AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿಯಲ್ಲಿ ‘ಕಾಂತಾರ’ಕ್ಕೆ ಭರ್ಜರಿ ಓಪನಿಂಗ್; ಸಲ್ಮಾನ್​ ಖಾನ್ ಚಿತ್ರದ ಕಲೆಕ್ಷನ್ ಹಿಂದಿಕ್ಕಿದ ರಿಷಬ್ ಸಿನಿಮಾ

ಕನ್ನಡ ಪ್ರೇಕ್ಷಕರಿಂದ ‘ಕಾಂತಾರ’ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಸ್ಯಾಂಡಲ್​​ವುಡ್ ಪ್ರೇಕ್ಷಕರ ವಿಮರ್ಶೆ ಕೇಳಿ ಬಾಲಿವುಡ್ ಮಂದಿಗೂ ಕುತೂಹಲ ಮೂಡಿತು. ಅಷ್ಟೇ ಅಲ್ಲ ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದ್ದು ಚಿತ್ರಕ್ಕೆ ಪ್ಲಸ್ ಆಯಿತು.

ಹಿಂದಿಯಲ್ಲಿ ‘ಕಾಂತಾರ’ಕ್ಕೆ ಭರ್ಜರಿ ಓಪನಿಂಗ್; ಸಲ್ಮಾನ್​ ಖಾನ್ ಚಿತ್ರದ ಕಲೆಕ್ಷನ್ ಹಿಂದಿಕ್ಕಿದ ರಿಷಬ್ ಸಿನಿಮಾ
ರಿಷಬ್-ಸಲ್ಮಾನ್
TV9 Web
| Edited By: |

Updated on:Oct 15, 2022 | 6:18 PM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆಗಿ ಅಬ್ಬರಿಸಿದೆ. ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ನೋಡಿ ಈ ಚಿತ್ರವನ್ನು ಡಬ್ ಮಾಡಿ ಇತರ ಭಾಷೆಯಲ್ಲೂ ರಿಲೀಸ್ ಮಾಡಲು ಒತ್ತಾಯ ಕೇಳಿ ಬಂತು. ಹೀಗಾಗಿ, ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡುವ ಕೋರಿಕೆ ಬಂತು. ಅಕ್ಟೋಬರ್ 14ರಂದು ಸಿನಿಮಾ ಹಿಂದಿಯಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ಹಿಂದಿ ಪ್ರೇಕ್ಷಕರಿಂದ ಮೆಚ್ಚುಗೆ ಕೇಳಿ ಬಂದಿದೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ‘ಕಾಂತಾರ’ ಸಿನಿಮಾ (Kantara Movie) ಬಾಲಿವುಡ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ವೀಕೆಂಡ್​ನಲ್ಲಿ ಸಿನಿಮಾದ ಕಮಾಯಿ ಹೆಚ್ಚುವ ನಿರೀಕ್ಷೆ ಇದೆ.

ಕನ್ನಡ ಪ್ರೇಕ್ಷಕರಿಂದ ‘ಕಾಂತಾರ’ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಸ್ಯಾಂಡಲ್​​ವುಡ್ ಪ್ರೇಕ್ಷಕರ ವಿಮರ್ಶೆ ಕೇಳಿ ಬಾಲಿವುಡ್ ಮಂದಿಗೂ ಕುತೂಹಲ ಮೂಡಿತು. ಅಷ್ಟೇ ಅಲ್ಲ ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದ್ದು ಚಿತ್ರಕ್ಕೆ ಪ್ಲಸ್ ಆಯಿತು. ಈ ಎಲ್ಲಾ ಕಾರಣದಿಂದ ಹಿಂದಿಗೆ ಡಬ್ ಆಗಿ ತೆರೆಕಂಡ ಚಿತ್ರವನ್ನು ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಹೀಗಾಗಿ ಮೊದಲ ದಿನ ಈ ಸಿನಿಮಾ ಹಿಂದಿ ವರ್ಷನ್​​ನಲ್ಲಿ 1.27-1.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ ‘ಗಾಡ್​ಫಾದರ್​’ ಹಾಗೂ ಮಾಧವನ್​ ನಟನೆಯ ‘ರಾಕೆಟ್ರಿ’ ಚಿತ್ರಗಳ ಮೊದಲ ದಿನದ ಕಲೆಕ್ಷನ್​​ಗೆ ಹೋಲಿಸಿದರೆ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.

ಇದನ್ನೂ ಓದಿ
Image
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?
Image
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ

‘ಗಾಡ್​ಫಾದರ್​’ ಸಿನಿಮಾ ಆರು ದಿನಕ್ಕೆ ಹಿಂದಿಯಲ್ಲಿ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಲ್ಮಾನ್ ಖಾನ್ ನಟಿಸಿದ ಹೊರತಾಗಿಯೂ ಚಿತ್ರಕ್ಕೆ ಹಿಂದಿಯಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗಿಲ್ಲ. ‘ಕಾಂತಾರ’ ಸಿನಿಮಾ ಇಂದು (ಅಕ್ಟೋಬರ್ 15) ಹಾಗೂ ಭಾನುವಾರ (ಅಕ್ಟೋಬರ್ 16) ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ‘ಕಾಂತಾರ’ ನೋಡಿದ ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಮುಂದಿನ ವಾರದ ವೇಳೆಗೆ ಚಿತ್ರದ ಗಳಿಕೆ ಹೆಚ್ಚುತ್ತಾ ಹೋಗಬಹುದು.

ಇದನ್ನೂ ಓದಿ: Kantara Movie: ಬಾಲಿವುಡ್​ನಲ್ಲೂ ಧೂಳೆಬ್ಬಿಸುತ್ತಿರುವ ಕಾಂತಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಚಿತ್ರತಂಡ

‘ಕೆಜಿಎಫ್ 2’ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿತ್ತು. ಈಗ ಅದೇ ನಿರ್ಮಾಣ ಸಂಸ್ಥೆ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದೆ. ಈ ಕಾರಣಕ್ಕೂ ಬಾಲಿವುಡ್ ಮಂದಿಗೆ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಹಿಂದಿ ಬೆಲ್ಟ್​ನಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಖ್ಯಾತ ಯೂಟ್ಯೂಬರ್ ರಿಷಬ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರು.

Published On - 3:44 pm, Sat, 15 October 22

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ