‘ನೀ ನಂಗೆ ಅಲ್ಲವ’ ಹಾಡನ್ನು ಸಂಜಿತ್ ಹಾಡಿದ್ದು ಯಾರಿಗಾಗಿ? ಉತ್ತರಿಸಿದ ಗಾಯಕ
ಸಂಜಿತ್ ಹೆಗಡೆ ಅವರ 'ನಂಗೆ ಅಲ್ಲವ' ಹಾಡು 14 ಮಿಲಿಯನ್ ವೀಕ್ಷಣೆಗಳೊಂದಿಗೆ ಭಾರಿ ಯಶಸ್ಸು ಕಂಡಿದೆ. ಈ ಜನಪ್ರಿಯ ಹಾಡಿನ ಹಿಂದಿನ ರೋಚಕ ಕಥೆಯನ್ನು ಸಂಜಿತ್ ಅವರೇ ಬಹಿರಂಗಪಡಿಸಿದ್ದಾರೆ. ಈ ಹಾಡನ್ನು ಅವರು ಹಿಂದೆ ಪ್ರೀತಿಸುತ್ತಿದ್ದ ಯುವತಿಗಾಗಿ ರಚಿಸಿದ್ದು, ಈಗ ಆಕೆ ಅವರ ಜೊತೆಗಿಲ್ಲ. ಸಂಜಿತ್ ಹೆಗಡೆ ಅವರ ಈ ಭಾವನಾತ್ಮಕ ಹಾಡು ಜನಮನ ಗೆದ್ದಿದೆ.

ಸಂಜಿತ್ ಹೆಗಡೆ ಅವರು ಗಾಯನದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರು ಹೊಸ ಹೊಸ ಹಾಡುಗಳ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಅವರ ಕಾನ್ಸರ್ಟ್ಗೆ ಸಾಕಷ್ಟು ಜನರು ಸೇರಿದ್ದರು. ಇದು ಯಶಸ್ಸು ಕಂಡಿತ್ತು. ಇದರ ಕ್ಲಿಪ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಗಮನ ಸೆಳೆದಿದ್ದು ‘ನಂಗೆ ಅಲ್ಲವ’ ಹಾಡು.
ಸಂಜಿತ್ ಹೆಗಡೆ ಈಗಾಗಲೇ ಸಾಕಷ್ಟು ಹಾಡುಗಳನ್ನು ಹೇಳಿದ್ದಾರೆ. ಆ ಪೈಕಿ ಸಾಕಷ್ಟು ಗಮನ ಸೆಳೆದಿದ್ದು, ‘ನಂಗೆ ಅಲ್ಲವ’ ಹಾಡು. ಅವರು ಯಾವುದೇ ವೇದಿಕೆ ಏರಿದರೂ ಈ ಹಾಡನ್ನು ಹಾಡುವಂತೆ ಕೇಳುತ್ತಾರೆ. ಈ ಹಾಡನ್ನು ಅವರು ಹುಡಗಿ ಒಬ್ಬರಿಗಾಗಿ ಕಂಪೋಸ್ ಮಾಡಿದ್ದರಂತೆ. ಅವರು ಈಗ ಅವರ ಜೊತೆ ಇಲ್ಲ.
ಈ ಹಾಡನ್ನು ಕಂಪೋಸ್ ಮಾಡಿದ್ದು ಸಂಜಿತ್ ಹೆಗಡೆ. ನಾಗಾರ್ಜುನ ಶರ್ಮ ಅವರು ಈ ಹಾಡನ್ನು ಬರೆದಿದ್ದಾರೆ. ಈ ಹಾಡನ್ನು ಯಾರಿಗಾಗಿ ಹೇಳಿದ್ದು ಎಂದು ಸಂಜಿತ್ ಹೆಗಡೆ ಅವರಿಗೆ ಕೇಳಲಾಯಿತು. ಈ ವೇಳೆ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದರು.
‘ನಂಗೆ ಅಲ್ಲವಾ ಸಂಜಿತ್ ಯಾರಿಗೆ ಹೇಳುತ್ತಾರೆ’ ಎಂದು ಸಂಜಿತ್ ಅವರಿಗೆ ಕೇಳಲಾಯಿತು. ‘ನಾನು ಮಾಡುವಾಗ ಒಂದು ಹುಡುಗಿ ಇದ್ದರು. ಈಗ ಅವಳು ನನ್ನಿಂದ ದೂರಾಗಿದ್ದಾಳೆ. ಆ ಟೈಮ್ ಅಲ್ಲಿ ಅವಳಿಗೆ ಹೇಳಿದ್ದು. ಈವಾಗ ಇನ್ನೊಬ್ಬರಿಗೆ ಹೇಳ್ತೀನಿ. ನೀವು ಇನ್ಯಾರಿಗೋ ಹೇಳ್ತೀರಾ’ ಎಂದು ಸಂಜಿತ್ ಹೇಳಿದ್ದಾರೆ.
‘ಆ ಹುಡುಗಿಯ ಹೆಸರು ಹೇಳೋದು ಬೇಡ. ನಾನು ಆ ವಿಷಯದಲ್ಲಿ ಖಾಸಗಿ ವ್ಯಕ್ತಿ. ಈಗ ಬೇರೆ ಯಾರೋ ಇದಾರೆ’ ಎಂದು ಒಪ್ಪಿಕೊಂಡರು ಸಂಜಿತ್ ಹೆಗಡೆ. ‘ನಂಗೆ ಅಲ್ಲವ’ ಹಾಡು 2024ರ ಜೂನ್ ಅಲ್ಲಿ ರಿಲೀಸ್ ಆಯಿತು. ಈ ಹಾಡು ಬರೋಬ್ಬರಿ 14 ಮಿಲಿಯನ್ ವೀಕ್ಷಣೆ ಕಂಡಿದೆ. ಜನರು ಸಂಜಿತ್ ಹೆಗಡೆ ಧ್ವನಿಯಲ್ಲಿ ಈ ಹಾಡನ್ನು ಕೇಳಲು ಬಯಸುತ್ತಾರೆ. ಇದು ಆಲ್ಬಂ ಸಾಂಗ್ ಎಂಬುದು ವಿಶೇಷ.
ಇದನ್ನೂ ಓದಿ: ನಂದಿನಿ-ಸಂಜಿತ್ ಹೆಗಡೆ ಕೊಲ್ಯಾಬರೇಷನ್; ಸಖತ್ ಫನ್ ಆಗಿದೆ ಸಾಂಗ್
ಸಂಜಿತ್ ಅವರು ಕನ್ನಡದವರಿಗೆ ಮಾತ್ರವಲ್ಲ, ಪರಭಾಷೆ ಅವರಿಗೂ ಪರಿಚಯ ಇದ್ದಾರೆ. ಅವರು ಪರಭಾಷೆಯಲ್ಲಿ ಹಾಡಿದ ಹಾಡೂ ಕೂಡ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



