ಬಹುಭಾಷಾ ನಟಿ ಮಹಾಲಕ್ಷ್ಮಿ (Kannada Actress Mahalakshmi) ಅವರು ಒಂದು ಕಾಲದಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಅವರು ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರ ಉಳಿದರು. ಅವರ ಜೀವನದ ಬಗ್ಗೆ ಅನೇಕ ಗಾಸಿಪ್ಗಳು ಹಬ್ಬಿದ್ದವು. ಈಗ ಅವರು ನಟನೆಗೆ ಕಮ್ಬ್ಯಾಕ್ ಮಾಡಿದ್ದಾರೆ. ಅವರು ನಟಿಸಿರುವ ‘ಟಿಆರ್ಪಿ ರಾಮ’ ಸಿನಿಮಾ (TRP Rama Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಾಯಿತು. ಈ ವೇಳೆ ಮಹಾಲಕ್ಷ್ಮಿ ಕೂಡ ಹಾಜರಿದ್ದರು. ಸಿನಿಮಾದ ಕಥೆ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಇದು ಅವರ ಕಮ್ಬ್ಯಾಕ್ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಮೂಡಿದೆ. ಆ ಬಗ್ಗೆ ಇಲ್ಲದೆ ಮಾಹಿತಿ..
‘ಎಲ್ಲ ಭಾಷೆಯ ಚಿತ್ರರಂಗದ ಹೀರೋಗಳ ಜತೆ ನಾನು ಸಿನಿಮಾ ಮಾಡಿದ್ದೇನೆ. ಪ್ರತಿಯೊಂದು ಕೂಡ ಟೀಮ್ ವರ್ಕ್. ಮನೆಯಲ್ಲಿ ನಾವು ಕೇವಲ ಲಾಫಿಂಗ್ ಬುದ್ಧ ಮೂರ್ತಿ ಇಟ್ಟುಕೊಂಡರೆ ಸಾಲದು. 3 ಕೋತಿ ನೆನಪು ಇದೆಯಲ್ಲವೇ? ಕೆಟ್ಟದನ್ನು ಕೇಳಬಾರದು, ನೋಡಬಾರದು ಮತ್ತು ಮಾಡಬಾರದು. ನಿಮ್ಮ ಮಕ್ಕಳಿಗೆ ಆ ಮಾತನ್ನು ನೆನಪಿಸಬೇಕು. ಆಗ ಅವರ ಬದುಕು ಚೆನ್ನಾಗಿ ಇರುತ್ತದೆ. ಆ ಪಾಠವನ್ನು ‘TRP ರಾಮ’ ಸಿನಿಮಾ ಹೇಳಿಕೊಡುತ್ತದೆ. ಇದರಲ್ಲಿ ಮನರಂಜನೆ ಮತ್ತು ಗುಣಮಟ್ಟ ಇದೆ’ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.
ಇದನ್ನೂ ಓದಿ: ನ.17ಕ್ಕೆ ‘ಮಂಗಳವಾರಂ’ ಬಿಡುಗಡೆ; ‘ಆರ್‌ಎಕ್ಸ್ 100’ ನಿರ್ದೇಶಕನ ಜತೆ ಮತ್ತೆ ಕೈ ಜೋಡಿಸಿದ ಪಾಯಲ್ ರಜಪೂತ್
‘TRP ರಾಮ’ ಸಿನಿಮಾಗೆ ರವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ. ಮಹಾಲಕ್ಷ್ಮಿ ಅವರ ಜೊತೆ ನಟಿಸುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ನಟಿ ಸ್ಪರ್ಶ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಅಂತಹ ಲೆಜೆಂಡರಿ ನಟಿ ಜೊತೆ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಕಥೆ ಕೇಳಿದಾಗ ಬಹಳ ಚೆನ್ನಾಗಿದೆ ಅನಿಸಿತು. ನಮ್ಮ ಸಣ್ಣಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ದುರಂತ ಆಗುತ್ತದೆ ಅನ್ನೋದು ಈ ಸಿನಿಮಾದ ಕಥೆ’ ಎಂದು ಸ್ಪರ್ಶ ಹೇಳಿದ್ದಾರೆ.
ಇದನ್ನೂ ಓದಿ: ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡಕ್ಕೆ ನಿರೂಪ್ ಭಂಡಾರಿ ಎಂಟ್ರಿ; ಸ್ವಾಗತ ಕೋರಿದ ದಿಗಂತ್
ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಸೆನ್ಸಾರ್ ಪ್ರಕ್ರಿಯೆ ಮುಗಿದ ಬಳಿಕ ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಸಿಗಲಿದೆ. ‘ಕಮರ್ಷಿಯಲ್ ಅಂಶಗಳ ಜೊತೆಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ಸಿನಿಮಾವನ್ನು ಮಾಡಿದ್ದೇವೆ. ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ನಿರ್ದೇಶಕ, ನಟ ರವಿಪ್ರಸಾದ್ ಹೇಳಿದ್ದಾರೆ. ಈ ಚಿತ್ರತಂಡಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಶುಭ ಕೋರಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.