ವಿಚ್ಛೇದನ ಸಂಭ್ರಮಿಸಿದ ಈ ನಟಿ ಯಾರು ಗೊತ್ತಾ? ಕಿರುತೆರೆಯಲ್ಲಿ ಇವರಿಗೆ ಇದೆ ಬೇಡಿಕೆ
ಸೋಶಿಯಲ್ ಮೀಡಿಯಾದಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ.
ಮದುವೆಗೂ ಮುನ್ನ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ನಲ್ಲಿದೆ. ಆದರೆ, ವಿಚ್ಛೇದನ ಆಗಿದ್ದಕ್ಕೆ ಯಾರಾದರೂ ಸಂಭ್ರಮಿಸಿದ್ದು ನೋಡಿದ್ದೀರಾ? ತಮಿಳು ಕಿರುತೆರೆ ನಟಿ ಶಾಲಿನಿ (Shalini) ಅವರು ಹೀಗೋಂದು ಫೋಟೋಶೂಟ್ ಮಾಡಿಸಿದ್ದಾರೆ. ಅವರು ಪತಿ ರಿಯಾಜ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇದನ್ನು ಅವರು ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ‘ಈ ಕಣ್ಣುಗಳಲ್ಲಿ ಇದನ್ನು ನೋಡುವುದೊಂದು ಬಾಕಿ ಇತ್ತು’ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಶಾಲಿನಿ ಅವರು ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಮುಲ್ಲುಮ್ ಮಲರುಮ್’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ಅವರು ವಿಚ್ಛೇದನದ ಮೂಲಕ ಸುದ್ದಿ ಆಗಿದ್ದಾರೆ. ಪತಿಯ ಜೊತೆ ನಿಂತಿದ್ದ ಫೋಟೋನ ಹರಿದು ಹಾಕುವ ಮೂಲಕ ವಿಚ್ಛೇದನವನ್ನು ಸಂಭ್ರಮಿಸಿದ್ದಾರೆ.
‘ಪತಿಯ ತೊಂದರೆಯಿಂದ ಮುಕ್ತ’ ಎಂಬರ್ಥ ಬರುವ ರೀತಿಯಲ್ಲಿ ಶಾಲಿನಿ ಅವರು ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಧ್ವನಿ ಇಲ್ಲದವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ. ಕೆಟ್ಟ ದಾಂಪತ್ಯವನ್ನು ಬಿಟ್ಟುಬಿಡಬೇಕು. ಏಕೆಂದರೆ ನೀವು ಸಂತೋಷವಾಗಿರಲು ಅರ್ಹರಾಗಿದ್ದೀರಿ. ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಬದಲಾವಣೆ ಅತ್ಯಗತ್ಯ. ವಿಚ್ಛೇದನ ಅನ್ನೋದು ನಿಮ್ಮ ವಿಫಲತೆ ಅಲ್ಲ. ವಿಚ್ಛೇದನದಿಂದ ನಿಮ್ಮ ಬದುಕಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ವೈವಾಹಿಕ ಜೀವನ ಬಿಟ್ಟು ಒಬ್ಬಂಟಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ವಿಚ್ಛೇದನ ಪಡೆದ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶಾಲಿನಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ನಟಿಯನ್ನು ಬಹುತೇಕರು ಟೀಕೆ ಮಾಡಿದ್ದಾರೆ. ‘ವಿಚ್ಛೇದನ ಮಾಡಿಕೊಂಡಿದ್ದನ್ನು ಈ ರೀತಿ ಸಂಭ್ರಮಿಸುವ ಅಗತ್ಯ ಇತ್ತೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ನಟಿಯನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ನನಗೆ 99 ಸಮಸ್ಯೆಗಳಿವೆ, ಆದ್ರೆ ಪತಿ ಇಲ್ಲ: ಡಿವೋರ್ಸ್ ಮಹಿಳೆಯ ಫೋಟೋಶೂಟ್ ವೈರಲ್
ರಿಯಾಜ್ ಎಂಬುವವರನ್ನು ಶಾಲಿನಿ 2020ರ ಜೂನ್ ತಿಂಗಳಲ್ಲಿ ಮದುವೆ ಆಗಿದ್ದರು. ಮದುವೆ ಬಳಿಕ ತಮಗೆ ದೈಹಿಕವಾಗಿ ಕಿರುಕುಳ ಆಗುತ್ತಿದೆ ಎಂದು ಅವರು ಆರೋಪಮಾಡಿದ್ದರು. ‘ಸೂಪರ್ ಮಾಮ್’ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ