ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮದಲ್ಲಿ ಖ್ಯಾತ ಹಾಲಿವುಡ್ ಗಾಯಕಿಯ ಪ್ರದರ್ಶನ

ಮುಖೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿಯ ವಿವಾಹ ಜುಲೈನಲ್ಲಿ ನಡೆಯಲಿದ್ದು, ಅದಕ್ಕಾಗಿ ಅದ್ಧೂರಿ ಪ್ರೀ ವೆಡ್ಡಿಂಗ್ ಸಂಭ್ರಮ ಆಯೋಜಿಸಲಾಗಿದೆ. ಮೊದಲನೇ ಪ್ರೀ ವೆಡ್ಡಿಂಗ್ ಸಂಭ್ರಮ ಮುಗಿದಿದ್ದು, ಇದೀಗ ಎರಡನೇ ಪ್ರೀ ವೆಡ್ಡಿಂಗ್ ಸಂಭ್ರಮ ಸೆಲೆಬ್ರಿಟಿ ಕ್ರೂಸ್​ನಲ್ಲಿ ನಡೆಯುತ್ತಿದೆ. ಅಂತರಾಷ್ಟ್ರೀಯ ತಾರೆಯರು ಇದರಲ್ಲಿ ಪ್ರದರ್ಶನ ನೀಡುತ್ತದ್ದಾರೆ.

ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮದಲ್ಲಿ ಖ್ಯಾತ ಹಾಲಿವುಡ್ ಗಾಯಕಿಯ ಪ್ರದರ್ಶನ
Follow us
|

Updated on: Jun 02, 2024 | 8:24 AM

ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್​ರ (Radhika merchant) ವಿವಾಹ ಭಾರತದ ಈ ವರೆಗಿನ ಅತಿದೊಡ್ಡ ವಿವಾಹವಾಗಿದೆ. ವಿವಾಹ ಪೂರ್ವ (ಪ್ರೀ ವೆಡ್ಡಿಂಗ್) ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ಹಣವನ್ನು ಮುಖೇಶ್ ಅಂಬಾನಿ ಖರ್ಚು ಮಾಡುತ್ತಿದ್ದಾರೆ. ಕಳೆದ ತಿಂಗಳು ರಾಜಸ್ಥಾನದ ಜೈಪುರದಲ್ಲಿ ಒಂದು ಅದ್ಧೂರಿ ಪ್ರೀ ವೆಡ್ಡಿಂಗ್ ಸಂಭ್ರಮ ಮುಗಿಸಿರುವ ಅಂಬಾನಿ ಕುಟುಂಬ ಇದೀಗ ಮತ್ತೊಂದು ಭಾರಿ ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ವಿದೇಶದಲ್ಲಿ ಮಾಡುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಂಗೀತ ಲೋಕದ ಟಾಪ್ ತಾರೆಯರನ್ನು ಪ್ರೀ ವೆಡ್ಡಿಂಗ್​ಗೆ ಪ್ರದರ್ಶಿನ ನೀಡಲು ಕರೆಸಲಾಗಿದೆ.

ಭಾರತದಲ್ಲಿ ಶೋ ನಡೆದಾಗ, ಖ್ಯಾತ ಗಾಯಕಿಯರಾದ ರಿಹಾನಾ, ಎಕಾನ್ ಇನ್ನೂ ಕೆಲವು ವಿದೇಶಿ ಪರ್ಫಾಮರ್​ಗಳನ್ನು ಕರೆಸಲಾಗಿತ್ತು. ಬಾಲಿವುಡ್ ಸೆಲೆಬ್ರಿಟಿಗಳು, ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇನ್ನೂ ಜಗತ್ತಿನ ಹಲವಾರು ಪ್ರಮುಖ ವ್ಯಕ್ತಿಗಳು ಸಹ ಆಗಮಿಸಿದ್ದರು. ಈಗ ಎರಡನೇ ಪ್ರೀ ವೆಡ್ಡಿಂಗ್ ಸಂಭ್ರಮ ವಿದೇಶದಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ಆರಂಭವಾದ ಈ ಸಂಭ್ರಮಕ್ಕೆ ಖ್ಯಾತ ಗಾಯಕಿ ಕೇಟಿ ಪೆರ್ರಿಯನ್ನು ಕರೆಸಲಾಗಿತ್ತು.

‘ಫೈಯರ್​ವರ್ಕ್’ ಸೇರಿದಂತೆ ಇನ್ನೂ ಹಲವು ಸೂಪರ್-ಡೂಪರ್ ಹಿಟ್ ಹಾಡುಗಳನ್ನು ಹಾಡಿರುವ ಕೇಟಿ ಪೆರ್ರಿ. ಪ್ರೀ ವೆಡ್ಡಿಂಗ್​ನಲ್ಲಿ ಅದ್ಧೂರಿ ಪ್ರದರ್ಶನ ನೀಡಿದ್ದಾರೆ. ಪ್ರೀ ವೆಡ್ಡಿಂಗ್​ಗೆ ಆಗಮಿಸಿದ್ದ ಅತಿಥಿಗಳು ಪೆರ್ರಿಯ ಹಾಡಿಗೆ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ಕೇಟಿ ಪೆರ್ರಿ ವೇದಿಕೆ ಮೇಲೆ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡುತ್ತಿರುವ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗಿವೆ. ಕೇಟಿ ಪೆರ್ರಿ ಮಾತ್ರವೇ ಅಲ್ಲದೆ, ಬ್ಯಾಕ್​ ಸ್ಟ್ರೀಟ್ ಬಾಯ್ಸ್ ತಂಡವನ್ನೂ ಕರೆಸಿ ಪ್ರದರ್ಶನ ಕೊಡಿಸಲಾಗಿದೆ.

ಇದನ್ನೂ ಓದಿ:Video Viral: ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗು ಹೇಗಿದೆ ನೋಡಿ

ಅಂದಹಾಗೆ ಅನಂತ್-ರಾಧಿಕಾರ ಈ ಎರಡನೇ ಪ್ರೀ ವೆಡ್ಡಿಂಗ್ ಸಂಭ್ರಮ ಕಾನ್​ನಲ್ಲಿ ನಡೆಯುತ್ತಿದೆ. ಸೆಲೆಬ್ರಿಟಿ ಕ್ರೂಸ್​ನಲ್ಲಿ ಸಾಗರದ ಮಧ್ಯೆ ಈ ಪ್ರೀ ವೆಡ್ಡಿಂಗ್ ನಡೆಯುತ್ತಿದ್ದು, ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ‘ದಿ ರಾಮೇಶ್ವರಮ್ ಕೆಫೆ’ ಈ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್​ನಲ್ಲಿ ದಕ್ಷಿಣ ಭಾರತದ ಆಹಾರವನ್ನು ಸರ್ವ್ ಮಾಡಲಿದೆ. ಇನ್ನೂ ಹಲವಾರು ಅತ್ಯಂತ ಪ್ರತಿಷ್ಠಿತ ಹೋಟೆಲ್ ಗಳವರು ಈ ಪ್ರೀ ವೆಡ್ಡಿಂಗ್​ನಲ್ಲಿ ಆಹಾರ ಸರಬರಾಜು ಮಾಡುತ್ತಿದ್ದಾರೆ.

ಅನಂತ್ ಅಂಬಾನಿ, ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕೊನೆಯ ಮಗ ಆಗಿದ್ದು, ಇವರ ವಿವಾಹವನ್ನು ಮುಖೇಶ್ ಅಂಬಾನಿ ಭಾರಿ ಜೋರಾಗಿ ಮಾಡುತ್ತಿದ್ದಾರೆ. ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್​ರನ್ನು ವಿವಾಹವಾಗುತ್ತಿದ್ದಾರೆ. ವಿವಾಹ ಕಾರ್ಯಕ್ರಮ ಜುಲೈ 12 ರಂದು ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ