ಬ್ಯಾಂಕಾಕ್​ನಿಂದ ಸ್ಪಂದನಾ ಮೃತದೇಹ ತರುವ ಪ್ರಕ್ರಿಯೆ ಹೇಗಿರಲಿದೆ ಗೊತ್ತಾ? ಇಲ್ಲಿದೆ ವಿವರ

Spandana: ಬ್ಯಾಂಕಾಕ್​ನಲ್ಲಿ ​ವಿದೇಶಿ ಪ್ರಜೆಗಳು ಮೃತಪಟ್ಟರೆ ಅದಕ್ಕೆ ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ಹಾಗೆ ಪಾಲಿಸಿದ ಬಳಿಕವೇ ಮೃತದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ.

ಬ್ಯಾಂಕಾಕ್​ನಿಂದ ಸ್ಪಂದನಾ ಮೃತದೇಹ ತರುವ ಪ್ರಕ್ರಿಯೆ ಹೇಗಿರಲಿದೆ ಗೊತ್ತಾ? ಇಲ್ಲಿದೆ ವಿವರ
ವಿಜಯ್-ಸ್ಪಂದನಾ
Edited By:

Updated on: Aug 08, 2023 | 10:17 AM

ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ಅವರು ವಿದೇಶದಲ್ಲಿ ಮೃತಪಟ್ಟಿದ್ದಾರೆ. ಕುಟುಂಬದವರ ಜೊತೆ ಬ್ಯಾಂಕಾಕ್​ಗೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇದನ್ನು ಅರಗಿಸಿಕೊಳ್ಳೋಕೆ ಕುಟುಂಬದವರು ಹಾಗೂ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಪತ್ನಿಯ ಬಗ್ಗೆ ವಿಜಯ್ ಅಪಾರ ಪ್ರೀತಿ ಹೊಂದಿದ್ದರು. ಅನೇಕ ವೇದಿಕೆಗಳಲ್ಲಿ ಪತ್ನಿ ಬಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈಗ ಸ್ಪಂದನಾ (Spandana) ಅವರನ್ನು ಕಳೆದುಕೊಂಡು ಅವರು ದುಃಖಕ್ಕೆ ಒಳಗಾಗಿದ್ದಾರೆ. ಸ್ಪಂದನಾ ಅವರು ವಿದೇಶದಲ್ಲಿ ಮೃತಪಟ್ಟಿರುವುದರಿಂದ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಹಲವು ಪ್ರಕ್ರಿಯೆಗಳು ಇವೆ. ಆ ಪ್ರಕ್ರಿಯೆ ಹೇಗಿದೆ ಎಂಬುದಕ್ಕೆ ಇಲ್ಲಿದೆ ವಿವರ.

ಬ್ಯಾಂಕಾಕ್​ನಲ್ಲಿ ​ವಿದೇಶಿ ಪ್ರಜೆಗಳು ಮೃತಪಟ್ಟರೆ ಅದಕ್ಕೆ ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ಹಾಗೆ ಪಾಲಿಸಿದ ಬಳಿಕವೇ ಮೃತದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ವ್ಯಕ್ತಿ ಸತ್ತ ಬಳಿಕ ಮೊದಲು ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ತೆಗೆದುಕೊಳ್ಳುತ್ತಾರೆ. ಸಾವಿಗೆ ಕಾರಣ ಏನು ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ. ಇದು ಸಹಜಸಾವು ಎಂದು ತಿಳಿದ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಆಗುತ್ತದೆ.

ಕುಟುಂಬದವರು ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ, ಪೊಲೀಸ್ ರಿಪೋರ್ಟ್ ಪಡೆದಿರಬೇಕು. ಮೃತರ ಪಾಸ್​ಪೋರ್ಟ್​, ವೀಸಾ ಪ್ರತಿ ಜೊತೆಗಿರಬೇಕು. ಇದನ್ನು ಥಾಯ್ಲೆಂಡ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಬಳಿಕ ಈ ವರದಿಗಳನ್ನು ಏರ್​​ಪೋರ್ಟ್​​ನಲ್ಲಿ ಸಲ್ಲಿಸಬೇಕು. ಆ ಬಳಿಕವೇ ಥೈಲ್ಯಾಂಡ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮೃತದೇಹ ಹಸ್ತಾಂತರ ಮಾಡಬಹುದು.

ಇದನ್ನೂ ಓದಿ: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಇಂದು (ಆಗಸ್ಟ್ 8) ರಾತ್ರಿ ವೇಳೆಗೆ ಸ್ಪಂದನಾ ಮೃತದೇಹ ಭಾರತಕ್ಕೆ ರವಾನೆ ಆಗಲಿದೆ. ನಾಳೆ (ಆಗಸ್ಟ್ 9) ಮಧ್ಯಾಹ್ನ ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ತಂದೆ ಬಿ.ಕೆ. ಶಿವರಾಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ