‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಅವರು ಇತ್ತೀಚೆಕೆಗೆ ಕಿರಿಕ್ ಮಾಡಿಕೊಳ್ಳೋದು ಹೆಚ್ಚಿದೆ. ಅದರಲ್ಲೂ ದರ್ಶನ್ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಾ, ಅವರ ಅಭಿಮಾನಿಗಳನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಅನೇಕರು ಪ್ರಚೋದನೆಗೊಳ್ಳುತ್ತಿದ್ದು, ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಈಗ ಅವರ ಕಾರಿನ ಮೇಲೆ ದಾಳಿ ಆಗಿದೆ. ಈ ವೇಳೆ ಅವರು ರಕ್ತ ಸಿಕ್ತರಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೋರಿಸಿದ್ದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಘಟನೆ ಸಂಬಂಧ ಪ್ರತಿಕ್ರಿಯಿಸುವಾಗ ಅವರು ಆವಾಜ್ ಹಾಕಿದ್ದರು. ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದಿದ್ದರು.
ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಗದೀಶ್ ಅವರ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅದೇ ಸ್ಥಿತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ‘ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು. ಇಡೀ ಕುಟುಂಬ ಮೇಲೆ ದಾಳಿ ಆಯ್ತು. ಸಿಎಂ ಸಿದ್ದರಾಮಯ್ಯ ಏನು ಮಾಡ್ತಿದೀಯಾ? ಇದೇನಾ ಕರ್ನಾಟಕ’ ಎಂದು ಜಗದೀಶ್ ಅವರು ಪ್ರಶ್ನೆ ಮಾಡಿದ್ದಾರೆ. ಈ ರಾಜ್ಯವನ್ನು ಟೆರರಿಸ್ಟ್ ಸ್ಟೇಟ್ ಎಂದು ಅವರು ಕರೆದಿದ್ದಾರೆ.
ಇದನ್ನೂ ಓದಿ: ಜಗದೀಶ್ ಮೇಲೆ ಮತ್ತೆ ಹಲ್ಲೆ, ರಕ್ತ ಸಿಕ್ತನಾಗಿ ಲೈವ್ ಬಂದ ವಕೀಲ
‘ನನ್ನ ಗನ್ ಮ್ಯಾನ್ನ ದೊಣ್ಣೆ ಮಚ್ಚಲ್ಲಿ ಹೊಡೆದರು. ಕರ್ನಾಟಕ ಇದನ್ನು ನೋಡಬೇಕು. ಪ್ರಾಣ ಹೋದರೂ ತೊಂದರೆ ಇಲ್ಲ. ನಾವು ಪ್ರಾಣ ಭಿಕ್ಷೆ ಬೀರಲ್ಲ. ನಮಗೆ ಸಮಸ್ಯೆ ಇಲ್ಲ’ ಎಂದಿದ್ದಾರೆ ಜಗದೀಶ್. ಕಾರಿನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋದಲ್ಲಿ ಪೊಲೀಸರು ಬಂದು ತಪ್ಪಿಸಲು ಪ್ರಯತ್ನಿಸಿದರೂ ಹಲ್ಲೆ ಮಾಡುವವರು ಕೇರ್ ಮಾಡಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.