‘ದಂಡತೀರ್ಥ’ ಚಿತ್ರದ ಟೈಟಲ್​ ಅನಾವರಣ; ಇದು ಜೂನಿಯರ್​ ದರ್ಶನ್​ ನಟನೆಯ ಸಿನಿಮಾ

|

Updated on: Dec 25, 2023 | 5:01 PM

ಹರಿಪ್ರಾಣ ಅವರು ‘ದಂಡತೀರ್ಥ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್​ ದರ್ಶನ್ ಎಂದೇ ಫೇಮಸ್​ ಆಗಿರುವ ಅವಿನಾಶ್ ಜೊತೆ ರಜನಿಕಾಂತ್, ಕುರಿ ಪ್ರತಾಪ್, ಚಂದ್ರಪ್ರಭ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ಶೀರ್ಷಿಕೆ ಅನಾವರಣ ಆಗಿದೆ.

‘ದಂಡತೀರ್ಥ’ ಚಿತ್ರದ ಟೈಟಲ್​ ಅನಾವರಣ; ಇದು ಜೂನಿಯರ್​ ದರ್ಶನ್​ ನಟನೆಯ ಸಿನಿಮಾ
‘ದಂಡತೀರ್ಥ’ ಸಿನಿಮಾ ತಂಡ
Follow us on

ವಿಶೇಷವಾಗಿ ಟೈಟಲ್​ ಪೋಸ್ಟರ್​ ಅನಾವರಣ ಮಾಡುವ ಮೂಲಕ ‘ದಂಡತೀರ್ಥ’ (Dandathirtha) ಚಿತ್ರತಂಡ ಗಮನ ಸೆಳೆದಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಪಝಲ್ ರೀತಿಯಲ್ಲಿ ಈ ಚಿತ್ರದ ಕಲಾವಿದರು ಎಲ್ಲವನ್ನೂ ಜೋಡಿಸಿದಾಗ ‘ಪವರ್ ಸ್ಟಾರ್’ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ ಭಾವಚಿತ್ರ ಮೂಡಿಬಂತು. ಬಳಿಕ ಅದನ್ನು ತಿರುಗಿಸಿ ನೋಡಿದಾಗ ‘ದಂಡತೀರ್ಥ’ ಸಿನಿಮಾದ ಟೈಟಲ್​ ಅನಾವರಣ ಆಯಿತು. ಈ ರೀತಿ ಡಿಫರೆಂಟ್​ ಆಗಿ ತಮ್ಮ ಸಿನಿಮಾದ ಶೀರ್ಷಿಕೆ ರಿವೀಲ್​ ಮಾಡಿದ ಬಳಿಕ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಹೊಸ ವರ್ಷದಿಂದ ‘ದಂಡತೀರ್ಥ’ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಲಿದೆ.

ಇತ್ತೀಚೆಗೆ ವೈಕುಂಠ ಏಕಾದಶಿ ಪ್ರಯುಕ್ತ ‘ದಂಡತೀರ್ಥ’ ಸಿನಿಮಾದ ಸುದ್ದಿಗೋಷ್ಠಿಯನ್ನು ಬೆಂಗಳೂರಿನ ಕಲಾವಿದರ ಸಂಘದ ಕಟ್ಟದಲ್ಲಿ ನಡೆಸಲಾಯಿತು. ಅಂದಾಜು 75ಕ್ಕೂ ಅಧಿಕ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಹರಿಪ್ರಾಣ ಅವರು ಈಗ ‘ಪ್ರಾಣ ಪ್ರೊಡಕ್ಷನ್’ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ.

ಇದನ್ನೂ ಓದಿ: ‘ಕಣ್ಣಾಮುಚ್ಚೆ’ ಸಿನಿಮಾಗೆ ರಾಜೇಶ್​ ರಾಮನಾಥ್​ ಸಂಗೀತ; ಲಿರಿಕಲ್​ ವಿಡಿಯೋ ರಿಲೀಸ್​

‘ದಂಡತೀರ್ಥ’ ಚಿತ್ರಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ. ಹರಿಪ್ರಾಣ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್​ ದರ್ಶನ್ ಎಂದೇ ಫೇಮಸ್​ ಆಗಿರುವ ಅವಿನಾಶ್ ಜೊತೆ ರಜನಿಕಾಂತ್, ರೇಣುಕಾ ಪ್ರಸಾದ್, ಕುರಿ ಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವು ಸಕಲೇಶಪುರ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್, ಶರಣ್, ಬೇಬಿ ಶಾನ್ವಿ, ಮಾನಸಾ ಗೌಡ, ಪೂಜಾ ರಾಮಚಂದ್ರ ಸೇರಿದಂತೆ ಅನೇಕ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಗೆಳೆಯ ರಾಜ್‌ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ

ಈ ಸಿನಿಮಾಗೆ ಜಿ. ರಂಗಸ್ವಾಮಿ ಅವರು ಛಾಯಾಗ್ರಹಣ, ಜಿ.ಪಿ. ಆರಾಧ್ಯ ಅವರು ನೃತ್ಯ ನಿರ್ದೇಶನ, ಲೇಖನಾ ಅವರು ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ವಿಜಯ್ ಕೆಲಸ ಮಾಡುತ್ತಿದ್ದಾರೆ. ‘ದಂಡತೀರ್ಥ’ ಚಿತ್ರದಲ್ಲಿ ರಿವೇಂಜ್​ ಸ್ಟೋರಿ ಇರಲಿದೆ. ಸ್ಟಿಂಗ್​ ಆಪರೇಷನ್​ ರೀತಿಯ ದೃಶ್ಯಗಳು ಇರಲಿವೆ. ಹಾಸ್ಯ ನಟರನ್ನು ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುವುದು ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರಾಣ ಆಡಿಯೋ’, ‘ಪ್ರಾಣ ಎಂಟರ್​ಟೇನ್ಮೆಂಟ್​’ ಯೋಜನೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹೊಸಬರಿಗೆ ವೇದಿಕೆ ಕಲ್ಪಿಸಿಕೊಡುವುದಾಗಿ ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.