ಕೆಜಿಎಫ್ ಮೊದಲನೇ ಚಾಪ್ಟರ್ನಲ್ಲಿ ಯಶ್ ಸಂಪೂರ್ಣ ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಅವರ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಕೆಜಿಎಫ್-2ನಲ್ಲೂ ಇದೇ ಲುಕ್ ಮುಂದುವರಿಯಲಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ತೊಡಗಿಕೊಂಡಿದೆ. ಹೀಗಿರುವಾಗಲೇ ಯಶ್ ಲುಕ್ ಬದಲಾಗಿ ಹೋಗಿದೆ.
ಬಾಲಿವುಡ್ನ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ಸಲೂನ್ಗೆ ಯಶ್ ತೆರಳಿದ್ದಾರೆ. ಈ ವೇಳೆ ಯಶ್ ಅವರ ಗಡ್ಡ ಹಾಗೂ ಕೂದಲಿಗೆ ಸಖತ್ ಮೇಕೋವರ್ ಮಾಡಿದ್ದಾರೆ ಆಲಿಮ್. ಕಪ್ಪು ಟಿ-ಶರ್ಟ್ ಹಾಕಿ ಕಾಣಿಸಿಕೊಂಡಿರುವ ಯಶ್ ಗಡ್ಡಕ್ಕೆ ಸಣ್ಣ ಪ್ರಮಾಣದಲ್ಲಿ ಕತ್ತರಿ ಬಿದ್ದಿದೆ. ಅಲ್ಲದೆ, ಅವರ ಉದ್ದನೆಯ ಕೂದಲಿಗೂ ಬೇರೆಯದೇ ರೀತಿಯ ಲುಕ್ ನೀಡಿದ್ದಾರೆ.
ಯಶ್ ಜತೆಗೆ ಇರುವ ಫೋಟೋವನ್ನು ಆಲಿಮ್ ಪೋಸ್ಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ಯಶ್ ನನಗೆ ಪರಿಚಯ. ಅಂದಿನಿಂದ ಇಂದಿನವರೆಗೂ ಯಶ್ ಬಳಿ ಇರುವ ವಿನಮ್ರತೆ ಕಡಿಮೆ ಆಗಿಲ್ಲ. ಇಂದಿನ ದಿನಗಳಲ್ಲಿ ಈ ರೀತಿಯ ವ್ಯಕ್ತಿ ಕಾಣೋದು ಅಪರೂಪ. ಅವರು ನಿಜಕ್ಕೂ ಸೂಪರ್ಸ್ಟಾರ್ ಎಂದು ಆಲಿಮ್ ಹೊಗಳಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕಷ್ಟು ಜನರು ಯಶ್ ಲುಕ್ ನೋಡಿ ತುಂಬಾನೇ ಖುಷಿಪಟ್ಟಿದ್ದಾರೆ. ಫ್ಯಾನ್ ಪೇಜ್ಗಳಲ್ಲೂ ಯಶ್ ಅವರ ಹೊಸ ಲುಕ್ ಫೋಟೊ ವೈರಲ್ ಆಗಿದೆ.
ಇನ್ನು, ಕೆಜಿಎಫ್-2 ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಜುಲೈ 16ರಂದು ಸಿನಿಮಾ ತೆರೆಗೆ ಬರುತ್ತಿದೆ. ಯಶ್ಗೆ ಶ್ರೀನಿಧಿ ಶೆಟ್ಟಿ ನಾಯಕಿ. ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಸಿನಿಮಾದಲ್ಲಿ ಮುಖ್ಯ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಸಿನಿಮಾಗಿದೆ.
ಇದನ್ನೂ ಓದಿ: Yash: ಹೀರೋಯಿಸಂ ಬದಿಗಿಟ್ಟು ರೈತನಾದ ಯಶ್; ಫೋಟೋ ವೈರಲ್
ನಿವೃತ್ತ ಬಸ್ ಚಾಲಕರ ಪುತ್ರರಾದ ಯಶ್ ಅವರೇ.. ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು