‘ಕಾಟೇರ’ ಗೆಲುವು: ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​

ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿತ್ತು. ಆದರೆ ಆ ಮಾತನ್ನು ಸುಳ್ಳು ಮಾಡುವ ರೀತಿಯಲ್ಲಿ ‘ಕಾಟೇರ’ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರು ಒಂದು ಕೆಲಸ ಮಾಡಿದ್ದಾರೆ. ಈ ಸಿನಿಮಾದ ಬರಹಗಾರರಾದ ಜಡೇಶ್​, ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ಕಾಟೇರ’ ಗೆಲುವು: ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​
ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​

Updated on: May 02, 2024 | 9:23 PM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಟನೆಯ ‘ಕಾಟೇರ’ (Kaatera) ಸಿನಿಮಾ ಕಳೆದ ವರ್ಷ ಡಿಸೆಂಬರ್​ 29ರಂದು ಬಿಡುಗಡೆಯಾಗಿ ಧೂಳೆಬ್ಬಿಸಿತು. ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಇಡೀ ತಂಡಕ್ಕೆ ಖುಷಿ ಇದೆ. ಈ ಸಂಭ್ರಮದಲ್ಲಿ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಹಾಗೂ ನಟ ದರ್ಶನ್​ ಅವರು ಒಂದು ಮಹತ್ವದ ಕೆಲಸ ಮಾಡಿದ್ದಾರೆ. ‘ಕಾಟೇರ’ ಸಿನಿಮಾ ತಂಡದ ಮೂವರಿಗೆ ಕಾರು ಗಿಫ್ಟ್​ ನೀಡಲಾಗಿದೆ. ಇಂದು (ಮೇ 2) ಬೆಂಗಳೂರಿನಲ್ಲಿ ದಿಢೀರ್​ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಹಾಗೂ ದರ್ಶನ್ (Darshan)​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್​ಲೈನ್​ ವೆಂಕಟೇಶ್​ ಅವರು ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ತಿಳಿಸಿದರು. ‘ಎಲ್ಲರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು. ಅದೇ ರೀತಿ ಸೂರಜ್​ ಕೂಡ ಒಳ್ಳೆಯ ಪಾತ್ರ ಮಾಡಿದರು. ಆದರೆ ಚಿತ್ರೀಕರಣ ಮುಗಿದ ಬಳಿಕ ಅವರಿಗೆ ಅಪಘಾತ ಆಯಿತು. ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರನ್ನು ಗಮನದಲ್ಲಿ ಇಟ್ಟುಕೊಂಡು ನಾನು, ದರ್ಶನ್​ ಮತ್ತು ತರುಣ್​ ಈ ನಿರ್ಧಾರಕ್ಕೆ ಬಂದೆವು. ಈ ಮೂವರಿಗೂ ಕಾರು ಕೊಡಬೇಕು ಎನಿಸಿತು’ ಎಂದು ಅವರು ಹೇಳಿದರು.

ಕೈ ನೋವಿನ ನಡುವೆಯೂ ಸ್ಟಾರ್​ ಚಂದ್ರು ಪರ ನಟ ದರ್ಶನ್​ ಭರ್ಜರಿ ಪ್ರಚಾರ

‘ನೂರು ದಿನದ ಸಂಭ್ರಮವನ್ನು ಎಲ್ಲೋ ಆಡಿಟೋರಿಯಂನಲ್ಲಿ ಮಾಡುವ ಬದಲು ಈ ಮೂವರಿಗೆ ಕಾರು ನೀಡಿ ಸಂಭ್ರಮಿಸೋಣ ಅಂತ ನಮಗೆ ಅನಿಸಿತು. ಮಾಸ್ತಿ, ಜಡೇಶ್​ ಹಾಗೂ ಸೂರಜ್​ ಅವರಿಗೆ ಶುಭವಾಗಲಿ. ಅವರು ಶ್ರದ್ಧೆಯಿಂದ ಮಾಡಿದ ಕೆಲಸ ಜನತೆಗೆ ಖುಷಿ ಆಗಿದೆ. ಅದಕ್ಕಾಗಿ ಅವರಿಗೆ ಚಿಕ್ಕ ಕಾಣಿಕೆ’ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದರು.

Darshan: ಮಾಸ್ತಿ ಜಡೇಶ್ ಸೂರಜ್​ಗೆ ಕಾರ್ ಗಿಫ್ಟ್ ಕೊಟ್ಟ ರಾಕ್​ಲೈನ್ ವೆಂಕಟೇಶ್ | #TV9D

‘ಕನ್ನಡ ಚಿತ್ರರಂಗದಲ್ಲಿ ಬರಹಗಾರರ ಕೊರತೆ ಇದೆ. ಮಲಯಾಳಂ ಸಿನಿಮಾಗಳನ್ನು ಚೆನ್ನಾಗಿ ಓಡುತ್ತವೆ. ಅದಕ್ಕೆ ಕಥೆಯೇ ಕಾರಣ. ನಮ್ಮ ಚಿತ್ರರಂಗದಲ್ಲಿ ಕಥೆಗಾರರನ್ನು ಹುರಿದುಂಬಿಸಬೇಕು. ಆ ಉದ್ದೇಶದಿಂದ ನಾವು ಕಾರು ನೀಡುವ ನಿರ್ಧಾರಕ್ಕೆ ಬಂದೆವು. ದರ್ಶನ್​ ಮತ್ತು ತರುಣ್​ ಅವರು ಈ ಚಿತ್ರಕ್ಕೆ ಕುಟುಂಬದ ಸದಸ್ಯರ ರೀತಿ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್​. ‘ಉಡುಗೊರೆಗೆ ಬೆಲೆ ಕಟ್ಟಬಾರದು. 10 ರೂಪಾಯಿದು ಆಗಿರುಬಹುದು, ಸಾವಿರ ರೂಪಾಯಿದು ಆಗಿರಬಹುದು. ಗಿಫ್ಟ್​ ಅಂದ್ರೆ ಗಿಫ್ಟ್​ ಅಷ್ಟೇ. ಬೆಲೆಯಿಂದ ಅಳೆಯಬಾರದು’ ಎಂದಿದ್ದಾರೆ ದರ್ಶನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us