ಹೊಂಬಾಳೆ ಫಿಲ್ಮ್ಸ್​ ಮುಂದಿನ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ?

| Updated By: ರಾಜೇಶ್ ದುಗ್ಗುಮನೆ

Updated on: Aug 13, 2022 | 6:30 AM

ಕೀರ್ತಿ ಸುರೇಶ್ ಅವರು ವಿಜಯ್ ಕಿರಗಂದೂರು ಒಡೆತನದ ‘ಹೊಂಬಾಳೆ ಫಿಲ್ಮ್ಸ್​’ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಈ ವಿಚಾರದ ಬಗ್ಗೆ ಕಾಲಿವುಡ್​ ಅಂಗಳದಲ್ಲಿ ಗುಸುಗುಸು ಹರಿದಾಡುತ್ತಿದೆ.

ಹೊಂಬಾಳೆ ಫಿಲ್ಮ್ಸ್​ ಮುಂದಿನ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ?
ಕೀರ್ತಿ ಸುರೇಶ್
Follow us on

ಕೀರ್ತಿ ಸುರೇಶ್ (Keerthy Suresh) ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತೆ ಎಂಬ ಖ್ಯಾತಿಯೂ ಅವರಿಗೆ ಇದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರಿಗೆ ಇತ್ತೀಚೆಗೆ ತೆರೆಗೆ ಬಂದ ‘ಸರ್ಕಾರು ವಾರಿ ಪಾಟ’ ಚಿತ್ರದಿಂದ ಗೆಲುವು ಸಿಕ್ಕಿದೆ. ಈಗ ಅವರು ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ಈಗ ದೊಡ್ಡ ನಿರ್ಮಾಣ ಸಂಸ್ಥೆ ಜತೆಗೆ ಕೀರ್ತಿ ಸುರೇಶ್ ಅವರು ಕೈ ಜೋಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಕೀರ್ತಿ ಸುರೇಶ್ ಅವರು ವಿಜಯ್ ಕಿರಗಂದೂರು ಒಡೆತನದ ‘ಹೊಂಬಾಳೆ ಫಿಲ್ಮ್ಸ್​’ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಈ ವಿಚಾರದ ಬಗ್ಗೆ ಕಾಲಿವುಡ್​ ಅಂಗಳದಲ್ಲಿ ಗುಸುಗುಸು ಹರಿದಾಡುತ್ತಿದೆ. ಈ ವಿಚಾರ ಕೇಳಿ ಕೀರ್ತಿ ಸುರೇಶ್ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಈ ವಿಚಾರ ನಿಜವಾಗಲಿ ಎಂದು ಕೋರಿಕೊಳ್ಳುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಕನ್ನಡದ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯಿಂದ ಪರಭಾಷೆಗಳಲ್ಲೂ ಚಿತ್ರಗಳು ನಿರ್ಮಾಣ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಿಗೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಆ ಪೈಕಿ ತಮಿಳಿನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸುಧಾ ಕೊಂಗರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಎನ್ನಲಾಗುತ್ತಿದೆ.

ಇದನ್ನೂ ಓದಿ
Keerthy Suresh: ಸಾಂಪ್ರದಾಯಿಕ ಗೆಟಪ್​ನಲ್ಲಿ ಅಭಿಮಾನಿಗಳ ಮನಗೆದ್ದ ಕೀರ್ತಿ ಸುರೇಶ್​
ಸತತ ಸೋಲಿನಿಂದ ಕಂಗೆಟ್ಟಿದ್ದ ಕೀರ್ತಿ ಸುರೇಶ್​ಗೆ ಸಣ್ಣ ರಿಲೀಫ್; ಫೋಟೋಶೂಟ್​ನಲ್ಲಿ ಮಿಂಚಿದ ನಟಿ
‘ಕಲಾವತಿ..’ ಹಾಡಿನಿಂದ ಹೆಚ್ಚಿತು ಕೀರ್ತಿ ಸುರೇಶ್​ ಖದರ್​; ‘ಮಹಾನಟಿ’ಗೆ ಭರ್ಜರಿ ಡಿಮ್ಯಾಂಡ್​
ಯಾವ ಚಿತ್ರವೂ ಗೆಲ್ಲುತ್ತಿಲ್ಲ, ಆದ್ರೂ ಈ ನಟಿಗೆ ಸಿಕ್ತಿದೆ ಒಳ್ಳೆಯ ಆಫರ್​; ಇಲ್ಲಿದೆ ಕೀರ್ತಿ ಸುರೇಶ್​ ಸೀಕ್ರೇಟ್​

ಸುಧಾ ಕೊಂಗರ ಅವರು ಈ ಮೊದಲು ‘ಸೂರರೈ ಪೋಟ್ರು’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಮೊದಲು ಕೀರ್ತಿ ಸುರೇಶ್ ಕೂಡ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈಗ ಸುಧಾ ಹಾಗೂ ಕೀರ್ತಿ ಒಂದೇ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ವಿಶೇಷವಾದವರ ಜತೆ ವಿಮಾನಯಾನ ಮಾಡಿದ ನಟಿ ಕೀರ್ತಿ ಸುರೇಶ್

​ ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಮೂಲಕ ಫಹಾದ್ ಫಾಸಿಲ್​ಗೆ ಬರ್ತ್​ಡೇ ವಿಶ್ ಮಾಡಲಾಗಿತ್ತು. ಈ ಮೂಲಕ ಅವರ ಜತೆ ಸಿನಿಮಾ ಮಾಡುವ ವಿಚಾರವನ್ನು ಹೊಂಬಾಳೆ ಸಂಸ್ಥೆ ಅಧಿಕೃತ ಮಾಡಿತ್ತು. ಈ ಚಿತ್ರಕ್ಕೆ ಪವನ್ ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆಯೂ ಅಧಿಕೃತ ಅಪ್​ಡೇಟ್ ಪಡೆಯಲು ಫ್ಯಾನ್ಸ್ ಕಾದಿದ್ದಾರೆ.