Yash: ಸೆಲೆಬ್ರಿಟಿ ಸ್ಟೈಲಿಸ್ಟ್​ ಆಲಿಮ್​ ಪಾರ್ಲರ್​ನಲ್ಲಿ ಯಶ್​; ರಾಕಿಂಗ್​ ಸ್ಟಾರ್​ ಲುಕ್​ ಬದಲಾಗಿ ಹೋಯ್ತು

ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಲಿಮ್​ ಹಕೀಮ್​ ಅವರ ಸಲೂನ್​ಗೆ ಯಶ್​ ತೆರಳಿದ್ದಾರೆ. ಈ ವೇಳೆ ಯಶ್​ ಅವರ ಗಡ್ಡ ಹಾಗೂ ಕೂದಲಿಗೆ ಸಖತ್​ ಮೇಕೋವರ್​ ಮಾಡಿದ್ದಾರೆ ಆಲಿಮ್​.

Yash: ಸೆಲೆಬ್ರಿಟಿ ಸ್ಟೈಲಿಸ್ಟ್​ ಆಲಿಮ್​ ಪಾರ್ಲರ್​ನಲ್ಲಿ ಯಶ್​; ರಾಕಿಂಗ್​ ಸ್ಟಾರ್​ ಲುಕ್​ ಬದಲಾಗಿ ಹೋಯ್ತು
Follow us
ರಾಜೇಶ್ ದುಗ್ಗುಮನೆ
|

Updated on: Apr 14, 2021 | 4:11 PM

ಕೆಜಿಎಫ್​ ಮೊದಲನೇ ಚಾಪ್ಟರ್​ನಲ್ಲಿ ಯಶ್​ ಸಂಪೂರ್ಣ ಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಅವರ ಸ್ಟೈಲ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಕೆಜಿಎಫ್​-2ನಲ್ಲೂ ಇದೇ ಲುಕ್​ ಮುಂದುವರಿಯಲಿದೆ. ಈಗಾಗಲೇ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಸಿನಿಮಾ ತಂಡ ತೊಡಗಿಕೊಂಡಿದೆ. ಹೀಗಿರುವಾಗಲೇ ಯಶ್​ ಲುಕ್​ ಬದಲಾಗಿ ಹೋಗಿದೆ. ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಲಿಮ್​ ಹಕೀಮ್​ ಅವರ ಸಲೂನ್​ಗೆ ಯಶ್​ ತೆರಳಿದ್ದಾರೆ. ಈ ವೇಳೆ ಯಶ್​ ಅವರ ಗಡ್ಡ ಹಾಗೂ ಕೂದಲಿಗೆ ಸಖತ್​ ಮೇಕೋವರ್​ ಮಾಡಿದ್ದಾರೆ ಆಲಿಮ್​. ಕಪ್ಪು ಟಿ-ಶರ್ಟ್​ ಹಾಕಿ ಕಾಣಿಸಿಕೊಂಡಿರುವ ಯಶ್​ ಗಡ್ಡಕ್ಕೆ ಸಣ್ಣ ಪ್ರಮಾಣದಲ್ಲಿ ಕತ್ತರಿ ಬಿದ್ದಿದೆ. ಅಲ್ಲದೆ, ಅವರ ಉದ್ದನೆಯ ಕೂದಲಿಗೂ ಬೇರೆಯದೇ ರೀತಿಯ ಲುಕ್​ ನೀಡಿದ್ದಾರೆ.

ಯಶ್​ ಜತೆಗೆ ಇರುವ ಫೋಟೋವನ್ನು ಆಲಿಮ್​ ಪೋಸ್ಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ಯಶ್​ ನನಗೆ ಪರಿಚಯ. ಅಂದಿನಿಂದ ಇಂದಿನವರೆಗೂ ಯಶ್​ ಬಳಿ ಇರುವ ವಿನಮ್ರತೆ ಕಡಿಮೆ ಆಗಿಲ್ಲ. ಇಂದಿನ ದಿನಗಳಲ್ಲಿ ಈ ರೀತಿಯ ವ್ಯಕ್ತಿ ಕಾಣೋದು ಅಪರೂಪ. ಅವರು ನಿಜಕ್ಕೂ ಸೂಪರ್​​ಸ್ಟಾರ್​ ಎಂದು ಆಲಿಮ್​ ಹೊಗಳಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾಕಷ್ಟು ಜನರು ಯಶ್​ ಲುಕ್​ ನೋಡಿ ತುಂಬಾನೇ ಖುಷಿಪಟ್ಟಿದ್ದಾರೆ. ಫ್ಯಾನ್​ ಪೇಜ್​ಗಳಲ್ಲೂ ಯಶ್​ ಅವರ ಹೊಸ ಲುಕ್​ ಫೋಟೊ ವೈರಲ್​ ಆಗಿದೆ.

View this post on Instagram

A post shared by Aalim Hakim (@aalimhakim)

ಇನ್ನು, ಕೆಜಿಎಫ್​-2 ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಜುಲೈ 16ರಂದು ಸಿನಿಮಾ ತೆರೆಗೆ ಬರುತ್ತಿದೆ. ಯಶ್​ಗೆ ಶ್ರೀನಿಧಿ ಶೆಟ್ಟಿ ನಾಯಕಿ. ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಸಿನಿಮಾದಲ್ಲಿ ಮುಖ್ಯ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನ ಸಿನಿಮಾಗಿದೆ.

ಇದನ್ನೂ ಓದಿ: Yash: ಹೀರೋಯಿಸಂ ಬದಿಗಿಟ್ಟು ರೈತನಾದ ಯಶ್​; ಫೋಟೋ ವೈರಲ್​

ನಿವೃತ್ತ ಬಸ್​ ಚಾಲಕರ ಪುತ್ರರಾದ ಯಶ್​ ಅವರೇ.. ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್​ಗೆ ಪತ್ರ ಬರೆದ ಸಾರಿಗೆ ನೌಕರರು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ