‘ಮೀಟರ್ ನನ್ನದು, ಮ್ಯಾಟರ್ ಅವರದ್ದು’ ಬಿಜೆಪಿ ಹಾಡು ಹುಟ್ಟಿದ ಬಗ್ಗೆ ಚಂದನ್ ಶೆಟ್ಟಿ ಮಾತು

Chandan Shetty: ಬಿಜೆಪಿಯ ಚುನಾವಣಾ ಪ್ರಚಾರ ಹಾಡು ಕಣ ಕಣದಲ್ಲೂ ಬಿಜೆಪಿ ಸಖತ್ ಸದ್ದು ಮಾಡುತ್ತಿದೆ. ಈ ಹಾಡು ಸಂಯೋಜಿಸಿ ಹಾಡಿರುವ ಚಂದನ್ ಶೆಟ್ಟಿ ಹಾಡಿನ ಬಗ್ಗೆ Tv9 ಜೊತೆಗೆ ಮಾತನಾಡಿದ್ದಾರೆ.

'ಮೀಟರ್ ನನ್ನದು, ಮ್ಯಾಟರ್ ಅವರದ್ದು' ಬಿಜೆಪಿ ಹಾಡು ಹುಟ್ಟಿದ ಬಗ್ಗೆ ಚಂದನ್ ಶೆಟ್ಟಿ ಮಾತು
ಚಂದನ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on:May 03, 2023 | 6:40 PM

ರಾಜ್ಯದಲ್ಲೀಗ ಚುನಾವಣೆ ಕಾಲ. ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ಪರಸ್ಪರರ ವಿರುದ್ಧ ಹೇಳಿಕೆಗಳು, ಆಕರ್ಷಣೀಯ ಪ್ರಣಾಳಿಕೆಗಳು, ಉಚಿತ ಭರವಸೆಗಳು, ಭಿನ್ನ ಭಿನ್ನ ಪೋಸ್ಟರ್​ಗಳು, ವಿಡಿಯೋ ಜಾಹೀರಾತುಗಳು, ಕಟೌಟ್​ಗಳು ಇವುಗಳ ಜೊತೆಗೆ ಹಾಡುಗಳ ಮೂಲಕವೂ ರಾಜಕೀಯ ಪಕ್ಷಗಳು ಜನರನ್ನು ತಲುಪುವ ಯತ್ನದಲ್ಲಿ ನಿರತವಾಗಿವೆ. ಹಿಟ್ ಸಿನಿಮಾ ಹಾಡುಗಳನ್ನು ತಮ್ಮ ಪಕ್ಷದ ಸಾಧನೆಗಳು, ಭರವಸೆಗಳಿಗೆ ಅನುಗುಣವಾಗಿ ಮಾರ್ಪಡಿಸಿ ರೀಮಿಕ್ಸ್ ಮಾಡಿ ಆಟೋಗಳಲ್ಲಿ, ಚುನಾವಣಾ ಪ್ರಚಾರ ವಾಹನಗಳಲ್ಲಿ ಪ್ರಸಾರ ಮಾಡುವುದು ಜನಪ್ರಿಯ ಮಾದರಿ. ಆದರೆ ಇದಕ್ಕೆ ಹೊರತಾಗಿ ತಮ್ಮದೇ ಹೊಸ ಹಾಡುಗಳನ್ನು ಕೆಲವು ಪಕ್ಷಗಳು ಬಿಡುಗಡೆ ಮಾಡಿವೆ. ಈ ಬಾರಿ ಬಿಜೆಪಿಯ ‘ಕಣ ಕಣದಲ್ಲೂ ಬಿಜೆಪಿ’ ಹಾಡು ಬಹಳ ಸದ್ದು ಮಾಡುತ್ತಿದೆ.  ಈ ಹಾಡು ಸಂಯೋಜಿಸಿ, ಹಾಡಿರುವ ಸಂಗೀತ ನಿರ್ದೇಶಕ, ರ್ಯಾಪರ್ ಚಂದನ್ ಶೆಟ್ಟಿ ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.

ಬಿಜೆಪಿಗೆ ಹಾಡು ಮಾಡುವ ಅವಕಾಶ ದೊರಕಿದ್ದು ಹೇಗೆ?

ಕರ್ನಾಟಕ ಬಿಜೆಪಿ ಕಚೇರಿಯಿಂದ ನನಗೆ ಕರೆ ಬಂತು. ನಿಮ್ಮದೇ ಆದ ಶೈಲಿಯಲ್ಲಿ ಯೂಥ್​ಫುಲ್ ಆಗಿರುವ ಹಾಡು ಮಾಡಿಕೊಡಿ, ಹಾಡು ಜೋಶ್​ಭರಿತವಾಗಿ, ಕುಣಿಯುವಂತಿರಬೇಕು ಎಂದು ಕೇಳಿದರು. ಅವರಿಗೆ ಓಕೆ ಎಂದು ಹೇಳುವ ಮೊದಲು ಒಂದು ದಿನ ಸಮಯ ತೆಗೆದುಕೊಂಡು, ನನ್ನ ಗುರುಗಳು, ಹಿತೈಷಿಗಳು, ಕುಟುಂಬದವರೊಡನೆ ಮಾತನಾಡಿ ಎಲ್ಲರಿಂದಲೂ ಧನಾತ್ಮಕ ಅಭಿಪ್ರಾಯ ವ್ಯಕ್ತವಾದ ಬಳಿಕ ನಾನು ಅವಕಾಶವನ್ನು ಒಪ್ಪಿಕೊಂಡು ಹಾಡು ಮಾಡಿಕೊಟ್ಟೆ.

ಹಾಡಿನ ಸಾಹಿತ್ಯ ಸಂಪೂರ್ಣ ನಿಮ್ಮದಾ?

ಹಾಡಿನಲ್ಲಿನ ಎಲ್ಲ ಸಾಹಿತ್ಯ ನನ್ನದೇ ಎನ್ನಲಾಗುವುದಿಲ್ಲ. ಹಾಡಿನಲ್ಲಿ ಇಂಥಹುದ್ದೇ ವಿಷಯಗಳು ಇರಬೇಕು, ಇಂಥಹುದ್ದೇ ಹೆಸರುಗಳು ಇರಬೇಕು, ಇಂಥಹಾ ಯೋಜನೆಗಳ ಉಲ್ಲೇಖ ಇರಬೇಕು ಎಂದೆಲ್ಲ ನಿರ್ದಿಷ್ಟವಾಗಿ ತಿಳಿಸಿದ್ದರು. ನಾನು ಅದನ್ನು ಪ್ರಾಸಬದ್ಧವಾಗಿ, ಸಂಗೀತಕ್ಕೆ ಹೊಂದುವಂತೆ ಮಾರ್ಪಾಡು ಮಾಡಿಕೊಂಡೆ. ಸಂಗೀತದ ಮೀಟರ್ ನನ್ನದು ಮಾಟರ್ ಅವರದ್ದು. (ಮೀಟರ್ ಎಂದರೆ ಹಾಡಿನ ಸಂಗೀತದಲ್ಲಿ ಬಳಸುವ ತಾಂತ್ರಿಕ ಪದ). ಅವರು ಕೊಟ್ಟಿದ್ದ ಮಾಹಿತಿಯನ್ನೇ ಅಲ್ಪ-ಸ್ವಲ್ಪ ಬದಲು ಮಾಡಿ ಕೆಲವೆಡೆಗಳಲ್ಲಷ್ಟೆ ನನ್ನ ಕೆಲವು ಪದಗಳನ್ನು ಸೇರಿಸಿದ್ದೇನೆ. ಆದರೆ ಹಾಡಿನ ವಿಡಿಯೋದಲ್ಲಿ ಬಳಸಲಾಗಿರುವ ಚಿತ್ರಗಳು ಹಾಗೂ ವಿಡಿಯೋ ತುಣುಗಳನ್ನು ನಾನು ಸೇರಿಸಿದ್ದಲ್ಲ ಅವನ್ನು ಬಿಜೆಪಿಯೇ ಸೇರಿಸಿದೆ. ನಾನು ಹಾಡನ್ನಷ್ಟೆ ಮಾಡಿಕೊಟ್ಟಿದ್ದೇನೆ.

ಹಾಡಿನ ಬಗ್ಗೆ ಬಿಜೆಪಿಯವರ ಪ್ರತಿಕ್ರಿಯೆ ಹೇಗಿದೆ?

ಅವರು ಹಾಡನ್ನು ಬಹಳ ಇಷ್ಟಪಟ್ಟಿದ್ದಾರೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಡನ್ನು ಇಷ್ಟಪಟ್ಟಿದ್ದಾರೆ. ರ್ಯಾಲಿ ಒಂದರಲ್ಲಿ ಅವರ ಜೊತೆಗೆ ನಿಂತು ಹಾಡು ಹಾಡಿದೆ, ಅವರೂ ಸಹ ಹಾಡು ಕೇಳಿ ಖುಷಿಯಾದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಹಾಡನ್ನು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಹಾಕಿಕೊಂಡಿದ್ದಾರೆ. ನನ್ನ ಯಾವುದೇ ಹಾಡಿಗೂ ಇಷ್ಟೋಂದು ಪ್ರಚಾರ ಸಿಕ್ಕಿರಲಿಲ್ಲ. ವೈಯಕ್ತಿಕವಾಗಿ ನನಗೂ ಇದು ಖುಷಿ ತಂದಿದೆ.

ಒಂದು ರಾಜಕೀಯ ಪಕ್ಷದ ಪರವಾಗಿ ಹಾಡು ಮಾಡಿದ್ದೀರ, ಇತರರಿಂದ ಟೀಕೆಗಳು ಬಂದಿರಬೇಕಲ್ಲ?

ಖಂಡಿತ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭ್ರಷ್ಟ ಸರ್ಕಾರ ಪರ ನಿಂತಿದ್ದೀಯ ಎಂದಿದ್ದಾರೆ. ಹಣ ತಗೊಂಡು ಹಾಡು ಮಾಡಿದ್ದೀಯ, ಮಾರಿಕೊಂಡಿದ್ದೀಯ ಎಂದೆಲ್ಲ ಹೇಳಿದ್ದಾರೆ. ಆದರೆ ನನ್ನ ಮಟ್ಟಿಗೆ ನಾನು ಪ್ರಾಮಾಣಿಕನಾಗಿದ್ದೇನೆ. ನಾನು ಹಾಡುಗಾರ, ಹಾಡು ಕಟ್ಟುವುದು ನನ್ನ ಕೆಲಸ. ಬಿಜೆಪಿಗೆ ಮಾತ್ರವಲ್ಲ ಬೇರೆ ಪಕ್ಷದವರು ಕೇಳಿದ್ದರೂ ನಾನು ಹಾಡು ಮಾಡಿಕೊಟ್ಟಿರುತ್ತಿದ್ದೆ. ಬಿಜೆಪಿಯವರು ಮೊದಲು ಕೇಳಿದರು ಹಾಗಾಗಿ ಅವರಿಗೆ ಮಾಡಿಕೊಟ್ಟಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಸಭ್ಯವಾಗಿ ಬೈಯ್ಯಲೆಂದೇ ಇದ್ದಾರೆ ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ಬಿಜೆಪಿಗೆ ಹಾಡು ಮಾಡಿಕೊಡಲು ಒಪ್ಪಲು ಕಾರಣವೇನು? ನಿಮಗೆ ಬಿಜೆಪಿ ಬಗ್ಗೆ ಒಲವಿದೆಯೇ?

ನಾನು ಪಕ್ಷ ಪ್ರೇಮಿ ಅಲ್ಲ. ಆದರೆ ನರೇಂದ್ರ ಮೋದಿಯವರ ಬಗ್ಗೆ ಅವರು ಮಾಡಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ. ನಾನು ಬಿಜೆಪಿಗೆ ಹಾಡು ಮಾಡಿಕೊಡಲು ಪ್ರಧಾನಿ ಮೋದಿಯವರೂ ಸಹ ಕಾರಣವೇ. ಮೋದಿಯವರು ಬಂದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ವಿದೇಶಗಳಲ್ಲಿ ನಮಗೆ ಸೂಕ್ತ ಗೌರವ ಧಕ್ಕುತ್ತಿದೆ. ಮುಂಚೆಯೆಲ್ಲ ಇರುತ್ತಿದ್ದ ಯುದ್ಧಭೀತಿಯಿಂದ ಭಾರತ ಈಗ ಮುಕ್ತವಾಗಿದೆ. ಭಾರತೀಯರು ಹೆಮ್ಮೆ ಪಡುವ ಕೆಲಸಗಳನ್ನು ಅವರು ಮಾಡಿದ್ದಾರೆ.

ಸಿನಿಮಾ ತಾರೆಯರಿಗೆ ರಾಜಕೀಯ ಹೊಸದಲ್ಲ, ನಿಮಗೆ ಅವಕಾಶ ಸಿಕ್ಕರೆ ಅಖಾಡಕ್ಕೆ ಇಳಿಯುತ್ತೀರ?

ನನಗೆ ಜನಸೇವೆಯ ಬಗ್ಗೆ ಒಲವಿದೆ. ಅವಕಾಶಗಳನ್ನು ಕೈಚೆಲ್ಲಬಾರದು, ಯಾವುದೇ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಆದರ್ಶನವನ್ನು ಜೀವನದಲ್ಲಿ ಪಾಲಿಸುತ್ತಾ ಬಂದಿದ್ದೇನೆ. ಹಾಗಾಗಿ ಅವಕಾಶ ಸಿಕ್ಕರೆ ಜನಸೇವೆಗೆ ಸಿದ್ಧವಾಗಿರುತ್ತೇನೆ. ಹಾಗೆಂದು ಯಾವುದೇ ಪಕ್ಷ ಅವಕಾಶ ಕೊಟ್ಟರು ಒಪ್ಪುತ್ತೇನೆ ಎಂದಲ್ಲ. ಸಿದ್ಧಾಂತಗಳು ಸಹ ಬಹಳ ಮುಖ್ಯವಾಗುತ್ತವೆ. ಆಯಾ ಸಂದರ್ಭ, ಪಕ್ಷಗಳ ಸಿದ್ಧಾಂತಗಳ ಆಧಾರದಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Wed, 3 May 23

ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ವಿಡಿಯೋ: ಬಿಗ್​ಬಾಸ್​ ಮನೆಯಲ್ಲಿ ಬಿಚ್ಚಿಕೊಂಡ ಬಾಲ್ಯದ ನೆನಪುಗಳು
ವಿಡಿಯೋ: ಬಿಗ್​ಬಾಸ್​ ಮನೆಯಲ್ಲಿ ಬಿಚ್ಚಿಕೊಂಡ ಬಾಲ್ಯದ ನೆನಪುಗಳು