‘ಬಿಕಿನಿ, ಒಳಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುತ್ತಾರಾ?’: ಕೃತಿ ಸನನ್​ ವಿರುದ್ಧ ಕಂಗನಾ ಗರಂ

ಜಾಹೀರಾತಿನಲ್ಲಿ ಕೃತಿ ಸನನ್ ಅವರು ಧರಿಸಿದ ಬಟ್ಟೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ಸಹೋದರನಿಗೆ ರಾಖಿ ಕಟ್ಟುವಾಗ ಗ್ಲಾಮರಸ್ ಬಟ್ಟೆ ಧರಿಸಿದ್ದಕ್ಕೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದಕ್ಕೆ ಕೃತಿ ಸನನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

‘ಬಿಕಿನಿ, ಒಳಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುತ್ತಾರಾ?’: ಕೃತಿ ಸನನ್​ ವಿರುದ್ಧ ಕಂಗನಾ ಗರಂ
Kriti Sanon, Kangana Ranaut

Updated on: Aug 24, 2026 | 10:27 PM

ರಕ್ಷಾ ಬಂಧನ (Raksha Bandhan) ಹಬ್ಬದ ಅಂಗವಾಗಿ ನಟಿ ಕೃತಿ ಸನನ್ ಅಭಿನಯಿಸಿರುವ ಆಭರಣ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಜಾಹೀರಾತಿನಲ್ಲಿ ಕೃತಿ (Kriti Sanon) ಧರಿಸಿರುವ ಇಂಡೋ-ವೆಸ್ಟರ್ನ್ ಬ್ರಾಲೆಟ್ ಶೈಲಿಯ ಉಡುಪು ಸಾಂಪ್ರದಾಯಿಕ ಹಬ್ಬದ ಹಿನ್ನೆಲೆಗೆ ಸೂಕ್ತವಾಗಿಲ್ಲ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದಕ್ಕೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಕೂಡ ಧ್ವನಿಗೂಡಿಸಿದ್ದಾರೆ.

ಈ ಕುರಿತು ಸೋಮವಾರ (ಆಗಸ್ಟ್ 24) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಇಂದಿನ ಮಹಿಳೆಗೆ ಉಡುಪುಗಳ ಆಯ್ಕೆಯಲ್ಲಿ ಕೊರತೆಯಿಲ್ಲ. ಕಾಕ್ಟೇಲ್ ಡ್ರೆಸ್‌ಗಳಿಂದ ಹಿಡಿದು ಲೆಹೆಂಗಾ, ಜೀನ್ಸ್, ಸೀರೆ, ಬಿಕಿನಿ ಹಾಗೂ ಸಲ್ವಾರ್ ಕಮೀಜ್‌ವರೆಗೂ ಹಲವು ಉಡುಪುಗಳಿವೆ. ಹೀಗಿರುವಾಗ ನಿಮ್ಮ ಸಹೋದರನಿಗೆ ಬಿಕಿನಿ ಅಥವಾ ಒಳಉಡುಪಿನಲ್ಲಿ ರಾಖಿ ಕಟ್ಟಲು ಹೇಗೆ ಸಾಧ್ಯ? ನಿಮ್ಮ ಇತರ ಸ್ಟೈಲಿಂಗ್ ಆಯ್ಕೆಗಳು ಎಲ್ಲಿ ಹೋದವು? ಈ ಜಾಹೀರಾತು ಬೇಕೆಂದೇ ವಿಕೃತವಾಗಿ ಕಾಣುವಂತೆ ರೂಪಿಸಿದಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ನೆಟ್ಟಿಗರು ಈ ಜಾಹೀರಾತನ್ನು ಖಂಡಿಸಿದ್ದಾರೆ. ‘ಪೂಜಾ ತಟ್ಟೆ ಎಲ್ಲಿದೆ? ಸಹೋದರನ ಮುಂದೆ ಇಂತಹ ಉಡುಪು ಧರಿಸುವುದು ಸರಿನಾ?’ ಎಂದು ಕೆಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು ಬ್ರ್ಯಾಂಡ್ ಮತ್ತು ನಟಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟೀಕೆಗಳ ಕುರಿತು ಕೃತಿ ಸನನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಕೃತಿ ಸನನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕೃತಿ ಸನನ್ ಅವರ ಅಪ್ಪಟ ಅಭಿಮಾನಿಗಳು ನಟಿಯ ಪರವಾಗಿ ಕಮೆಂಟ್ ಮಾಡುತ್ತಿದ್ದಾರೆ. ‘ಯಾವುದೇ ಸಂದರ್ಭದಲ್ಲೂ ಯಾವ ರೀತಿ ಬಟ್ಟೆ ಧರಿಸಬೇಕು ಎಂಬ ಆಯ್ಕೆ ಮಹಿಳೆಗೆ ಇರುತ್ತದೆ. ಆ ವಿಚಾರದಲ್ಲಿ ನೈತಿಕ ಪೊಲೀಸ್​ಗಿರಿ ಮಾಡುವುದು ಸರಿಯಲ್ಲ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ನನ್ನ ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ’: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೃತಿ ಸನನ್ ಇತ್ತೀಚೆಗೆ ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೊತೆ ‘ಕಾಕ್ಟೇಲ್ 2’ ಸಿನಿಮಾದಲ್ಲಿ ಅಭಿನಯಿಸಿದ್ದರು. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಗಳಿಕೆ ಕಂಡಿದ್ದು, ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us