Karthik Gowda: ‘ರಾಘವೇಂದ್ರ ಸ್ಟೋರ್ಸ್’ ಕಲೆಕ್ಷನ್ ಬಗ್ಗೆ ತಪ್ಪು ಲೆಕ್ಕ; ಸ್ಪಷ್ಟನೆ ನೀಡಿದ ಕಾರ್ತಿಕ್ ಗೌಡ
ಈ ಸಿನಿಮಾ ಕಲೆಕ್ಷನ್ ಬಗ್ಗೆ ಟ್ವಿಟರ್ ಪೇಜ್ನಲ್ಲಿ ಮಾಹಿತಿ ಹರಿದಾಡಿತ್ತು. ಈ ಸಿನಿಮಾ ಮೂರು ದಿನಕ್ಕೆ 1.1 ಕೋಟಿ ರೂಪಾಯಿ ಗಳಿಸಿದೆ ಎಂದು ಈ ಟ್ವೀಟ್ನಲ್ಲಿತ್ತು. ಆದರೆ, ಇದನ್ನು ಕಾರ್ತಿಕ್ ಗೌಡ ತಿದ್ದಿದ್ದಾರೆ.
ಜಗ್ಗೇಶ್ ಇದ್ದಲ್ಲಿ ನಗು ಖಚಿತ. ವೃತ್ತಿ ಜೀವನದಲ್ಲಿ ಅವರು ಗಂಭೀರ ಸಿನಿಮಾ ಮಾಡಿದ್ದು ತುಂಬಾನೇ ಕಡಿಮೆ. ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ (Raghavendra Stores Movie) ಕೂಡ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಮಾಹಿತಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಲೆಕ್ಕ ನೀಡಲಾಗಿತ್ತು. ಇದನ್ನು ಅವರು ತಿದ್ದಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ.
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚೋಕೆ ಸಾಕಷ್ಟು ಕಾರಣಗಳಿದ್ದವು. ಪುನೀತ್ ರಾಜ್ಕುಮಾರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ಅವರು ಇದೇ ಮೊದಲ ಬಾರಿಗೆ ಜಗ್ಗೇಶ್ ಜೊತೆ ಕೈ ಜೋಡಿಸಿದ್ದರು. ಜಗ್ಗೇಶ್ ಅವರು ಭಿನ್ನ ಗೆಟಪ್ ಧರಿಸಿದ್ದರು. ಹಾಸ್ಯಪ್ರಧಾನ ಸಿನಿಮಾಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಕಲೆಕ್ಷನ್ ಬಗ್ಗೆ ಟ್ವಿಟರ್ ಪೇಜ್ನಲ್ಲಿ ಮಾಹಿತಿ ಹರಿದಾಡಿತ್ತು. ಈ ಸಿನಿಮಾ ಮೂರು ದಿನಕ್ಕೆ 1.1 ಕೋಟಿ ರೂಪಾಯಿ ಗಳಿಸಿದೆ ಎಂದು ಈ ಟ್ವೀಟ್ನಲ್ಲಿತ್ತು. ಆದರೆ, ಇದನ್ನು ಕಾರ್ತಿಕ್ ಗೌಡ ತಿದ್ದಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಗಳಿಕೆ 1.1 ಕೋಟಿ ರೂಪಾಯಿ ಅನ್ನೂ ದಾಟಿದೆ. ಹೀಗಾಗಿ, ಮಾಹಿತಿ ನೀಡಲಾದ ಟ್ವೀಟ್ನ ರೀಟ್ವೀಟ್ ಮಾಡಿ, ‘ಅದಕ್ಕೂ ಹೆಚ್ಚು’ ಎಂದು ಕಾರ್ತಿಕ್ ಗೌಡ ಬರೆದುಕೊಂಡಿದ್ದಾರೆ. ಆದರೆ, ಅವರು ಪಕ್ಕಾ ಲೆಕ್ಕ ನೀಡಿಲ್ಲ. 40 ವಯಸ್ಸುಯ ದಾಟಿದ ಕಥಾ ನಾಯಕ ಹಯವದನನ (ಜಗ್ಗೇಶ್) ಮದುವೆ ಪ್ರಸಂಗ ಸಿನಿಮಾದಲ್ಲಿದೆ. ಡಬಲ್ ಮೀನಿಂಗ್ ಜೋಕ್ಗಳು ಸಿನಿಮಾದಲ್ಲಿ ಹೈಲೈಟ್ ಆಗಿವೆ.
Much More Sir 🙂 https://t.co/BCxV8lv0Gd
— Karthik Gowda (@Karthik1423) May 1, 2023
ಈ ಚಿತ್ರದಲ್ಲಿ ಜಗ್ಗೇಶ್ ಜೊತೆ ಶ್ವೇತ ಶ್ರೀವಾತ್ಸವ್, ದತ್ತಣ್ಣ, ರವಿಶಂಕರ್ ಗೌಡ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ‘ರಾಘವೇಂದ್ರ ಸ್ಟೋರ್ಸ್’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಸಂದೇಶಗಳ ರೀಸೈಕಲ್; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ
ವಿವಿಧ ರೀತಿಯ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿದೆ. ನೂರಾರು ಕೋಟಿ ರೂಪಾಯಿ ಚಿತ್ರಗಳನ್ನು ನಿರ್ಮಾಣ ಮಾಡಿದ ಈ ನಿರ್ಮಾಣ ಸಂಸ್ಥೆ ಪ್ರಯೋಗಾತ್ಮಕ ಸಿನಿಮಾಗಳಿಗೂ ಬಂಡವಾಳ ಹೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ