
ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನದ ‘ಜಿಎಸ್ಟಿ’ ಸಿನಿಮಾ (GST Movie) ಬಿಡುಗಡೆ ಸಜ್ಜಾಗಿದೆ. ಈ ಸಿನಿಮಾದ ‘ಚಮೇಲಿ ಚಲ್ ಚಲ್’ ಹಾಡು ಇತ್ತೀಚೆಗೆ ಬಿಡುಗಡೆ ಆಯಿತು. ಈ ಗೀತೆಯಲ್ಲಿ ನಟಿ ಸಂಹಿತಾ ವಿನ್ಯಾ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿ ಖ್ಯಾತಿ ಪಡೆದಿರುವ ಸಂಹಿತಾ ವಿನ್ಯಾ (Samhita Vinya) ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ‘ಜಿಎಸ್ಟಿ’ ಸಿನಿಮಾದ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ.
ಸಂದೇಶ್ ಪ್ರೊಡಕ್ಷನ್ ನಿರ್ಮಾಣದ, ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್ಟಿ’ ಸಿನಿಮಾದ ಈ ಹಾಡಿಗೆ ಚಂದನ್ ಶೆಟ್ಟಿ ಅವರು ಸಂಗೀತ ನೀಡಿದ್ದಾರೆ. ಮಾದಕ ನೃತ್ಯ ಪ್ರದರ್ಶನದ ಮೂಲಕ ಸಂಹಿತಾ ವಿನ್ಯಾ ಅವರು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ವಿಜಯ್ ಈಶ್ವರ್ ಅವರು ಈ ಹಾಡಿನ ಸಾಹಿತ್ಯ ರಚಿಸಿದ್ದಾರೆ. ಸೃಜನ್ ಲೋಕೇಶ್ ಜೊತೆಗೆ ಸಂಹಿತಾ ವಿನ್ಯಾ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಸಾಕಷ್ಟು ಸಿನಿಮಾಗಳಲ್ಲಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಈ ಮೊದಲು ಅವರ ಸಿನಿಮಾಗಳು ಬಿಡುಗಡೆ ಆದಾಗ ಚಿತ್ರಮಂದಿರಗಳು ಎದುರು ಅವರ ಕಟೌಟ್ ನಿಲ್ಲಿಸಲಾಗಿತ್ತು. ಸಂಹಿತಾ ವಿನ್ಯಾ ನಟಿಸಿರುವ ‘ಜಿಎಸ್ಟಿ’ ಸಿನಿಮಾ ನವೆಂಬರ್ 28ಕ್ಕೆ ಬಿಡುಗಡೆ ಆಗಲಿದೆ. ಇನ್ನೂ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’, ‘ಮೆಜೆಸ್ಟಿಕ್ 2’, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’ ಮುಂತಾದ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಅಮೃತಘಳಿಗೆ’, ‘ಲಂಗೋಟಿ ಮ್ಯಾನ್’, ‘ಯೂ ಆರ್ ಮೈ ಹೀರೋ’ ಸಿನಿಮಾಗಳಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ‘ಹಾಲು ತುಪ್ಪ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: ಭಯಾನಕ ಪೋಸ್ಟರ್ನಿಂದ ಗಮನ ಸೆಳೆದ ‘ಯೂ ಆರ್ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ
‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’, ‘ವಿಷ್ಣು ಸರ್ಕಲ್’, ‘ನಸಾಬ್’ ಸೇರಿದಂತೆ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಸಂಹಿತಾ ವಿನ್ಯಾ ಅವರು ನಿಭಾಯಿಸಿದ್ದಾರೆ. ‘ಹಿಡನ್ ಕ್ಯಾಮೆರಾ’ ಸಿನಿಮಾದಲ್ಲಿ ಕೂಡ ಸಂಹಿತಾ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ‘ಮಿಕ್ಸಿಂಗ್ ಕಾದಲ್’ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.