‘ರವಿ ಬೋಪಣ್ಣ’, ‘ಗಾಳಿಪಟ 2’ ರಿಲೀಸ್​; ಕನ್ನಡದ ಸಿನಿ ಪ್ರೇಕ್ಷಕರಿಗೆ ಡಬಲ್​ ಧಮಾಕಾ

Gaalipata 2 | Ravi Bopanna: ‘ರವಿ ಬೋಪಣ್ಣ’ ಹಾಗೂ ‘ಗಾಳಿಪಟ 2’ ಸಿನಿಮಾಗಳು ಇಂದು (ಆಗಸ್ಟ್ 12) ರಾಜ್ಯಾದ್ಯಂತ ಬಿಡುಗಡೆ ಆಗಿವೆ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಕಾರಣದಿಂದ ನಿರೀಕ್ಷೆ ಮೂಡಿಸಿವೆ.

‘ರವಿ ಬೋಪಣ್ಣ’, ‘ಗಾಳಿಪಟ 2’ ರಿಲೀಸ್​; ಕನ್ನಡದ ಸಿನಿ ಪ್ರೇಕ್ಷಕರಿಗೆ ಡಬಲ್​ ಧಮಾಕಾ
ಗಣೇಶ್​, ರವಿಚಂದ್ರನ್​
Follow us
TV9 Web
| Updated By: ಮದನ್​ ಕುಮಾರ್​

Updated on:Aug 12, 2022 | 7:53 AM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ (Gaalipata 2) ಚಿತ್ರ ಇಂದು (ಆಗಸ್ಟ್​ 12) ರಿಲೀಸ್​ ಆಗಿದೆ. ಅದರ ಜೊತೆಗೆ ರವಿಚಂದ್ರನ್​ ಅಭಿನಯದ ‘ರವಿ ಬೋಪಣ್ಣ’ (Ravi Bopanna) ಸಿನಿಮಾ ಕೂಡ ತೆರೆ ಕಂಡಿದೆ. ಹಾಗಾಗಿ ಈ ವಾರ ಸಿನಿಪ್ರಿಯರಿಗೆ ಡಬಲ್​ ಧಮಾಕಾ. ಹಲವು ಕಾರಣದಿಂದ ಈ ಚಿತ್ರಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಗಾಳಿಪಟ 2’ ಚಿತ್ರಕ್ಕೆ ಯೋಗರಾಜ್​ ಭಟ್​ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್​ ಅವರ ನಿರ್ದೇಶನದಲ್ಲಿ ‘ರವಿ ಬೋಪಣ್ಣ’ ಸಿನಿಮಾ ಮೂಡಿಬಂದಿದೆ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಪ್ರಕಾರದಲ್ಲಿವೆ. ‘ಗೋಲ್ಡನ್​ ಸ್ಟಾರ್’​ ಗಣೇಶ್​ (Golden Star Ganesh) ಹಾಗೂ ರವಿಚಂದ್ರನ್​ ಅಭಿಮಾನಿಗಳು ಈ ಸಿನಿಮಾಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.

ಜನರ ಪಾಲಿಗೆ ‘ಗಾಳಿಪಟ’ ಸಿನಿಮಾ ಎಂದರೆ ಒಂದು ಎಮೋಷನ್​. ಈಗ ಆ ಚಿತ್ರದ ಎರಡನೇ ಪಾರ್ಟ್​ ಬಂದಿದೆ. ಗಣೇಶ್​ ಮತ್ತು ದಿಗಂತ್​ ಜೊತೆಗೆ ಈ ಬಾರಿ ಪಾತ್ರವರ್ಗದಲ್ಲಿ ಪವನ್​ ಕುಮಾರ್​ ಸೇರಿಕೊಂಡಿದ್ದಾರೆ. ನಾಯಕಿಯರ ಸ್ಥಾನದಲ್ಲಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್​ ಇದ್ದಾರೆ. ಪೋಷಕ ಪಾತ್ರದಲ್ಲಿ ಕಲಾವಿದ ದಂಡೇ ನೆರೆದಿದೆ. ಅನಂತ್​ ನಾಗ್​, ಸುಧಾ ಬೆಳವಾಡಿ, ರಂಗಾಯಣ ರಘು, ಶ್ರೀನಾಥ್​, ಪದ್ಮಜಾ ರಾವ್​, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹಾಡುಗಳ ಮೂಲಕ ‘ಗಾಳಿಪಟ 2’ ಸಿನಿಮಾ ಗಮನ ಸೆಳೆದಿದೆ. ‘ನೀನು ಬಗೆಹರಿದ ಹಾಡು..’, ‘ದೇವ್ಲೆ ದೇವ್ಲೆ..’, ‘ನಾವು ಬದುಕಿರಬಹುದು ಪ್ರಾಯಶಃ..’, ‘ನಾನಾಡದ ಮಾತೆಲ್ಲವ ಕದ್ದಾಲಿಸು..’ ಹಾಡುಗಳು ಜನರ ಮನ ಗೆದ್ದಿವೆ. ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರ ಬತ್ತಳಿಕೆಯಿಂದ ಬಂದ ಹಾಡುಗಳಿಂದಾಗಿ ಸಿನಿಮಾ ಮೇಲಿನ ಹೈಪ್​ ಹೆಚ್ಚಿದೆ. ರಮೇಶ್​ ರೆಡ್ಡಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ
Image
Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
Image
Gaalipata 2: ಅಕ್ಷಯ್​ ಕುಮಾರ್​ ಚಿತ್ರವನ್ನೇ ಮೀರಿಸಿದ ‘ಗಾಳಿಪಟ 2’; ಬುಕ್​ ಮೈ ಶೋನಲ್ಲಿ ಭರ್ಜರಿ ಹವಾ
Image
Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​
Image
‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

ರವಿಚಂದ್ರನ್​ ಸಿನಿಮಾ ಎಂದರೆ ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ರೇಲರ್​ ಮೂಲಕ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ವಿಭಿನ್ನ ಗೆಟಪ್​ನಲ್ಲಿ ‘ಕ್ರೇಜಿ ಸ್ಟಾರ್​’ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಪಾವನಾ ಗೌಡ, ಕಿಚ್ಚ ಸುದೀಪ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯೂಟ್ಯೂಬ್​ನಲ್ಲಿ ಈ ಸಿನಿಮಾದ ಟ್ರೇಲರ್​ 10 ಲಕ್ಷಕ್ಕಿಂತಲೂ ಅಧಿಕ ವೀವ್ಸ್​ ಪಡೆದಿದೆ. ಸೀತಾರಾಮ್​ ಜಿಎಸ್​ವಿ ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Fri, 12 August 22

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ