AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​

R. Chandru | Upendra: ನಿರ್ದೇಶಕ ಆರ್​. ಚಂದ್ರು ಮತ್ತು ನಟ ಉಪೇಂದ್ರ ಅವರ ಕಾಂಬಿನೇಷನ್​ನಲ್ಲಿ ‘ಕಬ್ಜ’ ಚಿತ್ರ ಮೂಡಿಬರುತ್ತಿವೆ. ಹಿಂದಿ ಸಿನಿಪ್ರಿಯರ ವಲಯದಲ್ಲಿ ಈ ಚಿತ್ರದ ಕ್ರೇಜ್​ ಜೋರಾಗಿದೆ.

Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​
ಉಪೇಂದ್ರ
TV9 Web
| Edited By: |

Updated on:Nov 28, 2022 | 5:41 PM

Share

ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾಗಳ ಪಟ್ಟಿಯಲ್ಲಿ ‘ಕಬ್ಜ’ (Kabzaa Movie) ಕೂಡ ಸ್ಥಾನ ಪಡೆದುಕೊಂಡಿದೆ. ಈ ಚಿತ್ರ ಯಾವಾಗ ರಿಲೀಸ್​ ಆಗಲಿದೆ ಎಂದು ಸಿನಿಪ್ರಿಯರು ಕಾದಿದ್ದಾರೆ. ಚಿತ್ರದ ಬಿಡುಗಡೆಗೆ ಬೇಕಾದ ಸಕಲ ತಯಾರಿಯನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ. ನಿರ್ದೇಶಕ ಆರ್​. ಚಂದ್ರು (R. Chandru) ಅವರು ಬಹಳ ಕಾಳಜಿ ವಹಿಸಿ ‘ಕಬ್ಜ’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಇದು ಪ್ಯಾನ್​ ಇಂಡಿಯಾ ಚಿತ್ರ. ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ‘ಕಬ್ಜ’ ಹಿಂದಿ ವರ್ಷನ್​ಗೆ ಸಾಕಷ್ಟು ಬೇಡಿಕೆ ಇದೆ. ಈಗ ಕೇಳಿಬಂದಿರುವ ಲೇಟೆಸ್ಟ್​ ನ್ಯೂಸ್​ ಏನೆಂದರೆ, ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್​ ಪಂಡಿತ್​ (Anand Pandit) ಮುಂದೆ ಬಂದಿದ್ದಾರೆ. ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕುಗಳು ಅವರ ಪಾಲಾಗಿವೆ.

ಬಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಆನಂದ್​ ಪಂಡಿತ್​ ಅವರಿಗೆ ಇದೆ. ಸ್ವತಃ ನಿರ್ಮಾಪಕರು ಆಗಿರುವ ಅವರು ಬಿ-ಟೌನ್​ ವ್ಯವಹಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ‘ಕಬ್ಜ’ ಸಿನಿಮಾದ ಹಿಂದಿ ವಿತರಣೆ ಹಕ್ಕುಗಳನ್ನು ಅವರು ಪಡೆದುಕೊಂಡಿರುವುದರಿಂದ ಬಾಲಿವುಡ್​ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ರೆಟ್ರೋ ಕಾಲದ ಭೂಗತ ಲೋಕದ ಕಥೆಯನ್ನು ‘ಕಬ್ಜ’ ಸಿನಿಮಾ ಹೊಂದಿರಲಿದೆ. ಅದಕ್ಕೆ ಟೀಸರ್​ನಲ್ಲಿಯೇ ಸಾಕ್ಷಿ ಸಿಕ್ಕಿದೆ. ಬಾಲಿವುಡ್​ ಮಂದಿ ಕೂಡ ‘ಕಬ್ಜ’ ಟೀಸರ್​ ನೋಡಿ ಮೆಚ್ಚಿಕೊಂಡಿದ್ದಾರೆ. ಡಿಸೆಂಬರ್​ 1ರಂದು ಹೊಸ ಟೀಸರ್​ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇನ್ನುಳಿದ ಭಾಷೆಗಳಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳು ಯಾರ ಪಾಲಾಗಲಿವೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ.

ಇದನ್ನೂ ಓದಿ
Image
Shriya Saran: ಬ್ಯಾಕ್​ಲೆಸ್​ ಆಗಿ ಪೋಸ್​ ನೀಡಿದ ‘ಕಬ್ಜ’ ನಟಿ ಶ್ರೀಯಾ ಶರಣ್​; ಇಲ್ಲಿವೆ ವೈರಲ್ ಫೋಟೋಸ್​
Image
‘ಕೆಜಿಎಫ್’ ತರ ‘ಕಬ್ಜ’ ಇದೆ ಅನ್ನೋದೇ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಎಂದ ಉಪೇಂದ್ರ
Image
Kabzaa: ಉಪೇಂದ್ರ ಟ್ಯಾಲೆಂಟ್​ ಬಗ್ಗೆ ‘ಕಬ್ಜ’ ಹೀರೋಯಿನ್​ ಶ್ರೀಯಾ ಶರಣ್ ಏನು ಹೇಳ್ತಾರೆ? ವಿಡಿಯೋ ನೋಡಿ
Image
Kabzaa Teaser: ಹೇಗಿದೆ ನೋಡಿ ‘ಕಬ್ಜ’ ಟೀಸರ್​; ಹೊಸ ಹವಾ ಎಬ್ಬಿಸಿದ ಉಪೇಂದ್ರ-ಸುದೀಪ್​ ಚಿತ್ರದ ಝಲಕ್​

ನಿರ್ದೇಶಕ ಆರ್​. ಚಂದ್ರು ಮತ್ತು ನಟ ಉಪೇಂದ್ರ ಅವರ ಕಾಂಬಿನೇಷನ್​ನಲ್ಲಿ ‘ಕಬ್ಜ’ ಚಿತ್ರ ಮೂಡಿಬರುತ್ತಿವೆ. ಕಿಚ್ಚ ಸುದೀಪ್​ ಕೂಡ ಈ ಸಿನಿಮಾದಲ್ಲಿ ನಟಿಸಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ನಾಯಕಿಯಾಗಿ ಶ್ರೀಯಾ ಶರಣ್​ ನಟಿಸಿದ್ದಾರೆ. ಈ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ರಿಲೀಸ್​ ಡೇಟ್​ ಅನೌನ್ಸ್​ ಆಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಮೊದಲ ಟೀಸರ್​ ಬಿಡುಗಡೆ ಆದ ದಿನದಿಂದಲೂ ‘ಕಬ್ಜ’ ಸಿನಿಮಾ ಹವಾ ಮಾಡುತ್ತಿದೆ. ಅದ್ದೂರಿ ಮೇಕಿಂಗ್​ನ ಝಲಕ್​ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ. 29 ಮಿಲಿಯನ್​ಗಿಂತಲೂ ಅಧಿಕ ಬಾರಿ ಈ ಟೀಸರ್​​ ವೀಕ್ಷಣೆ ಕಂಡಿದೆ. ‘ಕಬ್ಜ’ ಮೇಲೆ ಸಿನಿಪ್ರಿಯರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದು ಸಾಕ್ಷಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:41 pm, Mon, 28 November 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ