ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ

|

Updated on: May 01, 2024 | 8:46 PM

ನಿರ್ದೇಶಕ ಸಹದೇವ್​ ಕೆಲವಡಿ ಅವರು ‘ಕೆಂಡ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​’ನಲ್ಲಿ ಸ್ಪರ್ಧಿಸಿದ ಈ ಸಿನಿಮಾಗೆ ಪ್ರಶಸ್ತಿ ಬಂದಿದೆ. ಸಹದೇವ್​ ಕೆಲವಡಿ ಅವರು ‘ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್’ ಪಡೆದುಕೊಂಡಿದ್ದಾರೆ. ಜೂನ್​ ತಿಂಗಳಲ್ಲಿ ‘ಕೆಂಡ’ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ
ಸಹದೇವ್​ ಕೆಲವಡಿ
Follow us on

‘ಕೆಂಡ’ ಸಿನಿಮಾ (Kenda Movie) ಬಿಡುಗಡೆಗೂ ಮುನ್ನ ಅನೇಕ ವಿಚಾರಗಳಲ್ಲಿ ಸುದ್ದಿ ಆಗುತ್ತಿದೆ. ಈ ಚಿತ್ರಕ್ಕೆ ಸಹದೇವ್ ಕೆಲವಡಿ (Sahadev Kelavadi) ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಮೊದಲ ಪ್ರಯತ್ನದಲ್ಲಿಯೇ ಅವರಿಗೆ ಪ್ರಶಸ್ತಿಗಳು ಸಿಗುತ್ತಿವೆ. ಈ ಸಿನಿಮಾ ಇನ್ನೂ ರಿಲೀಸ್​ ಹಂತದಲ್ಲಿ ಇರುವಾಗಲೇ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​’ಗೆ (Dada Saheb Phalke Film Festival) ಪ್ರವೇಶ ಪಡೆದಿದ್ದು ಸುದ್ದಿ ಆಗಿತ್ತು. ಈಗ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಈ ಸಿನಿಮಾದ ನಿರ್ದೇಶಕನಕ್ಕೆ ಸಹದೇವ್​ ಕೆಲವಡಿ ಅವರಿಗೆ ‘ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್’ ಬಂದಿದೆ. ಆ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.

ನಿರ್ದೇಶಕ ಸಹದೇವ್ ಕೆಲವಡಿ ಅವರು ಮೊದಲ ಪ್ರಯತ್ನದಲ್ಲೇ ತಮ್ಮ ನಿರ್ದೇಶನದ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಸ್ಪರ್ಧೆ ನೀಡಿದ ‘ಕೆಂಡ’ ಸಿನಿಮಾಗೆ ಪ್ರಶಸ್ತಿ ಲಭಿಸಿದೆ. ಈ ಸುತ್ತಿನಲ್ಲಿ ಹಲವು ಭಾಷೆಗಳ ಸಿನಿಮಾಗಳ ನಡುವೆ ಕನ್ನಡದ ‘ಕೆಂಡ’ ಕೂಡ ಪೈಪೋಟಿ ನೀಡಿತ್ತು. ಅಂತಿಮವಾಗಿ ಈ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿಯನ್ನು ತಂದುಕೊಟ್ಟಿದೆ ಈ ಸಿನಿಮಾ.

ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ಗೆ ದೊಡ್ಡ ಮಟ್ಟದ ಮನ್ನಣೆ ಇದೆ. ಇದಕ್ಕೆ ಎಂಟ್ರಿ ಪಡೆಯುವುದೇ ದೊಡ್ಡ ಸಂಗತಿ ಎಂಬುದು ಚಿತ್ರತಂಡದ ಅಭಿಪ್ರಾಯ. ಪ್ರವೇಶ ಪಡೆದ ಬಳಿಕ ಸ್ಪರ್ಧೆ ನೀಡಿ ಪ್ರಶಸ್ತಿಯನ್ನು ಬಾಚಿಕೊಳ್ಳುವುದು ಸವಾಲಿನ ಕೆಲಸ. ಆ ಸಾಧನೆ ಮಾಡಿದ ಸಹದೇವ್ ಕೆಲವಡಿ ಅವರಿಗೆ ಚಿತ್ರತಂಡದ ಸದಸ್ಯರು ಅಭಿನಂದನೆ ತಿಳಿಸಿದ್ದಾರೆ. ಜೂನ್​ನಲ್ಲಿ ‘ಕೆಂಡ’ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಇತಿಹಾಸವೇನು? ದಾದಾ ಸಾಹೇಬ್ ಯಾರು?

ಈ ಸಿನಿಮಾವನ್ನು ‘ಅಮೇಯುಕ್ತಿ ಸ್ಟುಡಿಯೋಸ್’ ಬ್ಯಾನರಿ ಅಡಿಯಲ್ಲಿ ರೂಪಾ ರಾವ್ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ನಿರೀಕ್ಷೆ ಮೂಡಿಸಿದ ‘ಕೆಂಡ’ ಚಿತ್ರಕ್ಕೆ ರಿತ್ವಿಕ್ ಕಾಯ್ಕಿಣಿ ಅವರು ಸಂಗೀತ ನೀಡಿದ್ದಾರೆ. ಬಿ.ವಿ ಭರತ್, ವಿನೋದ್ ಸುಶೀಲಾ, ಪ್ರಣವ್ ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಶರತ್ ಗೌಡ, ಬಿಂದು ರಕ್ಷಿದಿ, ಸತೀಶ್ ಕುಮಾರ್, ಅರ್ಚನಾ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಪ್ರದೀಪ್ ನಾಯಕ್ ಅವರ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.