ಇತಿಹಾಸ ಬರೆಯಲು ಸಿದ್ಧವಾದ ‘ಕಾಟೇರ’; ಐದು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?

|

Updated on: Jan 03, 2024 | 9:26 AM

Kaatera Movie Collection: ವೀಕೆಂಡ್ ಸಂದರ್ಭದಲ್ಲಿ ಸಿನಿಮಾಗಳು ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಕಲೆಕ್ಷನ್ ಮಾಡಲು ಚಿತ್ರಗಳು ಕಷ್ಟಪಡುತ್ತವೆ. ಆದರೆ, ‘ಕಾಟೇರ’ ವಿಚಾರದಲ್ಲಿ ಹಾಗಾಗಿಲ್ಲ. ವಾರದ ದಿನವಾದ ಮಂಗಳವಾರವೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ.

ಇತಿಹಾಸ ಬರೆಯಲು ಸಿದ್ಧವಾದ ‘ಕಾಟೇರ’; ಐದು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?
ದರ್ಶನ್
Follow us on

‘ಕಾಟೇರ’ ಸಿನಿಮಾ (Kaatera Movie) ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ಹೊಸ ಇತಿಹಾಸ ಬರೆಯಲು ರೆಡಿ ಆಗಿದೆ. ಈ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್​ನತ್ತ ದಾಪುಗಾಲು ಇಡುತ್ತಿದೆ. ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಿಂದ ದರ್ಶನ್ (Darshan) ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾ ಸಿಕ್ಕಂತಾಗಿದೆ. ಈ ಖುಷಿಯನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.

ದರ್ಶನ್ ಅವರ ಆಪ್ತರು ನೀಡಿರುವ ಲೆಕ್ಕಾಚಾರದ ಪ್ರಕಾರ ‘ಕಾಟೇರ’ ಚಿತ್ರ ಡಿಸೆಂಬರ್ 29ರಂದು 19.79 ಕೋಟಿ ರೂಪಾಯಿ ಕಲೆ ಹಾಕಿತು. ಆ ಬಳಿಕ ಡಿಸೆಂಬರ್ 30ರಂದು 17.35 ಕೋಟಿ ರೂಪಾಯಿ, ಡಿಸೆಂಬರ್ 31ರಂದು 20.94 ಕೋಟಿ ರೂಪಾಯಿ ಹಾಗೂ ಜನವರಿ 1ರಂದು 18.26 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ಜನವರಿ 2ರಂದು ಚಿತ್ರಕ್ಕೆ 9.24 ಕೋಟಿ ರೂಪಾಯಿ ಹರಿದುಬಂದಿದೆ. ಈ ಮೂಲಕ ಸಿನಿಮಾದ ಗಳಿಕೆ 86.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವೀಕೆಂಡ್ ಸಂದರ್ಭದಲ್ಲಿ ಸಿನಿಮಾಗಳು ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಕಲೆಕ್ಷನ್ ಮಾಡಲು ಚಿತ್ರಗಳು ಕಷ್ಟಪಡುತ್ತವೆ. ಆದರೆ, ‘ಕಾಟೇರ’ ವಿಚಾರದಲ್ಲಿ ಹಾಗಾಗಿಲ್ಲ. ವಾರದ ದಿನವಾದ ಮಂಗಳವಾರವೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಥಿಯೇಟರ್​ಗೆ ‘ಕಾಟೇರ’ ನೋಡಲು ಒಮ್ಮೆ ಹೋದವರು ಮತ್ತೊಮ್ಮೆ ಹೋಗುತ್ತಿದ್ದಾರೆ. ಇದರಿಂದ ಕಲೆಕ್ಷನ್ ಹೆಚ್ಚುತ್ತಿದೆ.

ಇದನ್ನೂ ಓದಿ: ‘ಕಾಟೇರ’ ಚಿತ್ರಕ್ಕೆ ತೆಲುಗು, ತಮಿಳಿನಿಂದ ಬಂತು ಬೇಡಿಕೆ; ಬ್ರೇಕಿಂಗ್​ ನ್ಯೂಸ್​ ಕೊಟ್ಟ ತರುಣ್​ ಸುಧೀರ್​

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ. ಅವರಿಗೆ ಮೊದಲ ಚಿತ್ರದಲ್ಲೇ ಜನಪ್ರಿಯತೆ ಸಿಕ್ಕಿದೆ. ಶ್ರುತಿ, ಅಚ್ಯುತ್​ಕುಮಾರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತರುಣ್ ಸುಧೀರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಅವರಿಗೆ ಈ ಚಿತ್ರದಿಂದ ದೊಡ್ಡ ಲಾಭ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Wed, 3 January 24