Karthik Gowda: ‘ರಾಘವೇಂದ್ರ ಸ್ಟೋರ್ಸ್’ ಕಲೆಕ್ಷನ್ ಬಗ್ಗೆ ತಪ್ಪು ಲೆಕ್ಕ; ಸ್ಪಷ್ಟನೆ ನೀಡಿದ ಕಾರ್ತಿಕ್ ಗೌಡ

|

Updated on: May 02, 2023 | 2:42 PM

ಈ ಸಿನಿಮಾ ಕಲೆಕ್ಷನ್ ಬಗ್ಗೆ ಟ್ವಿಟರ್​ ಪೇಜ್​ನಲ್ಲಿ ಮಾಹಿತಿ ಹರಿದಾಡಿತ್ತು. ಈ ಸಿನಿಮಾ ಮೂರು ದಿನಕ್ಕೆ 1.1 ಕೋಟಿ ರೂಪಾಯಿ ಗಳಿಸಿದೆ ಎಂದು ಈ ಟ್ವೀಟ್​ನಲ್ಲಿತ್ತು. ಆದರೆ, ಇದನ್ನು ಕಾರ್ತಿಕ್ ಗೌಡ ತಿದ್ದಿದ್ದಾರೆ.

Karthik Gowda: ‘ರಾಘವೇಂದ್ರ ಸ್ಟೋರ್ಸ್’ ಕಲೆಕ್ಷನ್ ಬಗ್ಗೆ ತಪ್ಪು ಲೆಕ್ಕ; ಸ್ಪಷ್ಟನೆ ನೀಡಿದ ಕಾರ್ತಿಕ್ ಗೌಡ
ಜಗ್ಗೇಶ್
Follow us on

ಜಗ್ಗೇಶ್ ಇದ್ದಲ್ಲಿ ನಗು ಖಚಿತ. ವೃತ್ತಿ ಜೀವನದಲ್ಲಿ ಅವರು ಗಂಭೀರ ಸಿನಿಮಾ ಮಾಡಿದ್ದು ತುಂಬಾನೇ ಕಡಿಮೆ. ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ (Raghavendra Stores Movie) ಕೂಡ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಮಾಹಿತಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಲೆಕ್ಕ ನೀಡಲಾಗಿತ್ತು. ಇದನ್ನು ಅವರು ತಿದ್ದಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ.

‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚೋಕೆ ಸಾಕಷ್ಟು ಕಾರಣಗಳಿದ್ದವು. ಪುನೀತ್ ರಾಜ್​ಕುಮಾರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್​ ಆನಂದ್ ರಾಮ್ ಅವರು ಇದೇ ಮೊದಲ ಬಾರಿಗೆ ಜಗ್ಗೇಶ್ ಜೊತೆ ಕೈ ಜೋಡಿಸಿದ್ದರು. ಜಗ್ಗೇಶ್ ಅವರು ಭಿನ್ನ ಗೆಟಪ್ ಧರಿಸಿದ್ದರು. ಹಾಸ್ಯಪ್ರಧಾನ ಸಿನಿಮಾಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಕಲೆಕ್ಷನ್ ಬಗ್ಗೆ ಟ್ವಿಟರ್​ ಪೇಜ್​ನಲ್ಲಿ ಮಾಹಿತಿ ಹರಿದಾಡಿತ್ತು. ಈ ಸಿನಿಮಾ ಮೂರು ದಿನಕ್ಕೆ 1.1 ಕೋಟಿ ರೂಪಾಯಿ ಗಳಿಸಿದೆ ಎಂದು ಈ ಟ್ವೀಟ್​ನಲ್ಲಿತ್ತು. ಆದರೆ, ಇದನ್ನು ಕಾರ್ತಿಕ್ ಗೌಡ ತಿದ್ದಿದ್ದಾರೆ.

‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ ಗಳಿಕೆ 1.1 ಕೋಟಿ ರೂಪಾಯಿ ಅನ್ನೂ ದಾಟಿದೆ. ಹೀಗಾಗಿ, ಮಾಹಿತಿ ನೀಡಲಾದ ಟ್ವೀಟ್​ನ ರೀಟ್ವೀಟ್ ಮಾಡಿ, ‘ಅದಕ್ಕೂ ಹೆಚ್ಚು’ ಎಂದು ಕಾರ್ತಿಕ್ ಗೌಡ ಬರೆದುಕೊಂಡಿದ್ದಾರೆ. ಆದರೆ, ಅವರು ಪಕ್ಕಾ ಲೆಕ್ಕ ನೀಡಿಲ್ಲ. 40 ವಯಸ್ಸುಯ ದಾಟಿದ ಕಥಾ ನಾಯಕ ಹಯವದನನ (ಜಗ್ಗೇಶ್​) ಮದುವೆ ಪ್ರಸಂಗ ಸಿನಿಮಾದಲ್ಲಿದೆ. ಡಬಲ್ ಮೀನಿಂಗ್​ ಜೋಕ್​ಗಳು ಸಿನಿಮಾದಲ್ಲಿ ಹೈಲೈಟ್ ಆಗಿವೆ.

ಈ ಚಿತ್ರದಲ್ಲಿ ಜಗ್ಗೇಶ್ ಜೊತೆ ಶ್ವೇತ ಶ್ರೀವಾತ್ಸವ್, ದತ್ತಣ್ಣ, ರವಿಶಂಕರ್​ ಗೌಡ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ‘ರಾಘವೇಂದ್ರ ಸ್ಟೋರ್ಸ್​’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:  ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ

ವಿವಿಧ ರೀತಿಯ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿದೆ. ನೂರಾರು ಕೋಟಿ ರೂಪಾಯಿ ಚಿತ್ರಗಳನ್ನು ನಿರ್ಮಾಣ ಮಾಡಿದ ಈ ನಿರ್ಮಾಣ ಸಂಸ್ಥೆ ಪ್ರಯೋಗಾತ್ಮಕ ಸಿನಿಮಾಗಳಿಗೂ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ