‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್

ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್
ಸುದೀಪ್​-ಸಂತೋಷ್

Updated on: Dec 16, 2023 | 7:08 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳಿಗೆ ಸಖತ್ ಸರ್​ಪ್ರೈಸ್ ಇತ್ತು. ಸ್ಪರ್ಧಿಗಳು ಹಸಿದುಕೊಂಡಿದ್ದಾಗ ಸುದೀಪ್ ಕಡೆಯಿಂದ ಲೆಟರ್ ಬಂತು. ಆ ಬಳಿಕ ಊಟ ಕೂಡ ಬಂತು. ಇದನ್ನು ಮನೆಯವರು ನೋಡಿ ಸಖತ್​ ಸರ್​ಪ್ರೈಸ್​ಗೆ ಒಳಗಾದರು. ಆ ಬಳಿಕ ಸುದೀಪ್ (Sudeep) ಅವರು ಮನೆಯವರ ಜೊತೆ ಮಾತನಾಡಿದ್ದಾರೆ. ಈ ಎಪಿಸೋಡ್ ಎಲ್ಲರ ಗಮನ ಸೆಳೆದಿದೆ. ಸುದೀಪ್ ಮಾಡಿದ ಅಡುಗೆ ತಿಂದು ಮನೆ ಮಂದಿ ಒಮ್ಮೆ ಭಾವುಕರಾಗಿದ್ದಾರೆ. ವರ್ತೂರು ಸಂತೋಷ್​ ಅವರ ಕಾಲನ್ನು ಸುದೀಪ್ ಎಳೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ಸಿಗುತ್ತಾ ಇರುತ್ತದೆ. ಇದರ ಜೊತೆಗೆ ಸರ್​ಪ್ರೈಸ್ ಕೂಡ ಸಿಗುತ್ತದೆ. ಈ ಬಾರಿ ಸ್ಪರ್ಧಿಗಳಿಗೆ ಸಿಕ್ಕ ಸರ್​ಪ್ರೈಸ್ ಸ್ವಲ್ಪ ದೊಡ್ಡದೇ ಇತ್ತು. ಸುದೀಪ್ ಅವರು ಪ್ರತೀ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

ಎಲ್ಲರ ಹೆಸರನ್ನೂ ಕರೆದು ಸುದೀಪ್ ಮಾತನಾಡಿದರು. ಸುದೀಪ್ ಎಲ್ಲವನ್ನೂ ಹೇಳಿದ ಬಳಿಕ ವರ್ತೂರು ಸಂತೋಷ್​​ಗೆ ತಮ್ಮ ಹೆಸರನ್ನು ಕರೆದೇ ಇಲ್ಲ ಎನ್ನುವ ಅನುಮಾನ ಮೂಡಿತು. ‘ನನ್ನ ಹೆಸರನ್ನು ಸುದೀಪ್ ಕರೆದೇ ಇಲ್ಲ’ ಎಂದು ಬೇಸರ ಮಾಡಿಕೊಂಡರು. ‘ವರ್ತೂರು ಅವರೇ’ ಎಂದರು ಸುದೀಪ್. ‘ನಾವು ರೈತರನ್ನು ಮರೆಯಲ್ಲ. ಮುದ್ದೆ ಕಳುಹಿಸಿಲ್ಲ ಎಂದು ಬೇಸರಗೊಳ್ಳಬೇಡಿ. ನೀವು ಮುದ್ದೆ ತಿನ್ನೋ ರೈತ ಅಲ್ಲ ಅನ್ನೋದು ನನಗೆ ಗೊತ್ತು’ ಎಂದರು ಸುದೀಪ್. ಇದನ್ನು ಕೇಳಿ ಮನೆ ಮಂದಿ ನಕ್ಕರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಶುಕ್ರವಾರ (ಡಿಸೆಂಬರ್ 15) ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್​ನ ಯಾವಾಗ ಬೇಕಾದರೂ ನೋಡಬಹುದು. ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us