‘ಕಾಂತಾರ’ ಸಾಧನೆ; ಎರಡು ವಿಭಾಗದಲ್ಲಿ ಆಸ್ಕರ್​ಗೆ ಅರ್ಹತೆ ಪಡೆದ ರಿಷಬ್ ಸಿನಿಮಾ  

Kantara For Oscar: ಸ್ಕರ್ ಸದಸ್ಯರು​ ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್​ಗೆ ಎಂಟ್ರಿ ಕೊಡಲಿದೆ. 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ. 

‘ಕಾಂತಾರ’ ಸಾಧನೆ; ಎರಡು ವಿಭಾಗದಲ್ಲಿ ಆಸ್ಕರ್​ಗೆ ಅರ್ಹತೆ ಪಡೆದ ರಿಷಬ್ ಸಿನಿಮಾ  
ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ
Edited By:

Updated on: Jan 10, 2023 | 12:19 PM

ರಿಷಬ್ ಶೆಟ್ಟಿ (Rishab Shetty) ನಟನೆಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಈಗ ಹೊಸ ಮೈಲಿಗಲ್ಲು ಸ್ಥಾಪಿಸುವ ಸೂಚನೆ ನೀಡಿದೆ. ಈ ಚಿತ್ರ ಈಗ ಆಸ್ಕರ್​ ರೇಸ್​​ಗೆ ಎಂಟ್ರಿ ಕೊಟ್ಟಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರಾ’ ಅರ್ಹತೆ ಸುತ್ತನ್ನು ಪಾಸ್ ಮಾಡಿದೆ. ಅಂದರೆ, ಆಸ್ಕರ್ ಸದಸ್ಯರು​ ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ (Kantara Movie) ಮುಖ್ಯ ನಾಮಿನೇಷನ್​ಗೆ ಎಂಟ್ರಿ ಕೊಡಲಿದೆ. 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ.

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಟ್ವೀಟ್ ಮಾಡಿದೆ. ‘ಕಾಂತಾರ ಸಿನಿಮಾ 2 ಆಸ್ಕರ್ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ’ ಎಂದು ಬರೆದುಕೊಳ್ಳಲಾಗಿದೆ. ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾ 100 ದಿನ ಪೂರೈಸಿತ್ತು. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತ್ತು. ಅದೇ ರೀತಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಆಸ್ಕರ್ ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಟಿವಿಯಲ್ಲಿ ಕಾಂತಾರ

ಟಿವಿಯಲ್ಲಿ ‘ಕಾಂತಾರ’ ಚಿತ್ರ ಯಾವಾಗ ಪ್ರಸಾರ ಆಗಲಿದೆ ಎಂಬ ಕುತೂಹಲ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಪ್ರಸಾರ ಕಾಣಲಿದೆ. ‘ಹೊಂಬಾಳೆ ಫಿಲ್ಮ್ಸ್​​’ ಬ್ಯಾನರ್​ ಅಡಿಯಲ್ಲಿ ಮೂಡಿಬಂದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯಾದ ಕಂಬಳ, ಭೂತಕೋಲ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:43 am, Tue, 10 January 23