ಮಂಗಳವಾರ ಹೇಗಿದೆ ‘ಜೂನಿಯರ್’ ಹಾಗೂ ‘ಎಕ್ಕ’ ಸಿನಿಮಾ ಕಲೆಕ್ಷನ್?

ಜೂನಿಯರ್ ಮತ್ತು ಎಕ್ಕ ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿವೆ. ಎರಡೂ ಚಿತ್ರಗಳು ಒಂದೇ ಹಂತದಲ್ಲಿ ಕಲೆಕ್ಷನ್ ಮಾಡುತ್ತಿವೆ. ಕಿರೀಟಿ ಅವರ ಜೂನಿಯರ್ ಚಿತ್ರವು ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಕಂಡಿದೆ. ‘ಎಕ್’ಕ ಚಿತ್ರವೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ಚಿತ್ರರಂಗಕ್ಕೆ ಇದು ಸಂತೋಷದ ಸುದ್ದಿ.

ಮಂಗಳವಾರ ಹೇಗಿದೆ ‘ಜೂನಿಯರ್’ ಹಾಗೂ ‘ಎಕ್ಕ’ ಸಿನಿಮಾ ಕಲೆಕ್ಷನ್?
ಎಕ್ಕ-ಜೂನಿಯರ್

Updated on: Jul 23, 2025 | 7:33 AM

‘ಜೂನಿಯರ್’ ಹಾಗೂ ‘ಎಕ್ಕ’ ಸಿನಿಮಾಗಳು ಕಳೆದ ವಾರ ರಿಲೀಸ್ ಆಗಿ ಯಶಸ್ಸು ಕಂಡಿವೆ. ಈ ಚಿತ್ರದ ಮೂಲಕ ರಾಜ್​ಕುಮಾರ್ ಕುಟುಂಬದ ಕುಡಿ ಯುವ ಹಾಗೂ ರಾಜಕಾರಣಿ ಜನಾರ್ಧನ್ ರೆಡ್ಡಿ ಮಗ ಕಿರೀಟಿ (Kireeti Reddy) ಗೆಲುವು ಕಂಡಿದ್ದಾರೆ. ಈ ಚಿತ್ರಗಳ ಯಶಸ್ಸಿನಿಂದ ಫ್ಯಾನ್ಸ್ ಕೂಡ ಖುಷಿ ಆಗಿದ್ದಾರೆ. ಕನ್ನಡದಲ್ಲಿ ಎರಡು ಒಳ್ಳೆಯ ಚಿತ್ರಗಳು ಸಿಕ್ಕವು ಎಂದು ಸಿನಿಪ್ರಿಯರು ಸಂತಸ ಗೊಂಡಿದ್ದಾರೆ. ಈ ಚಿತ್ರಗಳು ಮಂಗಳವಾರವೂ ಉತ್ತಮ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ.

‘ಜೂನಿಯರ್’ ಸಿನಿಮಾ ಮೂಲಕ ಕಿರೀಟಿ ಅವರು ಅಭೂತಪೂರ್ವ ಓಪನಿಂಗ್ ಪಡೆದಿದ್ದಾರೆ. ಈ ಸಿನಿಮಾ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಮಂಗಳವಾರದ ಗಳಿಕೆ ಸೇರಿದರೆ ಸಿನಿಮಾಗೆ 7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮಂಗಳವಾರ (ಜುಲೈ 22) ಈ ಸಿನಿಮಾ ಸುಮಾರು 60-80 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ವಿಶೇಷ ಎಂದರೆ ಈ ಚಿತ್ರವನ್ನು ಕನ್ನಡಕ್ಕಿಂತ ತೆಲುಗು ಮಂದಿಯೇ ಹೆಚ್ಚು ವೀಕ್ಷಿಸುತ್ತಿದ್ದಾರೆ. ಕಿರೀಟಿ ಡ್ಯಾನ್ಸ್ ಹಾಗೂ ಫೈಟ್ ಎಲ್ಲರಿಗೂ ಇಷ್ಟ ಆಗುತ್ತಿದೆ.

ಇದನ್ನೂ ಓದಿ: ‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?

ಇದನ್ನೂ ಓದಿ
ಮಂಗಳವಾರದ ‘ಸೈಯಾರ’ ಕಲೆಕ್ಷನ್​ಗೆ ‘ಪಠಾಣ್’ ದಾಖಲೆಯೇ ಉಡೀಸ್
ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?
‘ಸು ಫ್ರಮ್ ಸೋ’ ಚಿತ್ರದ ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಇಲ್ಲೊಂದು ಅಚ್ಚರಿಯ ವಿಷಯ ಇದೆ. ‘ಜೂನಿಯರ್’ ಕಲೆಕ್ಷನ್ ಮಾಡಿರೋ 7 ಕೋಟಿ ರೂಪಾಯಿಯಲ್ಲಿ ಸರಿ ಸುಮಾರು 1 ಕೋಟಿ ರೂಪಾಯಿ ಮಾತ್ರ ಕರ್ನಾಟಕದ್ದು. ಉಳಿದಿದ್ದೆಲ್ಲವೂ ತೆಲುಗು ಭಾಷೆಯಲ್ಲಿ ಆದ ಗಳಿಕೆ.

‘ಎಕ್ಕ’ ಸಿನಿಮಾ ಕಲೆಕ್ಷನ್

‘ಎಕ್ಕ’ ಸಿನಿಮಾ ಕಲೆಕ್ಷನ್ ಕೂಡ 7 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಚಿತ್ರದ ಮಂಗಳವಾರ (ಜುಲೈ 22) ಎಷ್ಟು ಗಳಿಕೆ ಮಾಡಿದೆ ಎಂಬುದರ ಪಕ್ಕಾ ಲೆಕ್ಕಾ ಇನ್ನೂ ಸಿಕ್ಕಿಲ್ಲ. ಕೆಲವು ವರದಿಗಳ ಪ್ರಕಾರ ಈ ಚಿತ್ರ ಕೂ 60 ಲಕ್ಷ ರೂಪಾಯಿ ಆಸುಪಾಸಿನಲ್ಲೇ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Wed, 23 July 25