
ಕಿಚ್ಚ ಸುದೀಪ್ (Sudeep) ಅವರು ಇತ್ತೀಚೆಗೆ ಹುಬ್ಬಳ್ಳಿ ಈವೆಂಟ್ನಲ್ಲಿ ನೀಡಿದ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ಅವರು ನಿಜಕ್ಕೂ ಮಾತನಾಡಿದ್ದು ಯಾವ ವಿಷಯದ ಬಗ್ಗೆ ಎಂಬ ಚರ್ಚೆ ನಡೆಯಿತು. ಆ ಬಳಿಕ ಅವರು ಇದು ಪೈರಸಿ ಬಗ್ಗೆ ನೀಡಿದ ಹೇಳಿಕೆ ಎಂದು ಸ್ಪಷ್ಟಪಡಿಸಿದರು. ಆದರೆ, ಕೆಲವರು ಇದು ದರ್ಶನ್ ಅಭಿಮಾನಿಗಳ ಬಗ್ಗೆ ನೀಡಿದ ಹೇಳಿಕೆ ಎಂದುಕೊಂಡಿದ್ದಾರೆ. ಈ ವಿಷಯದ ಕುರಿತು ಸುದೀಪ್ ಮಾತನಾಡಿದ್ದಾರೆ.
‘ನನಗೆ ವಾರ್ ಇಷ್ಟ ಇಲ್ಲ. ಯಾರು ಏನೇ ಹೇಳಿದ್ದರು ಅಲ್ಲಿಯೇ ಹೋಗಿ ನೀವು ಯಾರಿಗೆ ಹೇಳಿದ್ದು ಎಂದು ಕೇಳಬೇಕು. ನಾನು ಯಾರಿಗೆ ಹೇಳಿದ್ದು ಎಂದು ಸ್ಪಷ್ಟಪಡಿಸಿದ್ದೇನೆ. ಅವರು ಹೇಳಿದ್ದು ಯಾರಿಗೆ ಎಂದು ಸ್ಪಷ್ಟಪಡಿಸಲಿ’ ಎಂದು ಕಿಚ್ಚ ಸುದೀಪ್ ಅವರು ನೇರವಾಗಿ ಹೇಳಿದರು.
ದರ್ಶನ್ ಹಾಗೂ ಸುದೀಪ್ ಮೊದಲು ಗೆಳೆಯರಾಗಿದ್ದವರು. ಆ ಬಳಿಕ ಬೇರೆ ಆದರು. ಇವರು ಬೇರೆ ಆಗಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇಬ್ಬರ ಮಧ್ಯೆ ಬಿರುಕಂತೂ ಇದೆ. ಹಾಗಂದ ಮಾತ್ರಕ್ಕೆ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಎನ್ನುತ್ತಾರೆ ಸುದೀಪ್. ‘ಇತಿಹಾಸ ಕೆದಕಿ ನೋಡಿ. ಆ ವ್ಯಕ್ತಿ ಬಗ್ಗೆ ನಾನು ಎಂದಾದರೂ ಕೆಟ್ಟದಾಗಿ ಮಾತನಾಡಿದ್ದು ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದರು ಸುದೀಪ್.
‘ಆಗಲೇ ಕೆಟ್ಟದಾಗಿ ಮಾತನಾಡಿಲ್ಲ ಎಂದರೆ ಈಗೇಕೆ ಮಾತನಾಡುತ್ತೇನೆ. ನಂದು ಬೇರೆ ಕಡೆ ಇದೆ. ಏನೇನೋ ಮಾತನಾಡಿಕೊಂಡು ಇರೋಕೆ ನಾನು ದಡ್ಡ ಅಲ್ಲ. ನಾನು ಅಂದು ಕಾಫಿ ಮಾತ್ರ ಕುಡಿದಿದ್ದೆ’ ಎಂದರು ಸುದೀಪ್.
ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್
‘ಆಗು ಹೋಗುಗಳ ಬಗ್ಗೆ ನನಗೆ ನೋವಿದೆ. ಹಾಗಾಗಬಾರದಿತ್ತು ಎಂಬುದನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ಅವರ ಅಭಿಮಾನಿಗಳ ನೋವಿನಲ್ಲಾದ್ದಾರೆ ಎಂಬುದು ಗೊತ್ತು. ಆ ವಿಷಯ ಕೆದಬೇಡಿ ಎಂದು ನಾನು ಹೇಳಿದ್ದೇನೆ. ಆ ಅಭಿಮಾನಿಗಳು ಇದನ್ನು ಹೊಗಳಿದ್ದರು. ನಮ್ಮ ಫ್ಯಾನ್ಸ್ ಅವರನ್ನು ಇಷ್ಟಪಡೋದು, ಅವರ ಫ್ಯಾನ್ಸ್ ನಮ್ಮನ್ನು ಇಷ್ಟಪಡೋದು ಸಹಿಸದೇ ಇರುವ ಗುಂಪು ಈ ರೀತಿ ಮಾಡುತ್ತಿದೆ. ನಾವು ಒಂದಾಗೋದು ಬೇರೆಯವರಿಗೆ ಇಷ್ಟ ಇಲ್ಲದೆ ಇರಬಹುದು. ನಟರಾಗಿ ನಾವು ಕಿತ್ತಾಡಿಲ್ಲ. ನಮ್ಮಿಬ್ಬರ ಮಧ್ಯೆ ಸಾವಿರ ಇರಬಹುದು, ಅದು ನಮ್ಮಿಬ್ಬರ ಮಧ್ಯೆ ಇರೋ ವಿಷಯ’ ಎಂದರು ಕಿಚ್ಚ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Wed, 24 December 25