‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್​ವುಡ್ ಶ್ರದ್ಧಾಂಜಲಿ

‘ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ಅಮ್ಮಾವ್ರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ’ ಎಂದು ನಟ ದರ್ಶನ್​ ಟ್ವೀಟ್​ ಮಾಡಿದ್ದಾರೆ.

‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್​ವುಡ್ ಶ್ರದ್ಧಾಂಜಲಿ
ಅಭಿನಯ ಶಾರದೆ ಜಯಂತಿ
Edited By:

Updated on: Jul 26, 2021 | 12:35 PM

ಹಿರಿಯ ನಟಿ ಜಯಂತಿ ನಿಧನವು ಕನ್ನಡ ಚಿತ್ರರಂಗಕ್ಕೆ ನೋವುಂಟು ಮಾಡಿದೆ. ಅಭಿನಯ ಶಾರದೆ ಎಂದೇ ಕರೆಸಿಕೊಳ್ಳುತ್ತಿದ್ದ ಪ್ರತಿಭಾವಂತ ನಟಿಯನ್ನು ಸ್ಯಾಂಡಲ್​ವುಡ್​ ಕಳೆದುಕೊಂಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜಯಂತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು (ಜು.26) ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಗಲಿಗೆ ನಟಿಗೆ ಚಂದನವನದ ಹಲವು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ‘ಜಯಂತಿ 500ಕ್ಕೂ ಹೆಚ್ಚು ಚಿತ್ರಗಳನ್ನ ಮಾಡಿದ್ದಾರೆ. ಇವತ್ತಿನ ನಟಿಯರು ಅಷ್ಟು ಸಿನಿಮಾ ಮಾಡಲು‌ ಸಾಧ್ಯವಿಲ್ಲ. ಒನಕೆ ಓಬವ್ವ ಅಂದ್ರೆ ಜಯಂತಿಯಮ್ಮಾನೇ ನೆನಪಿಗೆ ಬರ್ತಾರೆ’ ಎಂದು ನಟಿ ಸೋನು ಗೌಡ ಕಂಬನಿ ಮಿಡಿದಿದ್ದಾರೆ.

ಹಿರಿಯ ನಟ ಶ್ರೀನಿವಾಸ್​ ಮೂರ್ತಿ ಕೂಡ ಸಂತಾಪ ಸೂಚಿಸಿದ್ದಾರೆ. ‘ನಮ್ಮದು ಹಲವು ವರ್ಷಗಳ ಒಡನಾಟ. ಕೊರೊನಾ ಬಗ್ಗೆಯೂ ಇತ್ತೀಚಿಗೆ ಮಾತನಾಡಿದ್ರು. ಇತ್ತೀಚಿಗೆ ನೋಡೋಕೆ ಸಾಧ್ಯವಾಗಲಿಲ್ಲ. ಅವರನ್ನ ಈ ರೀತಿ ನೋಡೋ ದೌರ್ಭಾಗ್ಯ ನಮ್ಮದಾಗಿದೆ. ಯಾವುದೇ ಪಾತ್ರವಾದ್ರೂ ಸುಲಭವಾಗಿ ನಿರ್ವಹಿಸುತ್ತಿದ್ದರು. ದೇವರು ಜಯಂತಿ ಆತ್ಮಕ್ಕೆ ಶಾಂತಿ ನೀಡಲಿ. ಅವರ ಮಾತೃಭಾಷೆ ತೆಲುಗು ಆಗಿದ್ರೂ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು’ ಎಂದಿದ್ದಾರೆ ಶ್ರೀನಿವಾಸ ಪೂರ್ತಿ.

‘ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ ಮಾಡಿ ಅತ್ಯುತ್ತಮ ನಟಿ ಅನ್ನೋದನ್ನು ಜಯಂತಿ ತೋರಿಸಿಕೊಟ್ಟಿದ್ರು. ಅವರ ಅಗಲಿಕೆಯಿಂದ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ ಆಗಿದೆ. ದೇವರು ಅವರ ಮಗನಿಗೆ ದುಃಖ ಭರಿಸುವ ಧೈರ್ಯ ಕೊಡಲಿ. ಅವರ ಅಗಲಿಕೆ ನನಗೆ ತುಂಬಾ ನೋವಾಗಿದೆ. ಭಗವಂತ ಕುಟುಂಬ ವರ್ಗಕ್ಕೆ ನೋವು ಸಹಿಸುವ ಶಕ್ತಿ ನೀಡಲಿ. ಸಮಸ್ತ ಅಭಿಮಾನಿಗಳು ಅವರ ಮಗನಿಗೆ ಹಾರೈಸಲಿ’ ಎಂದು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.

‘ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ಅಮ್ಮಾವ್ರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ’ ಎಂದು ನಟ ದರ್ಶನ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ನಿಧನ; ಗಣ್ಯರ, ಅಭಿಮಾನಿಗಳ ಸಂತಾಪ

Jayanthi Photos: ಕಮಲಾಕುಮಾರಿಯಿಂದ ಅಭಿನಯ ಶಾರದೆಯಾಗುವ ತನಕ ಜಯಂತಿ ನಡೆದುಬಂದ ಹಾದಿ

Published On - 12:19 pm, Mon, 26 July 21