‘ಕಬ್ಜ’ ಸಿನಿಮಾಗೆ (Kabzaa Movie) ಪ್ರಚಾರ ನೀಡುವ ಕೆಲಸ ಆರಂಭ ಆಗಿದೆ. ಮಾರ್ಚ್ 17ರಂದು ಈ ಚಿತ್ರ ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಕಾರ್ಯಗಳು ನಡೆಯಲಿವೆ. ಟ್ರೇಲರ್ ರಿಲೀಸ್ಗೂ ಮೊದಲು ಬೇರೆ ರಾಜ್ಯದ ಹಲವು ನಗರಗಳಲ್ಲಿ ಸಿನಿಮಾದ ಸಾಂಗ್ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಈಗ ‘ಕಬ್ಜ ಸಿನಿಮಾದ ಹಕ್ಕುಗಳು ಮಾರಾಟ ಆಗಿರುವ ಬಗ್ಗೆ ನಿರ್ದೇಶಕ ಆರ್. ಚಂದ್ರು (R. Chandru) ಅವರು ಮಾತನಾಡಿದ್ದಾರೆ.
‘ಕಬ್ಜ’ ಚಿತ್ರದ ಬಗ್ಗೆ ಹಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ‘ಈ ಚಿತ್ರದ ವಿಶ್ಯುವಲ್ಸ್ ಕೆಜಿಎಫ್ ಸಿನಿಮಾ ರೀತಿಯೇ ಇದೆ’ ಎಂದು ಅನೇಕರು ಟೀಕೆ ಮಾಡಿದ್ದರು. ಇದಕ್ಕೆ ಟೀಂ ಕಡೆಯಿಂದ ಸ್ಪಷ್ಟನೆ ಬಂದಿತ್ತು. ‘ಕೆಜಿಎಫ್ ರೀತಿ ಇರುವುದಕ್ಕೆ ಕಬ್ಜ ಸಿನಿಮಾಗೆ ಒಟಿಟಿ ಕಡೆಯಿಂದ ದೊಡ್ಡ ಆಫರ್ ಬಂದಿದೆ’ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಆರ್. ಚಂದ್ರು ಕಡೆಯಿಂದ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
‘ನಿರ್ದೇಶಕನಾಗಿ, ನಿರ್ಮಾಪಕನಾಗಿ ಖುಷಿಯಾಗಿದ್ದೇನೆ. ಅಮೇಜಾನ್ ಪ್ರೈಮ್ ವಿಡಿಯೋದವರು ಕಬ್ಜ ಚಿತ್ರದ ಒಟಿಟಿ ಹಕ್ಕನ್ನು ಪಡೆದಿದ್ದಾರೆ. ದೊಡ್ಡ ಮೊತ್ತಕ್ಕೆ ಕಬ್ಜ ಹಕ್ಕು ಮಾರಾಟ ಆಗಿದೆ. ಅವರು ಕಣ್ಣುಮುಚ್ಚಿಕೊಂಡು ಸಿನಿಮಾನ ಖರೀದಿಸಿಲ್ಲ. ನಾನು ಕಂಟೆಂಟ್ಗಳನ್ನು ಕಟ್ ಮಾಡಿ, ಎಡಿಟ್ ಮಾಡಿಸಿ ಅವರ ಮುಂದೆ ಇಟ್ಟಿದ್ದೇನೆ. ಇದು ಕಬ್ಜ ಎಂದು ತೋರಿಸಿದ್ದೇನೆ. ಆಮೇಲೆ ಅವರು ಖರೀದಿ ಮಾಡಿದ್ದಾರೆ’ ಎಂದಿದ್ದಾರೆ ಚಂದ್ರು.
‘ಕನ್ನಡದ ಹಂಚಿಕೆ ಬಗ್ಗೆ ನಾನು ಇನ್ನೂ ಮಾತುಕತೆ ಆಗಿಲ್ಲ. ಹಿಂದಿಯಲ್ಲಿ ಆನಂದ್ ಪಂಡಿತ್ ಹಂಚಿಕೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಸುಧಾಕರ್ ರೆಡ್ಡಿ, ಮಲಯಾಳಂನಲ್ಲಿ ಬಾಂಬೆ ರಮೇಶ್, ತಮಿಳಿನಲ್ಲಿ ಲೈಕಾ ಅವರ ಜತೆ ಮಾತುಕತೆ ನಡೆಯುತ್ತಿದೆ. ನಾವು ಮೂರು ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಹೀಗಾಗಿ, ನಮ್ಮ ರೇಟ್ಗೆ ಅವರು ಬಂದರೆ ಮಾತ್ರ ನಾವು ಹಂಚಿಕೆ ಹಕ್ಕನ್ನು ನೀಡ್ತೀವಿ’ ಎಂದು ಚಂದ್ರು ಹೇಳಿದ್ದಾರೆ.
ಇದನ್ನೂ ಓದಿ: Kabzaa Song: ‘ಕಬ್ಜ’ ಲಿರಿಕಲ್ ಸಾಂಗ್ ಬಿಡುಗಡೆಗೆ ರಾಜಮೌಳಿ ಅತಿಥಿ? ಹೈದರಾಬಾದ್ನಲ್ಲಿ ಸದ್ದು ಮಾಡಲಿದೆ ಉಪ್ಪಿ ಚಿತ್ರ
‘ಕಬ್ಜ’ ಸಿನಿಮಾಗೆ ಆರ್.ಚಂದ್ರು ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್. ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಈ ಸಿನಿಮಾ ಮಾರ್ಚ್ 17ರಂದು ತೆರೆಗೆ ಬರುತ್ತಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:15 am, Wed, 1 February 23