಾಸನ್ ಅವರ ಡೇಟ್ಸ್ ಕೇಳಿಕೊಂಡು ಹೋಗಿದ್ದರು ದ್ವಾರಕೀಶ್. ಆದರೆ, ಅವರ ಡೇಟ್ಸ್ ಸಿಗುವುದಿಲ್ಲ. ‘ನಿಮ್ಮದೇ ಹುಡುಗ ಮದ್ರಾಸ್​ಗೆ ಬಂದು ಫೇಮಸ್ ಆಗಿದ್ದಾರಲ್ಲ. ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿಗೆ ಏಕೆ ಬಂದ್ರಿ’ ಎಂದು ಕುಹಕದು ನಗು ಆಡಿದ್ದರು ಕಮಲ್ ಹಾಸನ್. ಇದರಿಂದ ರಜನಿಕಾಂತ್ ಡೇಟ್ಸ್ ಕೇಳಿದ್ದರು ದ್ವಾರಕೀಶ್. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ನಾನು ತಮಿಳುನಾಡಿಗೆ ಹೋಗಿದ್ದೆ. ಅಲ್ಲಿ ಮಣಿರತ್ನಂ ಸಹೋದರ ಜಿವಿ ಅವರು ಸ್ವಾಗತಿಸಿದರು. ಅವರು ದೊಡ್ಡ ಫೈನಾನ್ಸರ್ ಆಗಿದ್ದರು. ನಾನು ಮೊದಲು ಕಮಲ್ ಹಾಸನ್ ಮನೆಗೆ ಹೋದೆ. ಅವರು ರಜನಿಕಾಂತ್ ಉದಾಹರಣೆ ಕೊಟ್ಟು ಅಣಕಿಸಿದರು. ನಿಮ್ಮದೇ ಹುಡಗ ಇದ್ದಾನಲ್ಲ ಎಂದರು. ನನಗೆ ಅದು ಚುರುಕ್ ಎನಿಸಿತು. ಆ ಬಳಿಕ ರಜನಿಕಾಂತ್ ಬಳಿ ಹೋದೆ. ನೀವು ಹೋಗಿ ಎಂದು ನನ್ನ ಕಳಿಸಿಯೇ ಬಿಟ್ಟ’ ಎಂದು ಬಿ ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದ್ವಾರಕೀಶ್.

‘ನಾನು ಮರಳಿ ಮನೆಗೆ ಬಂದೆ. ಮಧ್ಯಾಹ್ನ ಮನೆಯ ಹತ್ತಿರ ಕಾರು ಬಂತು ನೋಡಿದ್ರೆ ರಜನಿಕಾಂತ್. ನೀವ್ಯಾಕೆ ಬಂದ್ರಿ? ಕರದ್ರೆ ನಾನೇ ಬರ್ತಿದ್ದೆ ಎಂದ. ನಾನು ಖುಷಿಯಾಗಿಬಿಟ್ಟೆ. ಡೇಟ್ ಬೇಕು ಎಂದೆ. ಆಗಲ್ಲ ಎಂದ. ಇಷ್ಟ ಬಂದಾಗೆ ಮಾಡು ಎಂದೆ. ಅಲ್ಲಿಂದ ನಡೆದ. ನಂತರ ನ್ಯಾಯ ಎಲ್ಲಿದೆ ಸಿನಿಮಾ ತೋರಿಸಿದೆ. ವಾಶ್​ರೂಂಗೆ ಹೋದಾಗ 5 ಲಕ್ಷ ಕೋಡ್ತೀಯಾ ಎಂದು ಕೇಳಿದ. ಕನ್ನಡ ಸಿನಿಮಾಕ್ಕೆ ಇಷ್ಟೆಲ್ಲ ಖರ್ಚು ಮಾಡಬೇಕಾ ಅನಿಸ್ತು. ಕೊಡ್ತೀನಿ ಎಂದೆ. ಅರೇಂಜ್ ಮಾಡಿ ಅವನಿಗೆ 5 ಲಕ್ಷ ಕೊಟ್ಟೆ. ಡೇಟ್ಸ್ ಕೊಟ್ಟೇ ಬಿಟ್ಟ’ ಎಂದಿದ್ದರು ದ್ವಾರಕೀಶ್.

ಇದನ್ನೂ ಓದಿ: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ