‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈರವ ಅವತಾರ ರಿವೀಲ್

Kichcha Sudeep movie: ‘ಕೆಡಿ’ ಸಿನಿಮಾದ ಹಾಡು ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತು. ಲೋಕಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆಗಳು ನಡೆದವು. ಸಿನಿಮಾದ ಹಾಡನ್ನು ಸಹ ಹಿಂಪಡೆಯಲಾಯ್ತು. ಇದು ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎಂಬ ಚರ್ಚೆಗಳು ನಡೆದವು. ಇದೀಗ ‘ಕೆಡಿ’ ಸಿನಿಮಾದಿಂದ ಹೊಸ ಅಪ್​​ಡೇಟ್ ಹೊರಬಿದ್ದಿದೆ. ‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಇದೀಗ ಅವರ ಪೋಸ್ಟರ್ ಒಂದನ್ನು ಹೊರಬಿಡಲಾಗಿದೆ.

‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈರವ ಅವತಾರ ರಿವೀಲ್
Kichcha Sudeep

Updated on: Mar 26, 2026 | 1:09 PM

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಹಾಡು ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತು. ಲೋಕಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆಗಳು ನಡೆದವು. ಸಿನಿಮಾದ ಹಾಡನ್ನು ಸಹ ಹಿಂಪಡೆಯಲಾಯ್ತು. ಇದು ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎಂಬ ಚರ್ಚೆಗಳು ನಡೆದವು. ಇದೀಗ ‘ಕೆಡಿ’ ಸಿನಿಮಾದಿಂದ ಹೊಸ ಅಪ್​​ಡೇಟ್ ಹೊರಬಿದ್ದಿದೆ. ‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಇದೀಗ ಅವರ ಪೋಸ್ಟರ್ ಒಂದನ್ನು ಹೊರಬಿಡಲಾಗಿದೆ.

ಸುದೀಪ್ ಅವರು ‘ಕೆಡಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಪಾತ್ರದ ಹೆಸರು ‘ಕಾಲಭೈರವ’. ‘ಕಾಲ ಭೈರವ’ನ ಪೋಸ್ಟರ್ ಅನ್ನು ಇದೀಗ ಚಿತ್ರತಂಡ ಬಿಡುಗಡೆ ಆಗಿದೆ. ವಾರಣಾಸಿಯ ಹಿನ್ನೆಲೆಯಲ್ಲಿ ಸುದೀಪ್ ಅವರು ರುದ್ರಾಕ್ಷಿ ಮಾಲೆ ಹಿಡಿದು ಸ್ಟೈಲ್ ಆಗಿ ನಿಂತಿರುವ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ‘ಕಾಲ ಭೈವರ’ ಈ ಹೆಸರೇ ಭಯ ಹುಟ್ಟಿಸುತ್ತದೆ’ ಎಂಬ ಟ್ಯಾಗ್ ಲೈನ್ ಅನ್ನು ಸಹ ನೀಡಲಾಗಿದೆ.

ಪ್ರೇಮ್ ಅವರ ‘ದಿ ವಿಲನ್’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದರು. ಇದೀಗ ‘ಕೆಡಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಸಿನಿಮಾನಲ್ಲಿ ಮೊದಲ ಬಾರಿಗೆ ಕಿಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಕೆಡಿ’ ಸಿನಿಮಾನಲ್ಲಿ ಹಲವು ಸ್ಟಾರ್ ನಟ, ನಟಿಯರು ಇದ್ದಾರೆ. ಇದೀಗ ಆ ತಂಡಕ್ಕೆ ಸುದೀಪ್ ಸಹ ಸೇರಿಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಅಭಿಜಿತ್, ರವಿಚಂದ್ರನ್ ಇನ್ನೂ ಹಲವರು ಸಿನಿಮಾದ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಸಾಗರದ ಮಾರಿಕಾಂಬಾ ಜಾತ್ರೆಗೆ ತಾರೆಯರ ಮೆರುಗು; ಧ್ರುವ ಸರ್ಜಾ, ರಚಿತಾ ರಾಮ್ ಭೇಟಿ

ಸುದೀಪ್ ಅವರು ತಮ್ಮ ಆಪ್ತರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಹೊಸಬರ ಸಿನಿಮಾಗಳಲ್ಲಿಯೂ ಸುದೀಪ್ ಅವರು ಕೆಲಸ ಮಾಡಿದ್ದಾರೆ. ಈ ಹಿಂದೆ ಆರ್ ಚಂದ್ರು ನಿರ್ದೇಶನ ಮಾಡಿದ್ದ ‘ಕಬ್ಜ’ ಸಿನಿಮಾನಲ್ಲಿಯೂ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಮುಖ್ಯವಾದ ಪಾತ್ರವಾಗಿತ್ತು. ಈಗ ‘ಕೆಡಿ’ ಸಿನಿಮಾನಲ್ಲಿಯೂ ಸಹ ಸುದೀಪ್ ಕಾಣಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಪ್ರೇಮ್. ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Thu, 26 March 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us