‘ಉಗ್ರರ ದಾಳಿ ಆದಾಗ ಈ ಡೈಲಾಗ್ ಸರಿ ಹೊಂದುತ್ತೆ’; ಯಶ್ ಹಳೆಯ ವಿಡಿಯೋ ವೈರಲ್

ಪಾಕಿಸ್ತಾನದ ಉಗ್ರರ ದಾಳಿಯಿಂದ 26 ಜನರು ಮೃತಪಟ್ಟಿದ್ದಾರೆ. ಭಾರತ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಈ ಘಟನೆಯ ನಂತರ, ಯಶ್ ಅವರ ಕೆಜಿಎಫ್ ಚಿತ್ರದ ಒಂದು ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಡೈಲಾಗ್​ನ ಕೇಳಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

‘ಉಗ್ರರ ದಾಳಿ ಆದಾಗ ಈ ಡೈಲಾಗ್ ಸರಿ ಹೊಂದುತ್ತೆ’; ಯಶ್ ಹಳೆಯ ವಿಡಿಯೋ ವೈರಲ್
ಯಶ್

Updated on: May 10, 2025 | 12:51 PM

ಪಾಕಿಸ್ತಾನ ಪಹಲ್ಗಾಮ್​ನಲ್ಲಿ (Pahalgam Attack) ನಡೆಸಿದ ಉಗ್ರರ ದಾಳಿಗೆ 26 ಜನ ಮುಗ್ದರು ಪ್ರಾಣ ಬಿಟ್ಟರು. ಇದಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಪಾಕ್​ ಮೇಲೆ ದಾಳಿ ನಡೆಸುವ ಮೂಲಕ ಏಟಿಗೆ ಎದುರೇಟು ಕೊಡುತ್ತಿದೆ. ಮೊದಲು ಭಾರತವನ್ನು ಕೆರಳಿಸಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಿದೆ. ಈ ಮಧ್ಯೆ ಯಶ್ ಅವರು ಹೇಳಿದ ಹಳೆಯ ಡೈಲಾಗ್ ಒಂದು ವೈರಲ್ ಆಗಿದೆ. ಉಗ್ರರ ದಾಳಿ ಆದಾಗ ಯಾವ ಡೈಲಾಗ್ ಸರಿ ಹೊಂದುತ್ತದೆ ಎಂಬುದನ್ನು ಅವರು ಹೇಳಿದ್ದರು.

ಭಾರತದ ಮೇಲೆ ಪಾಕಿಸ್ತಾನ ಅನೇಕ ಬಾರಿ ದಾಳಿ ಮಾಡಿದೆ. ಈ ರೀತಿ ದಾಳಿ ಮಾಡಿದಾಗಲೆಲ್ಲ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಈ ಬಾರಿಯ ಪ್ರತೀಕಾರ ಕೊಂಚ ಖಡಕ್ ಆಗಿದೆ. ಪಾಕಿಸ್ತಾನದವರು ಮೊದಲು ಹೊಡೆದಿರಬಹುದು. ಆದರೆ, ಇದಕ್ಕೆ ಅವರು ದುಬಾರಿ ಬೆಲೆ ತೆತ್ತುತ್ತಾ ಇದ್ದಾರೆ. ಈ ಬಗ್ಗೆ ಯಶ್ ಹೇಳಿದ್ದ ಒಂದು ಡೈಲಾಗ್ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ
ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್

‘ಉಗ್ರರರ ದಾಳಿ ಆದಾಗ ನಾವು ಹೇಳಬಹುದಾದ ಡೈಲಾಗ್ ಇದು. ಸರಿಯಾಗಿ ಮ್ಯಾಚ್ ಆಗುತ್ತದೆ ಅಂದುಕೊಳ್ಳುತ್ತೇನೆ. ಒಂದು ಹೊಡೆದಾಟದಲ್ಲಿ ಯಾರು ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ. ಯಾರು ಮೊದಲು ಬಿದ್ದರು ಅನ್ನೋದೇ ಲೆಕ್ಕಕ್ಕೆ ಬರೋದು’ ಎಂದಿದ್ದರು ಯಶ್.

ಅಸಲಿಗೆ ಇದು ‘ಕೆಜಿಎಫ್’ ಸಿನಿಮಾದ ಡೈಲಾಗ್. ಈಗಿನ ಪರಿಸ್ಥಿತಿಗೆ ಈ ಡೈಲಾಗ್ ಸರಿಯಾಗಿ ಹೊಂದುತ್ತಿದೆ. ಮೊದಲು ಹೊಡೆದಿದ್ದು ಪಾಕಿಸ್ತಾನವೇ ಆದರೂ, ಅದಕ್ಕೆ ಭಾರತ ಪ್ರತ್ಯುತ್ತರ ಕೊಡುತ್ತಿರುವ ರೀತಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತಿಳಿಯದಂತೆ ಆಗಿದೆ.

ಇದನ್ನೂ ಓದಿ: ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ

ಯಶ್ ಅವರು ‘ಕೆಜಿಎಫ್ 2’ ಬಳಿಕ ತಮ್ಮ ಮುಂದಿನ ಚಿತ್ರವನ್ನು ಘೋಷಿಸಲು ಸ್ವಲ್ಪ ಸಮಯ ತೆಗೆದುಕೊಂಡರು. ಈಗ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮುಂದಿನ ವರ್ಷ ಮಾರ್ಚ್​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದಲ್ಲದೆ, ‘ರಾಮಾಯಣ’ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:49 pm, Sat, 10 May 25