Thothapuri Movie: ‘ತೋತಾಪುರಿ’ ರುಚಿಗೆ ಪ್ರೇಕ್ಷಕರು ಫಿದಾ; ‘ದೇಸಿ ಫೈಲ್ಸ್’ ಎಂದು ಹೊಗಳಿಕೆ

Jaggesh | Aditi Prabhudeva: 'ತೋತಾಪುರಿ' ಶುರುವಾದಾಗಿನಿಂದ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಂತಹ ಸಿನಿಮಾ. ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿ ಕಣ್ಣು- ಬಾಯಿ ಬಿಟ್ಟುಕೊಂಡು ನೋಡುವಂತೆ ಮಾಡಿದೆ. ದೊಡ್ಡ ವೇದಿಕೆಯಲ್ಲಿ ಕಿಚ್ಚ ಸುದೀಪ್ ಟ್ರೇಲರ್ ರಿಲೀಸ್ ಮಾಡಿ, ಜಗ್ಗಣ್ಣನ ಬಗ್ಗೆ ಮನದಾಳದ ಮಾತುಗಳನ್ನಾಡಿ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

Thothapuri Movie: ತೋತಾಪುರಿ ರುಚಿಗೆ ಪ್ರೇಕ್ಷಕರು ಫಿದಾ; ದೇಸಿ ಫೈಲ್ಸ್ ಎಂದು ಹೊಗಳಿಕೆ
‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ
Edited By:

Updated on: Apr 26, 2022 | 11:42 AM

ಹೇಳಿ ಕೇಳಿ ಇದು ಮಾವು ಕಾಲ. ವೆರೈಟಿ ವೆರೈಟಿ ಮಾವಿನ ಕಾಯಿ ಸಿಕ್ಕರು ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುವುದು ‘ತೋತಾಪುರಿ’ಯನ್ನೇ. ಜನ ಇಷ್ಟಪಡುವ ತೋತಾಪುರಿ ಜೊತೆ‌ಜೊತೆಗೆ ಇದೀಗ ವಿಜಯ್ ಪ್ರಸಾದ್ ಹೊಸ ತೋತಾಪುರಿಯ (Thothapuri Movie) ರುಚಿಯನ್ನು ನೀಡಿದ್ದಾರೆ. ವಿಜಯ್ ಪ್ರಸಾದ್ (Vijay Prasad) ಎಂದರೆ ಕೇಳಬೇಕಾ..? ಅಲ್ಲಿ ಒಂದಷ್ಟು ಚೇಷ್ಟೇಗಳು ಇರಲೇಬೇಕಲ್ಲವೆ. ‘ತೋತಾಪುರಿ’ಯ ರುಚಿ ಜೊತೆಗೆ ಮನರಂಜನೆಯನ್ನು ನೀಡುತ್ತಿದೆ. ‘ತೋತಾಪುರಿ’ ಶುರುವಾದಾಗಿನಿಂದ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಂತಹ ಸಿನಿಮಾ. ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿ ಕಣ್ಣು- ಬಾಯಿ ಬಿಟ್ಟುಕೊಂಡು ನೋಡುವಂತೆ ಮಾಡಿದೆ. ದೊಡ್ಡ ವೇದಿಕೆಯಲ್ಲಿ ಕಿಚ್ಚ ಸುದೀಪ್ (Kichcha Sudeep) ಟ್ರೇಲರ್ ರಿಲೀಸ್ ಮಾಡಿ, ಜಗ್ಗೇಶ್ (Jaggesh) ಬಗ್ಗೆ ಮನದಾಳದ ಮಾತುಗಳನ್ನಾಡಿ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇನ್ನು ಟ್ರೇಲರ್ ರಿಲೀಸ್ ಆಗಿದ್ದೇ ತಡ, ಅಷ್ಟು ದಿನದ ಕಾಯುವಿಕೆಗೆ ಬ್ರೇಕ್ ಹಾಕಿದ ಸಿನಿಮಾ ಪ್ರೇಮಿಗಳು ನಾ ಮುಂದು ತಾ ಮುಂದು ಅಂತ ಟ್ರೇಲರ್ ವೀಕ್ಷಣೆ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಟ್ರೇಲರ್ ನೋಡಿ ಇಷ್ಟಪಟ್ಟವರು ಮತ್ತೆ ಮತ್ತೆ ನೋಡುತ್ತಿದ್ದಾರೆ.

‘ತೋತಾಪುರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ

ಕಾಮಿಡಿ ಜಾನರ್ ನಲ್ಲಿ ಪ್ಯಾನ್ ಇಂಡಿಯಾ ಆಗುತ್ತಿರುವ ಮೊದಲ ಸಿನಿಮಾವಿದು. ಅದಕ್ಕೆ ತಕ್ಕಂತೆ ಟ್ರೇಲರ್ ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಮಿಲಿಯನ್​ಗಟ್ಟಲೇ ವೀವ್ಸ್ ಪಡೆಯುತ್ತಿದೆ. ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬೀನೇಷನ್​ಗೆ ಅಭಿಮಾನಿಗಳು ಈಗಾಗಲೇ ಬಹುಪರಾಕ್ ಹಾಕಿದ್ದಾರೆ. ಟ್ರೇಲರ್​ಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಸಿನಿಮಾ ಓಪನಿಂಗ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್

ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಲಂಡನ್‌, ಉಗಾಂಡ, ಫಿಲಿಪೈನ್ಸ್ ಸೇರಿದಂತೆ ಸಾಕಷ್ಟು ರಾಷ್ಟ್ರಗಳಿಂದ ‘ತೋತಾಪುರಿ’ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿದವರು ‘ಇದು ಕಾಶ್ಮೀರ್ ಫೈಲ್ಸ್ ಅಲ್ಲ, ದೇಸಿ ಫೈಲ್ಸ್’ ಎಂದು ಹೊಗಳುತ್ತಿದ್ದಾರೆ.

‘ತೋತಾಪುರಿ’ ಟ್ರೇಲರ್ ಇಲ್ಲಿದೆ:

ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎ.ಸುರೇಶ್ ನಿರ್ಮಾಣದ ಈ ಸಿನಿಮಾವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. ಸದ್ಯದಲ್ಲೇ ತೆರೆಕಾಣಲಿರುವ ಈ ಚಿತ್ರದಲ್ಲಿ ‘ಡಾಲಿ’ ಧನಂಜಯ್’, ಸುಮನ್ ರಂಗನಾಥ್, ಅದಿತಿ ಪ್ರಭುದೇವ ಹಾಗೂ ದತ್ತಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ‘ನನಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ದು ಇದೇ ಮೊದಲು’; ಎಲ್ಲರಿಗೂ ಧನ್ಯವಾದ ತಿಳಿಸಿದ ‘ತೋತಾಪುರಿ’ ಜಗ್ಗೇಶ್​

‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್​ ನಟನೆ ಬಗ್ಗೆ ಜಗ್ಗೇಶ್​ ಹೊಗಳಿಕೆ

Published On - 11:39 am, Tue, 26 April 22