ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ನಿರ್ದೇಶಕರ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್

| Updated By: ganapathi bhat

Updated on: Apr 06, 2022 | 9:12 PM

ರೆಬಲ್ ಸ್ಟಾರ್ ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ ಹಿರಿಯ ನಿರ್ದೇಶಕ ಎ.ಟಿ.ರಘು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಸಂಪರ್ಕಿಸಿರುವ ಸುದೀಪ್ ಸಹಾಯಹಸ್ತ ಚಾಚುವ ಭರವಸೆ ನೀಡಿದ್ದಾರೆ.

ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ನಿರ್ದೇಶಕರ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್
ಎ.ಟಿ. ರಘು ಹಾಗೂ ಸುದೀಪ್
Follow us on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ಎ.ಟಿ. ರಘು ಅವರ ಆರೋಗ್ಯ ವಿಚಾರಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ ಹಿರಿಯ ನಿರ್ದೇಶಕ ಎ.ಟಿ.ರಘು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಸಂಪರ್ಕಿಸಿರುವ ಸುದೀಪ್ ಸಹಾಯಹಸ್ತ ಚಾಚುವ ಭರವಸೆ ನೀಡಿದ್ದಾರೆ.

ನಿರ್ದೇಶಕ ಎ.ಟಿ.ರಘು, ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅಂಬರೀಶ್ ಜೊತೆ 20 ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ ಹಿರಿಯ ನಿರ್ದೇಶಕರಿಗೆ, ಈ ಮೊದಲು ಅಂಬರೀಶ್ ನೆರವು ನೀಡುತ್ತಿದ್ದರು. ಅಂಬರೀಶ್ ಬದಕಿರುವವರೆಗೂ ಎ.ಟಿ ರಘು ಅವರಿಗೆ ಸಹಾಯ ಮಾಡುತ್ತಿದ್ದರು. ಆದರೆ, ಅಂಬರೀಶ್ ನಿಧನದ ನಂತರ, ಚಿತ್ರರಂಗದಿಂದ ಎ.ಟಿ. ರಘು ಅವರಿಗೆ ಯಾವುದೇ ಬೆಂಬಲ ಸಿಕ್ಕಿರಲಿಲ್ಲ.

ಇದೀಗ, ಎ.ಟಿ. ರಘು ಅವರನ್ನು ಸಂಪರ್ಕಿಸಿರುವ ಕಿಚ್ಚ ಸುದೀಪ್, ರಘು ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಜೊತೆಗೆ ನಾನು ಇದ್ದೇನೆ ಎಂದು ಧೈರ್ಯ ತುಂಬಿದ್ದಾರೆ.

15 ವರ್ಷದ ಬಳಿಕ ’ಮೈ ಆಟೋಗ್ರಾಫ್’ ನೆನಪು ಹಂಚಿಕೊಂಡ ಕಿಚ್ಚ ಸುದೀಪ್

Published On - 3:57 pm, Mon, 11 January 21