ಕಾಂಗ್ರೆಸ್​ ಸೇರಿದ ಮೇಲೆ ನಾಲ್ಕು ನಿವೇಶನ ಮಾರಾಟ ಮಾಡಿದೆ- ಜಗ್ಗೇಶ್​​ ಬೇಸರ

|

Updated on: Mar 29, 2021 | 7:52 PM

ನಾನು ಕಾಂಗ್ರೆಸ್​ನ ಕಾರ್ಯದರ್ಶಿ ಕೂಡ ಆದೆ. ವೇದಿಕೆ ಮೇಲೆ ಕೂರುವುದಕ್ಕೆ ಹೆಮ್ಮೆ ಆಗುತ್ತಿತ್ತು. ಚುನಾವಣೆ ಅಖಾಡಕ್ಕೆ ಇಳಿದಾಗ ನಿಜಾಂಶ ಗೊತ್ತಾಗಿತ್ತು ಎಂದು ಜಗ್ಗೇಶ್​  ಕಾಂಗ್ರೆಸ್​ನಲ್ಲಿದ್ದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್​ ಸೇರಿದ ಮೇಲೆ ನಾಲ್ಕು ನಿವೇಶನ ಮಾರಾಟ ಮಾಡಿದೆ- ಜಗ್ಗೇಶ್​​ ಬೇಸರ
ನಟ ಜಗ್ಗೇಶ್​
Follow us on

ನಟ ಜಗ್ಗೆಶ್​ ರಾಜಕೀಯದಲ್ಲೂ ಆ್ಯಕ್ಟಿವ್​ ಆಗಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಸೇರುವುದಕ್ಕೂ ಮೊದಲು ಜಗ್ಗೇಶ್​ ಕಾಂಗ್ರೆಸ್​ನಲ್ಲಿದ್ದರು. ಅವರು ರಾಜಕೀಯ ಬದುಕು ಆರಂಭಿಸಿದ್ದು ಕಾಂಗ್ರೆಸ್​ನಿಂದಲೇ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಮೊಟ್ಟ ಮೊದಲ ಬಾರಿಗೆ ಜಗ್ಗೇಶ್​ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದರು. ಆದರೆ, ಕಾಂಗ್ರೆಸ್ ಸೇರಿದ್ದರ ಬಗ್ಗೆ ಜಗ್ಗೇಶ್​ ಬೇಸರ ಹೊರ ಹಾಕಿದ್ದು, ಚುನಾವಣೆಗೆ ನಿಂತು ನಾಲ್ಕು ನಿವೇಶನ ಮಾರಾಟ ಮಾಡಿದ್ದೆ ಎಂದಿದ್ದಾರೆ.

ಬಿಜೆಪಿಯಿಂದ ಆಯೋಜನೆಗೊಂಡಿದ್ದ ‘ಮಾಧ್ಯಮ-ಮಂಥನ’ ಕಾರ್ಯಕ್ರಮದಲ್ಲಿ ಜಗ್ಗೇಶ್​ ಈ ವಿಚಾರ ಹೇಳಿಕೊಂಡಿದ್ದಾರೆ. ನಾನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದಾಗ ಬೆಳಗಿನ ಒಂದು ಹೊತ್ತಿನ ಪ್ರಚಾರಕ್ಕೆ ಬರೋಬ್ಬರಿ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದೆ. ಚಿತ್ರರಂಗದಿಂದ ದುಡಿದ ಹಣದಲ್ಲಿ ನಾಲ್ಕು ನಿವೇಶನ ಖರೀದಿ ಮಾಡಿದ್ದೆ. ಚುನಾವಣೆಗೆ ಸ್ಪರ್ಧೆ ಮಾಡಿದ ಮೇಲೆ ಇದನ್ನೆಲ್ಲ ಮಾರಾಟ ಮಾಡಬೇಕಾಗಿ ಬಂದಿತ್ತು. ಟೀ ಪುಡಿ ತರುವುದಕ್ಕೂ ನನ್ನ ಬಳಿ ದುಡ್ಡು ಇರಲಿಲ್ಲ. ಆಗ ಯಾರೂ ಕೂಡ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಜಗ್ಗೇಶ್​ ಬೇಸರ ಹೊರ ಹಾಕಿದ್ದಾರೆ.

ನನ್ನನ್ನು ಕಾಂಗ್ರೆಸ್​ಗೆ ಕರೆ ತಂದಿದ್ದು ಡಿ.ಕೆ. ಶಿವಕುಮಾರ್​ ಅವರು. ನಾನು ಕಾಂಗ್ರೆಸ್​ನ ಕಾರ್ಯದರ್ಶಿ ಕೂಡ ಆದೆ. ವೇದಿಕೆ ಮೇಲೆ ಕೂರುವುದಕ್ಕೆ ಹೆಮ್ಮೆ ಆಗುತ್ತಿತ್ತು. ಚುನಾವಣೆ ಅಖಾಡಕ್ಕೆ ಇಳಿದಾಗ ನಿಜಾಂಶ ಗೊತ್ತಾಗಿತ್ತು ಎಂದು ಜಗ್ಗೇಶ್​  ಕಾಂಗ್ರೆಸ್​ನಲ್ಲಿದ್ದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು, ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡಿಕೆಶಿ ಅವರು, ನನ್ನಗೆ ಆತ್ಮೀಯ ಗೆಳೆಯ. ಸಿಡಿ ಪ್ರಕರಣದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಇದನ್ನೂ ಒದಿ: ‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು’ ಹಾಡು ಹೇಳಿ, ಎಲ್ಲರಿಗೂ ಇದೊಂದು ಪದವೇ ಸಾಕು ಎಂದ ನಟ ಜಗ್ಗೇಶ್