‘ಕಾಂತಾರ 2’ ಯಶಸ್ಸು ಕೋರಿ ರಿಷಬ್ ಶೆಟ್ಟಿ ಮತ್ತು ಕುಟಂಬದಿಂದ ವಿಶೇಷ ಪೂಜೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಯಶಸ್ಸು ಕೋರಿ ಗೋಕರ್ಣದ ಮಹಾಗಣಪತಿ ಮಹಾಬಲೇಶ್ವರ ದೇವಾಲಯ ಕುಟುಂಬದೊಟ್ಟಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ ರಿಷಬ್.

ಮಂಜುನಾಥ ಸಿ.
|

Updated on: Jun 06, 2024 | 5:11 PM

ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿರುವ ‘ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸೂಪರ್ ಹಿಟ್ ಆಗಿದೆ. ಈಗ ‘ಕಾಂತಾರ ಚಾಪ್ಟರ್ 1’ ಬಗ್ಗೆ ನಿರೀಕ್ಷೆಗಳು ಬೆಟ್ಟದಷ್ಟಾಗಿದೆ.

1 / 6
‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಈಗಾಗಲೇ ಪ್ರಾರಂಭ ಮಾಡಿದ್ದು, ಚಿತ್ರೀಕರಣ ನಿಧಾನವಾಗಿ ಸಾಗುತ್ತಿದೆ. ರಿಷಬ್ ಶೆಟ್ಟರು ಪರಿಪೂರ್ಣ ಶ್ರಮ ಹಾಕಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

2 / 6
ಇದರ ನಡುವೆ ಹಲವು ದೇವಾಲಯಗಳಿಗೆ, ದೈವ ಸ್ಥಾನಗಳಿಗೂ ಭೇಟಿ ನೀಡಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಯಶಸ್ಸಿಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳಲ್ಲಿ ತೊಡಗಿದ್ದಾರೆ.

3 / 6
ಇದೀಗ ರಿಷಬ್ ಶೆಟ್ಟಿ ತಮ್ಮ ಪತ್ನಿ ಹಾಗೂ ಮಕ್ಕಳೊಟ್ಟಿಗೆ ಗೋಕರ್ಣದ ಮಹಾಗಣಪತಿ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

4 / 6
ರಿಷಬ್​ರ ಗೆಳೆಯ ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬ ಸಹ ಸಮೀಪದಲ್ಲಿಯೇ ಇದ್ದು, ಗೆಳೆಯನ ಹೆಸರಿನಲ್ಲಿಯೂ ಸಹ ಸಂಕಲ್ಪವನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ.

5 / 6
ದೇವಾಲಯದ ಅರ್ಚಕ ರಾಜಗೋಪಾಲ್ ನೇತೃತ್ವದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ರಿಷಬ್ ಮಾಡಿದ್ದಾರೆ. ಪೂಜಾರಿಗಳು ಸಹ ರಿಷಬ್ ಶೆಟ್ಟರಿಗೆ ಶುಭ ಹಾರೈಸಿದ್ದಾರೆ.

6 / 6
Follow us