ಎರಡು ವಾರಕ್ಕೆ ‘ಕಾಟೇರ’ ಸಿನಿಮಾ ಮಾಡಿದ ಗಳಿಕೆ ಎಷ್ಟು? ಬಾಕ್ಸ್ ಆಫೀಸ್​ ಸುಲ್ತಾನ್ ಆದ ದರ್ಶನ್

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ದರ್ಶನ್ ನಟನೆ, ಚಿತ್ರದ ಕಥೆ ಹಾಗೂ ತರುಣ್ ಸುಧೀರ್ ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದರು.

ಎರಡು ವಾರಕ್ಕೆ ‘ಕಾಟೇರ’ ಸಿನಿಮಾ ಮಾಡಿದ ಗಳಿಕೆ ಎಷ್ಟು? ಬಾಕ್ಸ್ ಆಫೀಸ್​ ಸುಲ್ತಾನ್ ಆದ ದರ್ಶನ್
ದರ್ಶನ್

Updated on: Jan 12, 2024 | 9:59 AM

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಸಿನಿಮಾದ ಗಳಿಕೆ ಹೀಗೆಯೇ ಮುಂದುವರಿದರೆ 200 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಅವರ ಫ್ಯಾನ್ಸ್ ಊಹಿಸಿದ್ದಾರೆ. ಆದರೆ, ಅದು ಅಷ್ಟು ಸುಲಭದಲ್ಲಿ ಇಲ್ಲ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು.

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ದರ್ಶನ್ ನಟನೆ, ಚಿತ್ರದ ಕಥೆ ಹಾಗೂ ತರುಣ್ ಸುಧೀರ್ ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದರು. ಈ ಚಿತ್ರ ಎರಡು ವಾರಕ್ಕೆ ಬರೋಬ್ಬರಿ 157 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚುವುದರಿಂದ ಗಳಿಕೆ ಸ್ವಲ್ಪ ಇಳಿಕೆ ಕಾಣಬಹುದು ಎಂದು ಊಹಿಸಲಾಗಿದೆ. ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ದರ್ಶನ್ ದಾಖಲೆ ಬರೆದಿದ್ದಾರೆ.

‘ಕಾಟೇರ’ ಸಿನಿಮಾ ಮೊದಲ ವಾರದಲ್ಲಿ 406 ಚಿತ್ರಮಂದಿರ ಹಾಗೂ 72 ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನ ಕಂಡಿತ್ತು. ಎರಡನೇ ವಾರದಲ್ಲಿ ಥಿಯೇಟರ್ ಸಂಖ್ಯೆ 462ಕ್ಕೆ ಏರಿಕೆ ಆಯಿತು. ಮೂರನೇ ವಾರದಲ್ಲಿ 416 ಚಿತ್ರಮಂದಿರಗಳಲ್ಲಿ ‘ಕಾಟೇರ’ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಸಂಖ್ಯೆ 72 ಇದೆ. ಈ ವಾರ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಇವುಗಳಿಗೆ ‘ಕಾಟೇರ’ ಸ್ಪರ್ಧೆ ಕೊಟ್ಟು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಅಡ್ಡಗಾಲು ಹಾಕುವ ಹಿತ ಶತ್ರುಗಳಿಗೆ ದುಬೈನಿಂದ ಸಂದೇಶ ಕೊಟ್ಟ ದರ್ಶನ್

ಎರಡು ವಾರಗಳಲ್ಲಿ ಬರೋಬ್ಬರಿ 24, 17, 441 ಟಿಕೆಟ್​ಗಳು ಮಾರಾಟ ಆಗಿವೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇನ್ನೂ ಕೆಲವು ದಿನಗಳ ಕಾಲ ‘ಕಾಟೇರ’ ಅಬ್ಬರಿಸಲಿದೆ. ಟಿವಿ ಪ್ರಸಾರ ಹಕ್ಕನ್ನು ಜೀ ಕನ್ನಡ ಹಾಗೂ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ