‘ಕಾಂತಾರ: ಚಾಪ್ಟರ್ 1’ ಭಾರತದ ಕಲೆಕ್ಷನ್ 525 ಕೋಟಿ ರೂಪಾಯಿ; ಹಿಂದಿಯಲ್ಲೇ ಮೇಲುಗೈ

ರಿಷಬ್ ಶೆಟ್ಟಿ ನಟನೆಯ 'ಕಾಂತಾರ: ಚಾಪ್ಟರ್ 1' ಸಿನಿಮಾ 500 ಕೋಟಿಗೂ ಅಧಿಕ ಗಳಿಸಿ ದಾಖಲೆ ಸೃಷ್ಟಿಸಿದೆ. ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದು, ಪರಭಾಷಿಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ದೀಪಾವಳಿ ವಾರಾಂತ್ಯದಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.

‘ಕಾಂತಾರ: ಚಾಪ್ಟರ್ 1’ ಭಾರತದ ಕಲೆಕ್ಷನ್ 525 ಕೋಟಿ ರೂಪಾಯಿ; ಹಿಂದಿಯಲ್ಲೇ ಮೇಲುಗೈ
ಕಾಂತಾರ

Updated on: Oct 20, 2025 | 10:04 AM

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara: Chapter 1) ಕರ್ನಾಟಕ ಮಾತ್ರವಲ್ಲದೆ, ಪರಭಾಷೆಗಳಲ್ಲೂ ಅಬ್ಬರದ ಗಳಿಕೆ ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಭಾರತದಲ್ಲೇ 500 ಕೋಟಿ ರೂಪಾಯಿ ದಾಟಿದೆ. ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲೇ ಅಧಿಕ ಕಲೆಕ್ಷನ್ ಆಗಿದೆ ಎಂಬುದು ವಿಶೇಷ. ಹಿಂದಿ ಮಂದಿ ಕೂಡ ಈ ಚಿತ್ರವನನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಈ ಸಿನಿಮಾ ಈ ವಾರಾಂತ್ಯಕ್ಕೆ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಚಿತ್ರದ ಟ್ರೇಲರ್​ ಹಾಗೂ ಪೋಸ್ಟರ್​ಗಳು ಸಾಕಷ್ಟು ಗಮನ ಸೆಳೆದವು. ಚಿತ್ರ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. 18 ದಿನಗಳ ಲೆಕ್ಕಾಚಾರ ನೋಡಿದರೆ ಈ ಸಿನಿಮಾ ಬರೋಬ್ಬರಿ 525 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರ (ಅಕ್ಟೋಬರ್ 19) ಸಿನಿಮಾ 17.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ
‘ದೆವ್ವ ಬಿಡಿಸೋಕೆ ಬರ್ತಿದಾರೆ ಸುದೀಪ್’; ದೊಡ್ಡ ಸೂಚನೆ ಕೊಟ್ಟ ಕಲರ್ಸ್ ಕನ್ನಡ
ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಹಿಂದಿಯಲ್ಲೇ ಹೆಚ್ಚು ಕಲೆಕ್ಷನ್

‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಂದಿಯಲ್ಲೇ ಹೆಚ್ಚು ಗಳಿಕೆ ಮಾಡಿದೆ. 17 ದಿನಗಳಲ್ಲಿ ಈ ಸಿನಿಮಾ 506 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಕನ್ನಡದಲ್ಲಿ 160 ಕೋಟಿ ರೂಪಾಯಿ, ಹಿಂದಿಯಲ್ಲಿ 171 ಕೋಟಿ ರೂಪಾಯಿ ಅಷ್ಟು ಕಲೆಕ್ಷನ್ ಆಗಿದೆ. ತಮಿಳಿನಲ್ಲಿ 51 ಕೋಟಿ ರೂಪಾಯಿ, ತೆಲುಗಿನಲ್ಲಿ 83.5 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 39.75 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇದನ್ನೂ ಓದಿ: ‘ಕಾಂತಾರ’ ಕಲೆಕ್ಷನ್: ನಂಬರ್ 1 ಆಗಲು ಇಡಬೇಕಿರುವುದು ಕೆಲವೇ ಹೆಜ್ಜೆ

ದೀಪಾವಳಿ ಮೇಲೆ ನಿರೀಕ್ಷೆ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ದೀಪಾವಳಿ ಕಲೆಕ್ಷನ್ ಬಗ್ಗೆ ಕುತೂಹಲ ಇದೆ. ಈ ಚಿತ್ರ ಇಂದಿನಿಂದ (ಅಕ್ಟೋಬರ್ 20) ಮೂರು ದಿನಗಳ ಕಾಲ ಉತ್ತಮ ಗಳಿಕೆ ಮಾಡಿದರೆ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬ ಕುತೂಹಲ ಇದೆ. ಈ ಸಿನಿಮಾಗೆ ರಿಷಬ್ ಅವರ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.