ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪಾಲಿಗೆ ಇಂದು (ಅಕ್ಟೋಬರ್ 8) ಬಹಳ ವಿಶೇಷವಾದ ದಿನ. ಯಾಕೆಂದರೆ, ಇಂದು ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಪತ್ನಿ ಸಮೇತರಾಗಿ ದೆಹಲಿಗೆ ತೆರಳಿದ ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಖುಷಿಪಟ್ಟಿದ್ದಾರೆ. ವಿಶೇಷ ಏನೆಂದರೆ, ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪಂಚೆ ಧರಿಸಿ ಹೋಗಿದ್ದರು. ದಕ್ಷಿಣ ಭಾರತದ ಹೆಮ್ಮೆಯ ದಿರಿಸಿನಲ್ಲಿ ಅವರು ಎಲ್ಲರ ಗಮನ ಸೆಳೆದರು.
ರಿಷಬ್ ಶೆಟ್ಟಿ ಅವರು ನಮ್ಮ ನೆಲದ ಸೊಗಡಿಗೆ ಹೆಚ್ಚು ಬೆಲೆ ನೀಡುತ್ತಾರೆ. ಅವರು ಸಿನಿಮಾಗಳಲ್ಲೂ ಅದು ಎದ್ದು ಕಾಣುತ್ತದೆ. ‘ಕಾಂತರ’ ಸಿನಿಮಾದ ಮೂಲಕ ಅವರು ದೇಸಿ ಕಹಾನಿಯನ್ನು ಹೇಳಿದ್ದರು. ಆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅವರ ನಟನೆಯನ್ನು ನೋಡಿ ಪ್ರೇಕ್ಷಕರು ಫಿದಾ ಆದರು. ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆದರು. ಎಷ್ಟೇ ಫೇಮ್ ಸಿಕ್ಕರೂ ಕೂಡ ಅವರು ನೆಲೆದ ಸೊಗಡನ್ನು ಮರೆತಿಲ್ಲ.
#WATCH | 70th National Film Awards | Rishab Shetty awarded the Best Actor in Leading Role for his performance in the movie ‘Kantara’
(Video source: DD News/YouTube) pic.twitter.com/YMStTzDyDz
— ANI (@ANI) October 8, 2024
ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳಿಗೆ ಪಂಚೆ ಧರಿಸಿ ಹೋಗಿದ್ದರು. ಸಾಮಾನ್ಯವಾಗಿ ಕಲಾವಿದರು ಅವಾರ್ಡ್ ಫಂಕ್ಷನ್ಗಳಿಗೆ ಹೋಗುವಾಗ ಸೂಟು-ಬೂಟು ಧರಿಸುತ್ತಿದ್ದರು. ಆದರೆ ಕೆಲವು ನಟರು ಅಪ್ಪಟ ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿ ರಿಷಬ್ ಶೆಟ್ಟಿ ಕೂಡ ಇದ್ದಾರೆ. ಪಂಚೆ ಧರಿಸಿ ಅವರು ವೇದಿಕೆ ಏರಿದ್ದಾರೆ.
ಇದನ್ನೂ ಓದಿ: ಜೂ.ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ಗೆ ಹುಟ್ಟೂರು ಪರಿಚಯಿಸಿದ ರಿಷಬ್ ಶೆಟ್ಟಿ
2022ರಲ್ಲಿ ‘ಕಾಂತಾರ’ ಸಿನಿಮಾ ತೆರೆಕಂಡಿತು. ‘ಹೊಂಬಾಳೆ ಫಿಲ್ಸ್’ ಮೂಲಕ ನಿರ್ಮಾಣ ಆದ ಈ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಭೂತಕೋಲದ ಕಥೆ ಇರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶಕನಕ್ಕೆ ಫ್ಯಾನ್ಸ್ ಫಿದಾ ಆದರು. ಕನ್ನಡ ಮಾತ್ರವಲ್ಲೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಈ ಸಿನಿಮಾ ಸೂಪರ್ ಹಿಟ್ ಆಯಿತು. ನ್ಯಾಷನಲ್ ಅವಾರ್ಡ್ ಪಡೆದ ರಿಷಬ್ ಶೆಟ್ಟಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.