‘ಕಬ್ಜ’ ಸಿನಿಮಾಗೆ (Kabzaa Movie) ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಕೆಜಿಫ್’, ‘ಕೆಜಿಎಫ್ 2’, ‘ವಿಕ್ರಾಂತ್ ರೋಣ’, ‘ಕಾಂತಾರ’ ಮೊದಲಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಅದಾದ ಬಳಿಕ ಬಂದ ಸಿನಿಮಾ ಇದಾಗಿದ್ದು, ಮೇಕಿಂಗ್ ಮೂಲಕ ಗಮನ ಸೆಳೆಯುತ್ತಿದೆ. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ ಇದಾಗಿದ್ದು, ಉಪೇಂದ್ರ, ಸುದೀಪ್ (Sudeep), ಶಿವಣ್ಣ ಚಿತ್ರದಲ್ಲಿದ್ದಾರೆ. ‘ಕಬ್ಜ’ ಚಿತ್ರಕ್ಕೆ ಪಾರ್ಟ್ 2 ಬರಲಿದೆ ಅನ್ನೋದು ಕೂಡ ಘೋಷಣೆ ಆಗಿದೆ. ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ‘ಕಬ್ಜ’ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಯಾವ ಪ್ಲಾಟ್ಫಾರ್ಮ್ಗಳಲ್ಲಿ ಎಷ್ಟು ರೇಟಿಂಗ್ ಸಿಕ್ಕಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
‘ಬುಕ್ ಮೈ ಶೋ’ ಸಿನಿಮಾದಲ್ಲಿ ಟಿಕೆಟ್ ಬುಕ್ ಮಾಡುವುದರ ಜೊತೆಗೆ ಸಿನಿಮಾಗೆ ರೇಟಿಂಗ್ ಕೂಡ ನೀಡಬಹುದು. ಪ್ರತಿ ವೀಕ್ಷಕ ತಾವು ಬುಕ್ ಮಾಡಿ ನೋಡಿದ ಸಿನಿಮಾಗೆ ತಮ್ಮದೇ ವಿಮರ್ಶೆ ನೀಡಬಹುದು. ಮುಕ್ತವಾಗಿ ಕಮೆಂಟ್ ಮಾಡಬಹುದು. ‘ಬುಕ್ ಮೈ ಶೋ’ದಲ್ಲಿ ‘ಕಬ್ಜ’ ಚಿತ್ರಕ್ಕೆ 10 ಅಂಕಕ್ಕೆ 9 ರೇಟಿಂಗ್ ಸಿಕ್ಕಿದೆ. ಟಿಕೆಟ್ ಬುಕ್ ಮಾಡಿದವರು ರೇಟಿಂಗ್ ನೀಡುವ ಆಯ್ಕೆಯನ್ನು ನೀಡಲಾಗಿದೆ. ಈವರೆಗೆ (ಮಾರ್ಚ್ 18 ಮುಂಜಾನೆ 7 ಗಂಟೆ) ಸುಮಾರು 3 ಸಾವಿರ ಜನರು ವೋಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗಲಿದೆ.
ಇದನ್ನೂ ಓದಿ: Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು
‘ಕಬ್ಜ’ ಸಿನಿಮಾ ಮೇಕಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಉಪೇಂದ್ರ ಅವರು ಮಾಸ್ ಆ್ಯಕ್ಷನ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸುದೀಪ್ ಹಾಗೂ ಶಿವಣ್ಣನ ಪಾತ್ರ ಕೂಡ ಇಲ್ಲಿ ಗಮನ ಸೆಳೆದಿದೆ. ಉಪೇಂದ್ರ ಅವರ ಹಿಂದೆಂದೂ ಕಾಣಿಸದ ಗೆಟಪ್ನಲ್ಲಿ ಬಂದಿದ್ದಾರೆ. ಶಿವಣ್ಣ ಕೂಡ ಅಷ್ಟೇ. ಕ್ಲೈಮ್ಯಾಕ್ಸ್ ಭರ್ಜರಿಯಾಗಿದೆ ಎನ್ನುವ ಅಭಿಪ್ರಾಯ ಪ್ರೇಕ್ಷಕರ ವಲಯದಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ: ‘ಕ್ಲೈಮ್ಯಾಕ್ಸ್ ಮಿಸ್ ಮಾಡೋ ಮಾತೇ ಇಲ್ಲ’; ‘ಕಬ್ಜ’ ನೋಡಿದ ಅಭಿಮಾನಿಗಳ ರಿಯಾಕ್ಷನ್
ಪ್ರತಿ ಚಿತ್ರಕ್ಕೆ ಟ್ವಿಟರ್ ವಿಮರ್ಶೆ ಕೂಡ ಮುಖ್ಯವಾಗುತ್ತದೆ. ‘ಕಬ್ಜ’ ಚಿತ್ರಕ್ಕೆ ಟ್ವಿಟರ್ನಲ್ಲಿ ಒಳ್ಳೆಯ ವಿಮರ್ಶೆ ಸಿಕ್ಕಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಕಮೆಂಟ್ ಮೂಲಕ ಅವರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕೆಲವರು ಉಪ್ಪಿ ಅವರ ಎನರ್ಜಿ ಮೆಚ್ಚಿದರೆ ಇನ್ನೂ ಕೆಲವರು ಚಂದ್ರು ಅವರ ನಿರ್ದೇಶನವನ್ನು ಹೊಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 am, Sat, 18 March 23