R Chandru: ‘ಕಬ್ಜ’ ಪ್ರಚಾರಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಆರ್​. ಚಂದ್ರು ಪ್ಲ್ಯಾನ್​; ಜೋರಾಗಿದೆ ತಯಾರಿ

Kabzaa Movie | Upendra: ದೇಶದ ಪ್ರಮುಖ ನಗರಗಳಲ್ಲಿ ‘ಕಬ್ಜ’ ಚಿತ್ರದ ಒಂದೊಂದು ಸಾಂಗ್​ ರಿಲೀಸ್​ ಮಾಡಲು ಆರ್​. ಚಂದ್ರು ಸಿದ್ಧತೆ​ ಮಾಡಿಕೊಂಡಿದ್ದಾರೆ. ಟ್ರೇಲರ್​ ಬಿಡುಗಡೆಗೂ ದೊಡ್ಡ ಪ್ಲ್ಯಾನ್​ ಸಿದ್ಧವಾಗುತ್ತಿದೆ.

R Chandru: ‘ಕಬ್ಜ’ ಪ್ರಚಾರಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಆರ್​. ಚಂದ್ರು ಪ್ಲ್ಯಾನ್​; ಜೋರಾಗಿದೆ ತಯಾರಿ
ಆರ್. ಚಂದ್ರು, ಉಪೇಂದ್ರ
Follow us
ಮದನ್​ ಕುಮಾರ್​
|

Updated on: Jan 31, 2023 | 9:16 PM

ಖ್ಯಾತ ನಿರ್ದೇಶಕ ಆರ್​. ಚಂದ್ರು (R Chandru) ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಕಬ್ಜ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್​ ಅವರು ಅಭಿನಯಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ಬಣ್ಣ ಹಚ್ಚಿದ್ದಾರೆ. ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನದ ಪ್ರಯುಕ್ತ ‘ಕಬ್ಜ’ ಚಿತ್ರ (Kabzaa Movie) ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಈಗಾಗಲೇ ರಿಲೀಸ್​ ಆಗಿರುವ ಟೀಸರ್​ ಧೂಳೆಬ್ಬಿಸಿದೆ. ಈಗ ಚಿತ್ರದ ಮೊದಲ ಸಾಂಗ್​ ಬಿಡುಗಡೆ ಮಾಡಲು ಸಕಲ ತಯಾರಿ ನಡೆದಿದೆ. ಫೆಬ್ರವರಿ 4ರಂದು ಹೈದರಾಬಾದ್​ನಲ್ಲಿ ‘ಕಬ್ಜ’ ಚಿತ್ರದ ಮೊದಲ ಲಿರಿಕಲ್​ ಸಾಂಗ್​ ಅನಾವರಣ ಆಗಲಿದೆ. ಆ ಕುರಿತು ಮಾಹಿತಿ ನೀಡಲು ಆರ್​. ಚಂದ್ರು ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪುನೀತ್​ ಜನ್ಮದಿನದಂದು ‘ಕಬ್ಜ’ ರಿಲೀಸ್​:

‘ಕಬ್ಜ’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ಪ್ರಯುಕ್ತ (ಮಾ.17) ರಿಲೀಸ್​ ಮಾಡಲು ಆರ್​. ಚಂದ್ರು ತೀರ್ಮಾನಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಪುನೀತ್​ ರಾಜ್​ಕುಮಾರ್​ ಅವರು ಅಭಿಮಾನಿಗಳ ಪಾಲಿನ ದೇವರು. ಅನೇಕ ಬಾರಿ ಅವರು ನನ್ನನ್ನು ಹುರಿದುಂಬಿಸಿದ್ದರು. ಹುಷಾರಾಗಿ ಸಿನಿಮಾ ಮಾಡು ಅಂತ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಅವರ ಬರ್ತ್​ಡೇ ದಿನವೇ ಕಬ್ಜ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಆರ್. ಚಂದ್ರು ಹೇಳಿದ್ದಾರೆ.

ಇದನ್ನೂ ಓದಿ: Kabzaa: ಫೆ.4ಕ್ಕೆ ಅಬ್ಬರಿಸಲಿದೆ ‘ಕಬ್ಜ’ ಮೊದಲ ಹಾಡು; ಉಪ್ಪಿ ಚಿತ್ರದ ಅದ್ದೂರಿ ಇವೆಂಟ್​ಗೆ ಹೈದರಾಬಾದ್​ ಸಜ್ಜು

ಇದನ್ನೂ ಓದಿ
Image
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​
Image
ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್
Image
Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​
Image
‘ಕೆಜಿಎಫ್’ ತರ ‘ಕಬ್ಜ’ ಇದೆ ಅನ್ನೋದೇ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಎಂದ ಉಪೇಂದ್ರ

‘ಇದು ಒಂದು ಟೀಮ್​ ಮಾಡಿದ ಸಿನಿಮಾ’:

ಆರ್​. ಚಂದ್ರು ಅವರು ‘ಕಬ್ಜ’ ಘೋಷಣೆ ಮಾಡಿದ್ದು 3 ವರ್ಷಗಳ ಹಿಂದೆ. ಆದರೆ ಆ ಬಳಿಕ ಕೊರೊನಾ ಹಾವಳಿ ಶುರುವಾಯಿತು. ಹಲವಾರು ಅಡೆತಡೆಗಳು ಬಂದವು. ಅದನ್ನೆಲ್ಲ ಎದುರಿಸಿ, ಹತ್ತಾರು ಬಗೆಯಲ್ಲಿ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಯಿತು. ಇದೆಲ್ಲ ಸಾಧ್ಯವಾಗಿದ್ದು ಒಂದು ಟೀಮ್​ ವರ್ಕ್​ ಕಾರಣದಿಂದ ಎಂದು ಆರ್​. ಚಂದ್ರು ಹೇಳಿದ್ದಾರೆ. ‘ಎಲ್ಲರಿಂದಾಗಿ ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

‘ನಾನೂ ಕೂಡ ಫಸ್ಟ್​ ರ‍್ಯಾಂಕ್ ಬರಬೇಕು’:

‘ಕನ್ನಡದಲ್ಲಿ ಈಗಾಗಲೇ ಬಂದಿರುವ ಪ್ಯಾನ್​ ಇಂಡಿಯಾ ಸಿನಿಮಾಗಳು ಒಂದು ಹೆದ್ದಾರಿ ನಿರ್ಮಿಸಿವೆ. ಅದರಲ್ಲಿ ನಾವು ಸಾಗಬೇಕು. ಆಗಲೇ ಆ ಹೈವೇ ನಿರ್ಮಿಸಿದವರಿಗೆ ಗೌರವ ಸಿಕ್ಕಂತೆ ಆಗುತ್ತದೆ. ಯಾರಾದರೂ ಫಸ್ಟ್​ ರ‍್ಯಾಂಕ್ ಬಂದರೆ ನಾನೂ ಕೂಡ ರ‍್ಯಾಂಕ್ ಬರಬೇಕು ಅಂತ ಓದುತ್ತೇನೆ. ಸುಮ್ಮನೆ ಫಸ್ಟ್​ ರ‍್ಯಾಂಕ್ ಬರಬೇಕು ಅಂತ ಕನಸು ಕಾಣಲ್ಲ. ನನ್ನ ಜೊತೆ ಇಡೀ ತಂಡ ಕಷ್ಟಪಟ್ಟಿದೆ’ ಎಂದಿದ್ದಾರೆ ಆರ್​. ಚಂದ್ರು.

ಇದನ್ನೂ ಓದಿ: Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​

ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಹಾಡುಗಳು ರಿಲೀಸ್​:

ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಹಲವು ನಗರಗಳಲ್ಲಿ ಒಂದೊಂದು ಸಾಂಗ್​ ರಿಲೀಸ್​ ಮಾಡಬೇಕು ಎಂದು ಆರ್​. ಚಂದ್ರು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಟ್ರೇಲರ್​ ಬಿಡುಗಡೆ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ಈಗ ಪಾಸಿಟಿವ್​ ವಾತಾವರಣ ಇದೆ. ಒಂದು ಸಿನಿಮಾದ ಗೆಲುವಿಗೆ ಎಲ್ಲರೂ ಹಾರೈಸುತ್ತಿದ್ದಾರೆ’ ಎಂದು ಚಂದ್ರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ