KR Murali Krishna: ಕನ್ನಡ ಸಿನಿಮಾ ನಿರ್ದೇಶಕ ಕೆಆರ್​ ಮುರಳಿ ಕೃಷ್ಣ ನಿಧನ; ಬ್ರೈನ್​ ಟ್ಯೂಮರ್ ಸರ್ಜರಿ ಬಳಿಕ ಹೃದಯಾಘಾತ

| Updated By: ಮದನ್​ ಕುಮಾರ್​

Updated on: Nov 15, 2022 | 9:31 AM

KR Murali Krishna Death: ನಿರ್ದೇಶಕ, ನಿರ್ಮಾಪಕ ಕೆಆರ್​ ಮುರಳಿ ಕೃಷ್ಣ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

KR Murali Krishna: ಕನ್ನಡ ಸಿನಿಮಾ ನಿರ್ದೇಶಕ ಕೆಆರ್​ ಮುರಳಿ ಕೃಷ್ಣ ನಿಧನ; ಬ್ರೈನ್​ ಟ್ಯೂಮರ್ ಸರ್ಜರಿ ಬಳಿಕ ಹೃದಯಾಘಾತ
ನಿರ್ದೇಶಕ ಕೆ.ಆರ್. ಮುರಳಿ ಕೃಷ್ಣ
Follow us on

ಸಿನಿಮಾ ನಿರ್ದೇಶಕ ಕೆ.ಆರ್​. ಮುರಳಿ ಕೃಷ್ಣ (KR Murali Krishna) ಅವರು ನಿಧನರಾಗಿದ್ದಾರೆ. ಸೋಮವಾರ (ನ.14) ರಾತ್ರಿ 7.30ರ ಸುಮಾರಿಗೆ ಅವರು ವಿಧಿವಶರಾದರು. ಕನ್ನಡದ ‘ಗರ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ, ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಅವರು ಅನಾರೋಗ್ಯ ಮತ್ತು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಕೆ.ಆರ್​. ಮುರಳಿ ಕೃಷ್ಣ ಅವರಿಗೆ ಬ್ರೈನ್​ ಟ್ಯೂಮರ್​ (Brain Tumor) ಆಗಿತ್ತು. ಅದರ ಸಲುವಾಗಿ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಅವರಿಗೆ ಹೃದಯಾಘಾತ (Heart Attack) ಸಂಭವಿಸಿದ ಪರಿಣಾಮವಾಗಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಅನೇಕರು ಪ್ರಾರ್ಥಿಸಿದ್ದಾರೆ.

(ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…)

Published On - 9:31 am, Tue, 15 November 22