‘ಕಬ್ಜ’ ಸಿನಿಮಾದ (Kabzaa Movie) ಜ್ವರ ಜೋರಾಗುತ್ತಿದೆ. ಮಾರ್ಚ್ 17ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಸೆಲೆಬ್ರೇಷನ್ಗೆ ಈಗಾಗಲೇ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಲ್ಟಿ ಸ್ಟಾರರ್ ಸಿನಿಮಾ ಆಗಿರುವುದಕ್ಕೆ ಸಹಜವಾಗಿಯೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ವಾರ ಪರಭಾಷೆಯಲ್ಲಿ ಕೆಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರ ಜೊತೆಗೆ ಕಳೆದ ವಾರ ರಿಲೀಸ್ ಆದ ಸಿನಿಮಾಗಳು ಕೂಡ ಸ್ಪರ್ಧೆಗೆ ಇಳಿಯುತ್ತಿವೆ. ಈ ಪೈಕಿ ಯಾವ ಸಿನಿಮಾ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ. ‘ಕಬ್ಜ’ ಸಿನಿಮಾ ಬಗ್ಗೆ ಸದ್ಯ ಹೆಚ್ಚಿನ ನಿರೀಕ್ಷೆ ಇದೆ.
ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಮೆಚ್ಚುಗೆ ಪಡೆದಿದೆ. ಉಪೇಂದ್ರ, ಶಿವರಾಜ್ಕುಮಾರ್ ಹಾಗೂ ಸುದೀಪ್ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ಇದು ಅನ್ನೋದು ವಿಶೇಷ. ಈ ಕಾರಣಕ್ಕೂ ‘ಕಬ್ಜ’ ಸಿನಿಮಾ ಸ್ಪೆಷಲ್ ಎನಿಸಿಕೊಂಡಿದೆ. ಆರ್. ಚಂದ್ರು ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಯಾ ಶರಣ್ ನಾಯಕಿ. ದೊಡ್ಡ ತಾರಾ ಬಳಗ ಇರುವ ಚಿತ್ರ ಇದಾಗಿದ್ದು, ಪರಭಾಷೆಯಲ್ಲೂ ಚಿತ್ರಕ್ಕೆ ಹೆಚ್ಚಿನ ಹೈಪ್ ಸಿಗುತ್ತಿದೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದೆ.
ಇದನ್ನೂ ಓದಿ: Upendra: ‘ಕಬ್ಜ 2’ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಆರ್. ಚಂದ್ರು ಎದುರು ನಟರ ಲಿಸ್ಟ್ ನೀಡಿದ ಉಪೇಂದ್ರ
ರಾಣಿ ಮುಖರ್ಜಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಈಗ ಅವರ ನಟನೆಯ ‘ಮಿಸ್ ಚಟರ್ಜಿ vs ನಾರ್ವೇ’ ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಆಶಿಮಾ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಕಬ್ಜ’ ಹಿಂದಿ ವರ್ಷನ್ಗೆ ಈ ಚಿತ್ರ ಪೈಪೋಟಿ ನೀಡಲಿದೆ.
ಇದನ್ನೂ ಓದಿ: Kabzaa Movie: ಸಿನಿಮಾ ರಿಲೀಸ್ಗೂ ಮೊದಲು ತಿರುಪತಿಗೆ ಭೇಟಿ ಕೊಟ್ಟ ‘ಕಬ್ಜ’ ತಂಡ; ಇಲ್ಲಿದೆ ಗ್ಯಾಲರಿ
ಕಪಿಲ್ ಶರ್ಮಾ ಅವರ ನಟನೆಯ ‘ಸ್ವಿಗಾಟೋ’ ಕೂಡ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಕಳೆದ ವಾರ ಬಿಡುಗಡೆ ಆದ ಆದ ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಕೂಡ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ‘ಪಠಾಣ್’ ಅಬ್ಬರವೂ ಕಡಿಮೆ ಆಗಿಲ್ಲ. ಈ ಎಲ್ಲ ಕಾರಣಕ್ಕೆ ಹಿಂದಿಯಲ್ಲಿ ‘ಕಬ್ಜ’ ಚಿತ್ರಕ್ಕೆ ಹೆಚ್ಚಿನ ಪೈಪೋಟಿ ಇದೆ.
ನಾಗ ಶೌರ್ಯ ನಟನೆಯ ‘ಫಲಾನಾ ಅಬ್ಬಾಯಿ ಫಲಾನಾ ಅಮ್ಮಾಯಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ಇತ್ತೀಚೆಗೆ ಯಾವುದೇ ದೊಡ್ಡ ಬಜೆಟ್ ಚಿತ್ರ ರಿಲೀಸ್ ಆಗಿಲ್ಲ. ಇದು ‘ಕಬ್ಜ’ ಚಿತ್ರಕ್ಕೆ ಸಹಕಾರಿ ಆಗಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Thu, 16 March 23