AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವ ಲೋಕಕ್ಕೆ ಕರೆದೊಯ್ಯುವ ‘ಹೇಳು ಗೆಳತಿ’ ಹಾಡು

ರಕ್ಷಿತ್ ಶೆಟ್ಟಿ ಅರ್ಪಿಸುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ‘ಹೇಳು ಗೆಳತಿ’ ಹಾಡು ಬಿಡುಗಡೆ ಆಗಿದ್ದು, ರೆಟ್ರೊ ಶೈಲಿಯಲ್ಲಿ ಚಿತ್ರಿತವಾಗಿರುವ ಈ ಹಾಡು ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತಿದೆ.

ಭಾವ ಲೋಕಕ್ಕೆ ಕರೆದೊಯ್ಯುವ ‘ಹೇಳು ಗೆಳತಿ’ ಹಾಡು
ಮಂಜುನಾಥ ಸಿ.
|

Updated on: Jul 31, 2024 | 9:48 PM

Share

ಕನ್ನಡ ಸಿನಿಮಾಗಳಲ್ಲಿ ಒಳ್ಳೆಯ ಹಾಡುಗಳು ಬರುತ್ತಿಲ್ಲ ಎಂಬುದು ಸಂಗೀತ ಪ್ರೇಮಿಗಳು ಬಹು ಸಮಯದ ದೂರು. ಇದು ಬಹುತೇಕ ನಿಜವೂ ಹೌದು. ಆದರೆ ಈ ಕೊರತೆಯನ್ನು ನೀಗಿಸುವ ಸುಂದರವಾದ ಹಾಡೊಂದು ಕನ್ನಡ ಸಿನಿಮಾ ‘ಇಬ್ಬನಿ ತಬ್ಬಿದ ಇಳೆಯಲಿ’ದಲ್ಲಿದೆ. ‘ಹೇಳು ಗೆಳತಿ’ ಎಂಬ ಈ ಮಧುರವಾದ ಹಾಡು ಕೇಳುಗರನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೊತ್ತೊಯ್ಯುವಂತಿದೆ. ಹಾಡು ಕೆಲವು ದಿನದ ಹಿಂದಷ್ಟೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದ್ದು, ಹಾಡಿನ ಮಧುರತೆಯ ಜೊತೆಗೆ ಕೆಲವು ಅತ್ಯುತ್ತಮ ದೃಶ್ಯಗಳನ್ನು ಸಹ ಚಿತ್ರತಂಡ ಕಟ್ಟಿಕೊಟ್ಟಿದೆ.

ವಿಹಾನ್, ಅಂಕಿತಾ ಅಮರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಹಾಡೊಂದು ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಆ ಹಾಡು ಸಹ ಸಖತ್ ಗಮನ ಸೆಳೆದಿತ್ತು. ಈಗ ಬಿಡುಗಡೆ ಆಗಿರುವ ‘ಹೇಳು ಗೆಳತಿ’ ಹಾಡಂತೂ ಕೇಳುಗರಿಂದ ಭರಪೂರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ‘ಹೇಳು ಗೆಳತಿ’ ಹಾಡನ್ನು ರೆಟ್ರೋ ಹಿನ್ನೆಲೆಯಲ್ಲಿ ರೆಟ್ರೊ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ಹಾಡಿನಲ್ಲಿಯೇ ಒಂದು ಸಣ್ಣ ತ್ರಿಕೋನ ಪ್ರೇಮಕತೆಯನ್ನು ಸಹ ಹೇಳಲಾಗಿದೆ. ಹಾಡಿನ ಚಿತ್ರೀಕರಣವೂ ಅದ್ಭುತವಾಗಿದೆ. ರೆಟ್ರೋ ಕಾಲದಲ್ಲಿ ಕೂತು ಭಾವಗೀತೆಯೊಂದನ್ನು ಕೇಳುತ್ತಿರುವ ಅನುಭವವಾಗುತ್ತದೆ.

‘ಹೇಳು ಗೆಳತಿ’ ಹಾಡನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ಹಾಡು ಕೆಎಸ್​ಎನ್​ ಅವರ ಹಾಡುಗಳನ್ನು ನೆನಪಿಸುವಂತಿದೆ. ಈ ಹಾಡಿಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಹಾಡಿಗೆ ದೀಕ್ಷಿತ್ ಕುಮಾರ್ ಕೊರಿಯೋಗ್ರಫಿ ಮಾಡಿದ್ದಾರೆ. ಯೂಟ್ಯೂಬ್​ನಲ್ಲಿ ನಿಧಾನಕ್ಕೆ ಟ್ರೆಂಡ್ ಆಗುತ್ತಿದೆ ಈ ಮಧುರವಾದ ಹಾಡು. ಈ ಹಾಡು ಬಹು ದಿನಗಳ ವರೆಗೆ ಪ್ರೇಕ್ಷಕರಿಗೆ ನೆನಪಿನಲ್ಲಿ ಉಳಿಯುವ ಗುಣವನ್ನು ಹೊಂದಿದೆ. ಹಾಡಿನಲ್ಲಿ ನಾಯಕ, ನಾಯಕಿಯರ ಅಭಿನಯವೂ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ರಕ್ಷಿತ್ ಶೆಟ್ಟಿ ವಿರುದ್ಧದ ಕೇಸ್; ಮಾತಿನ ಮೂಲಕವೇ ಬಗೆಹರಿಯಲಿದೆ ಕೇಸ್?

ಕಿರಿಕ್ ಪಾರ್ಟಿ ಹಾಗೂ ಅವನ್ನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ, ರಕ್ಷಿತ್‌ರ ‘ಸೆವೆನ್ ಆಡ್ಸ್’ ಬರಹಗಾರರ ತಂಡದ ಸದಸ್ಯರಲ್ಲಿ ಒಬ್ಬರು. ಹಾಗೂ ಕಥಾಸಂಗಮ ಸಿನಿಮಾದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಇದೀಗ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ. ಚಂದ್ರಜಿತ್ ಬೆಳಿಯಪ್ಪ ಅವರ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಪರವಃ ಸ್ಟುಡಿಯೋಸ್ ಲಾಂಛನದಲ್ಲಿ ಮೂಡಿ ಬರುತ್ತಿದ್ದು, ಜಿ.ಎಸ್.ಗುಪ್ತ, ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತೆಲುಗಿನ ಸೂಪರ್‌ಹಿಟ್ ‘ಗೀತಾಂಜಲಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ನಟನೆಗೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ಮಗ್ನವಾಗಿದ್ದು, ವಿಎಫ್‌ಎಕ್ಸ್ ಕೆಲಸ ಪಿನಾಕ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ ಈ ಚಿತ್ರಕ್ಕಿದೆ. ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ