ಸಿನಿಮಾಗಳಲ್ಲಿ ವಿಎಫ್ಎಕ್ಸ್, ಸೌಂಡ್ ಡಿಸೈನ್, ಕ್ಯಾಮೆರಾ ವರ್ಕ್ನಲ್ಲಿ ಗುಣಮಟ್ಟ ಇನ್ನಿತರೆ ವಿಷಯ ಮಹತ್ವ ಇತ್ತೀಚೆಗೆ ಹೆಚ್ಚು ಅರ್ಥವಾಗಿದೆ ದಕ್ಷಿಣ ಭಾರತದ ಚಿತ್ರರಂಗದವರಿಗೆ. ಮೊದಲೆಲ್ಲ ಕತೆ, ಫೈಟಿಂಗ್, ಹಾಡು ಇವುಗಳ ಮೇಲಷ್ಟೆ ಹೆಚ್ಚಿನ ಗಮನ ಕೊಡಲಾಗುತ್ತಿತ್ತು, ಈಗ ಮೇಕಿಂಗ್ ಬಗೆಗೂ ಸಮಾನ ಪ್ರಾಧಾನ್ಯತೆ ನೀಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಹಾಲಿವುಡ್ನ ಅತ್ಯುತ್ತಮ ತಂತ್ರಜ್ಞಾನ ನಿಪುಣರನ್ನು ಭಾರತಕ್ಕೆ ಕರೆತರಾಗುತ್ತಿದೆ. ಅಥವಾ ಹಾಲಿವುಡ್ನ (Hollywood) ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತಿದೆ. ಇದೀಗ ‘ಕಾಂತಾರ ಚಾಪ್ಟರ್ 1’ಗೆ ಸಹ ಹಾಲಿವುಡ್ ಸಂಸ್ಥೆಯ ನೆರವನ್ನು ರಿಷಬ್ ಶೆಟ್ಟಿ (Rishab Shetty) ಪಡೆಯುತ್ತಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ಸೆಟ್, ಮೇಕಪ್, ಕಲರ್ ಗ್ರೇಡಿಂಗ್ ಇನ್ನಿತರೆ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದ ರಿಷಬ್ ಶೆಟ್ಟಿ, ‘ಕಾಂತಾರ ಚಾಪ್ಟರ್ 1’ ಸಿನಿಮಾವನ್ನು ತಾಂತ್ರಿಕವಾಗಿಯೂ ಅದ್ಧೂರಿಗೊಳಿಸಲು ಸಜ್ಜಾಗಿದ್ದಾರೆ. ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ವಿಎಫ್ಎಕ್ಸ್ ಬಳಕೆ ಹೆಚ್ಚಾಗಿರಲಿದ್ದು, ಇದೇ ಕಾರಣಕ್ಕೆ ಹಾಲಿವುಡ್ನ ನಿಪುಣ, ಅನುಭವಿ ಸಂಸ್ಥೆಯೊಂದರೊಟ್ಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:‘ಕಾಂತಾರ 2’ ಯಶಸ್ಸು ಕೋರಿ ರಿಷಬ್ ಶೆಟ್ಟಿ ಮತ್ತು ಕುಟಂಬದಿಂದ ವಿಶೇಷ ಪೂಜೆ
ಜನಪ್ರಿಯ ಸಿನಿಮಾಗಳಾದ ‘ಕ್ರಾನಿಕಲ್ಸ್ ಆಫ್ ನಾರ್ನಿಯ’, ಆಸ್ಕರ್ ವಿಜೇತ ‘ದಿ ಲಯನ್ ಕಿಂಗ್’ ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿರುವ ಮೂವಿಂಗ್ ಪಿಕ್ಚರ್ಸ್ ಕಂಪೆನಿ ‘ಕಾಂಪಾರ ಚಾಪ್ಟರ್ 1’ ಸಿನಿಮಾದ ವಿಎಫ್ಎಕ್ಸ್ ಮಾಡಿಕೊಡಲಿದೆ. ಈ ಸಂಸ್ಥೆ ಹಾಲಿವುಡ್ನ ಹಲವು ಅತ್ಯುತ್ತಮ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿದೆ. ‘ಹ್ಯಾರಿ ಪಾಟರ್’, ‘ಬ್ಯಾಟ್ಮ್ಯಾನ್’, ‘ಶೆರ್ಲಾಕ್ ಹೋಮ್ಸ್’ ಇನ್ನೂ ಹಲವಾರು ಸಿನಿಮಾಗಳಿಗೆ ಈ ಸಂಸ್ಥೆ ಕೆಲಸ ಮಾಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾವು ಪೌರಾಣಿಕ ಕತೆಯನ್ನು ಹೊಂದಿದ್ದು, ಈಗಾಗಲೇ ಬಿಡುಗಡೆ ಆಗಿರುವ ‘ಕಾಂತಾರ’ ಸಿನಿಮಾ ನಡೆದ ಕಾಲಘಟ್ಟಕ್ಕಿಂತಲೂ ನೂರಾರು ವರ್ಷಗಳ ಹಿಂದಿನ ಕತೆಯನ್ನು ಒಳಗೊಂಡಿದೆ. ಹಾಗಾಗಿ ಈ ಸಿನಿಮಾನಲ್ಲಿ ವಿಎಫ್ಎಕ್ಸ್ನ ಬಳಕೆ ಹೆಚ್ಚಿಗಿದ್ದು, ವಿಎಫ್ಎಕ್ಸ್ ದೃಶ್ಯಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕೆಂಬ ಕಾರಣದಿಂದ ಹಾಲಿವುಡ್ ಸಂಸ್ಥೆಯ ನೆರವನ್ನು ಪಡೆಯಲಾಗುತ್ತಿದೆ. ‘ಕಾಂತಾರ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಹೊಂಬಾಳೆ ಸಂಸ್ಥೆಯೇ ‘ಕಾಂತಾರ ಚಾಪ್ಟರ್ 1’ಗೆ ಸಹ ಬಂಡವಾಳ ಹೂಡಿದ್ದು, ದೊಡ್ಡ ಬಜೆಟ್ ಅನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ