ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​

|

Updated on: May 01, 2024 | 10:07 PM

ಅಭಿಮಾನಿಗಳು ಕಾರ್ತಿಕ್​ ಜಯರಾಮ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಗಮನ ಸೆಳೆಯುತ್ತಿದೆ. ‘ದಿ ವೀರ್​’ ಚಿತ್ರದಲ್ಲಿ ಜೆಕೆ ಅವರಿಗೆ ಬಾರ್​ಟೆಂಡರ್​ ಪಾತ್ರವಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರದ ಈ ಚಿತ್ರಕ್ಕೆ ಆರ್​. ಲೋಹಿತ್​ ನಾಯಕ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​
ಕಾರ್ತಿಕ್​ ಜಯರಾಮ್​
Follow us on

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್ (Karthik Jayaram)​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅವರು ಹೆಸರು ಮಾಡಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ‘ದಿ ವೀರ್​’ (The Veer) ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಆ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಅಭಿಮಾನಿಗಳು ‘ದಿ ವೀರ್’ ಸಿನಿಮಾದ ಮೋಷನ್​ ಪೋಸ್ಟರ್ ಹಂಚಿಕೊಂಡು ಜೆಕೆ (JK) ಅವರಿಗೆ ವಿಶ್​ ಮಾಡುತ್ತಿದ್ದಾರೆ.

‘ದಿ ವೀರ್​’ ಸಿನಿಮಾದಲ್ಲಿ ಕಾರ್ತಿಕ್​ ಜಯರಾಮ್​ ಅವರು ಬಾರ್​ಟೆಂಡರ್​ ಪಾತ್ರವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಈ ರೀತಿಯ ಪಾತ್ರ ಸಿಕ್ಕಿದೆ. ಆ ಕಾರಣದಿಂದ ಅವರ ಅಭಿಮಾನಿಗಳಲ್ಲಿ ಈ ಸಿನಿಮಾ ಮೇಲೆ ಕೌತುಕ ಮೂಡಿದೆ. ಪೋಸ್ಟರ್​ ನೋಡಿದ ಸಿನಿಪ್ರಿಯರು ಕಮೆಂಟ್​ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಹೊಸ ನಿರ್ದೇಶಕ ಆರ್​. ಲೋಹಿತ್​ ನಾಯಕ್​ ಅವರು ‘ದಿ ವೀರ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಜೆಕೆ ನಟಿಸಿದ್ದ ‘ಐರಾವನ್​’ ಸಿನಿಮಾದ ತಂಡದಲ್ಲೂ ಲೋಹಿತ್​ ಕೆಲಸ ಮಾಡಿದ್ದರು. ಈಗ ಅವರು ‘ದಿ ವೀರ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರೋಚಿತ್​ ಅವರು ಈ ಚಿತ್ರದಲ್ಲಿ ವಿಲನ್​ ಆಗಿದ್ದಾರೆ. ಮಂಜು ಪಾವಗಡ ಕೂಡ ನಟಿಸುತ್ತಿದ್ದಾರೆ. ಹೊಸ ನಟಿ ಪ್ರಣಿತಾ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: ‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಮಾರ್ಚ್​ 29ರಂದು ‘ದಿ ವೀರ್​’ ಸಿನಿಮಾ ಸೆಟ್ಟೇರಿತ್ತು. ಸಸ್ಪೆನ್ಸ್​ ಥ್ರಿಲ್ಲರ್​ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಸಮಾಜಕ್ಕೆ ಸಂದೇಶ ಕೂಡ ನೀಡಲಿದೆ ಎಂದು ‘ಟೌಮ್ಸ್​ ನೌ’ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್​ ಜಯರಾಮ್​ ಅವರು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಧ್ರುವ ಎಂ.ಬಿ. ಅವರು ಸಂಗೀತ ನೀಡುತ್ತಿದ್ದಾರೆ. ಮೋಷನ್​ ಪೋಸ್ಟರ್​ನಲ್ಲಿ ಅವರ ಕೆಲಸಕ್ಕೆ ಮೆಚ್ಚುಗೆ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.