AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಗಳ ಬಳಿಕ ಪ್ರಯೋಗಕ್ಕೆ ಮುಂದಾದ ಸುದೀಪ್: ಒಪ್ತಾರಾ ಅಭಿಮಾನಿಗಳು?

Kichcha Sudeep movie: ರೊಮ್ಯಾಂಟಿಕ್ ಹೀರೋ ಆಗಿ ಚಿತ್ರರಂಗಕ್ಕೆ ಬಂದ ಸುದೀಪ್ ಅವರನ್ನು ಆ ನಂತರ ನಿರ್ದೇಶಕರುಗಳು ತಮ್ಮ ಅನುಕೂಲಕ್ಕೆ, ಮಾರ್ಕೆಟ್​​ಗೆ ಅನುಗುಣವಾಗಿ ಆಕ್ಷನ್ ಹೀರೋ ಮಾಡಿದರು. ಅದರಲ್ಲೂ ಸುದೀಪ್ ಟಾಪ್ ಆಗಿದ್ದಾರೆ. ಇದೀಗ ಸುದೀಪ್ ಅವರು ಹಲವು ವರ್ಷಗಳ ಬಳಿಕ ಮತ್ತೆ ರಾಮ್-ಕಾಮ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಸಿನಿಮಾ ಬಗ್ಗೆ ಸ್ವತಃ ಸುದೀಪ್ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ವರ್ಷಗಳ ಬಳಿಕ ಪ್ರಯೋಗಕ್ಕೆ ಮುಂದಾದ ಸುದೀಪ್: ಒಪ್ತಾರಾ ಅಭಿಮಾನಿಗಳು?
Sudeep
ಮಂಜುನಾಥ ಸಿ.
|

Updated on: Dec 17, 2025 | 12:53 PM

Share

ಕಿಚ್ಚ ಸುದೀಪ್ (Kichcha Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಆಕ್ಷನ್ ತುಂಬಿರುವ ಟ್ರೈಲರ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸುದೀಪ್ ಅವರು ಒಂದರ ಹಿಂದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದು, ಸುದೀಪ್ ಅವರ ಹೈಟು, ಪರ್ಸನಾಲಿಟಿ, ಡೈಲಾಗ್​​ನ ಗತ್ತು ಆಕ್ಷನ್ ಸಿನಿಮಾಗಳಿಗೆ ಅದ್ಭುತವಾಗಿ ಸೂಟ್ ಆಗಿದೆ. ಆದರೆ ಸುದೀಪ್ ಚಿತ್ರರಂಗಕ್ಕೆ ಬಂದಿದ್ದು ಆಕ್ಷನ್ ಹೀರೋ ಆಗಿ ಅಲ್ಲ ಬದಲಿಗೆ ರೊಮ್ಯಾಂಟಿಕ್ ಹೀರೋ ಆಗಿ. ಆದರೆ ಕಳೆದ ಹಲವು ವರ್ಷಗಳಿಂದ ರೊಮ್ಯಾಂಟಿಕ್ ಸಿನಿಮಾಗಳತ್ತ ಮುಖವನ್ನೇ ಮಾಡಿಲ್ಲ ಸುದೀಪ್, ಆದರೆ ಈಗ ಅಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

‘ಸ್ಪರ್ಷ’ದಂಥಹಾ ಅದ್ಭುತ ಪ್ರೇಮಕತೆಯ ಮೂಲಕ ನಾಯಕ ನಟರಾದ ಸುದೀಪ್, ಆರಂಭದ ದಿನಗಳಲ್ಲಿ ಹೆಚ್ಚು ನಟಿಸಿದ್ದು ಪ್ರೇಮಕಥಾ ಸಿನಿಮಾಗಳಲ್ಲಿಯೇ. ಮಾತ್ರವಲ್ಲದೆ ಹ್ಯಾಂಡ್ಸಮ್ ಹೀರೋ ಆಗಿದ್ದ ಸುದೀಪ್ ಅವರನ್ನು ಹೆಚ್ಚು ಹೆಚ್ಚು ಪ್ರೇಮಕಥಾ ಸಿನಿಮಾಗಳಿಗೆ ನಿರ್ದೇಶಕರು ಬಳಸಿಕೊಂಡರು. ಸುದೀಪ್ ಅವರು ಹಲವು ಅದ್ಭುತ ಪ್ರೇಮಕಥಾ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ‘ಹುಚ್ಚ’, ‘ಚಂದು’, ‘ನಲ್ಲ’, ‘ಮೈ ಆಟೊಗ್ರಾಫ್’, ‘ಮುಸ್ಸಂಜೆ ಮಾತು’, ‘ಜಸ್ಟ್ ಮಾತ್ ಮಾತಲ್ಲಿ’ ಇನ್ನೂ ಹಲವಾರು ಪ್ರೇಮಕಥಾ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ.

ಆದರೆ ಕಳೆದ ಕೆಲವಾರು ವರ್ಷಗಳಿಂದ ಸುದೀಪ್ ಅವರು ಒಂದು ಅಪ್ಪಟ ರಾಮ್-ಕಾಮ್ ಸಿನಿಮಾನಲ್ಲಿ ನಟಿಸಿಯೇ ಇಲ್ಲ. ಆದರೆ ಈಗ ಸುದೀಪ್ ಮತ್ತೊಮ್ಮೆ ರಾಮ್-ಕಾಮ್ ಕತೆಯೊಂದಕ್ಕೆ ಕೈ ಹಾಕಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿರುವ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ‘ಬಹಳ ವರ್ಷಗಳ ನಂತರ ಒಂದು ಒಳ್ಳೆಯ ಪ್ರೇಮಕಥಾ ಸಿನಿಮಾ ಮಾಡಲು ಮುಂದಾಗಿದ್ದೀನಿ. ಕತೆ ಈಗಾಗಲೇ ಕೇಳಿದ್ದು, ಕತೆ ಅದ್ಭುತವಾಗಿದೆ. ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿ ಆಗಿದೆ, ಚಿತ್ರೀಕರಣ ಪ್ರಾರಂಭ ಆಗಲಿದೆ’ ಎಂದಿದ್ದಾರೆ. ಸಿನಿಮಾದ ಕತೆ ಒಪ್ಪಿರುವುದಾಗಿ ಹೇಳಿರುವ ಸುದೀಪ್, ಸಿನಿಮಾ ನಿರ್ದೇಶನ ಮಾಡುತ್ತಿರುವುದು ಯಾರು ಇತ್ಯಾದಿ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

ಸುದೀಪ್ ಅವರ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಸುದೀಪ್ ಅವರ ಈ ಹಿಂದಿನ ಸಿನಿಮಾ ‘ಮ್ಯಾಕ್ಸ್’ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ’ ಸಿನಿಮಾವನ್ನೂ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಫಿಲಮ್ಸ್ ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ಇತರೆ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ಮಲಯಾಳಂ ನಟ ಶೈನ್ ಟಾಮ್ ಚಾಕೊ, ತಮಿಳಿನ ಯೋಗಿ ಬಾಬು, ತೆಲುಗಿನ ವಿಕ್ರಂ ಚಂದ್ರ, ನಟಿಯರಾದ ರೋಷಿನಿ ಪ್ರಕಾಶ್, ನಿಶ್ವಿಕಾ ನಾಯ್ಡು ಅವರುಗಳು ನಟಿಸಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ